Bengaluru Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಟೀಚರ್ಸ್​ ಕಾಲೋನಿ ಸೇರಿದಂತೆ ಹಲವೆಡೆ ಇಂದು ಪವರ್ ಕಟ್

| Updated By: ಸುಷ್ಮಾ ಚಕ್ರೆ

Updated on: Aug 10, 2022 | 9:29 AM

Bangalore News: ಇಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Bengaluru Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಟೀಚರ್ಸ್​ ಕಾಲೋನಿ ಸೇರಿದಂತೆ ಹಲವೆಡೆ ಇಂದು ಪವರ್ ಕಟ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರು ಪಡೆದಿರುವ ಬೆಂಗಳೂರಿನ (Bangalore Power Cut) ಕೆಲವು ಭಾಗಗಳಲ್ಲಿ ಇಂದಿನಿಂದ (ಆಗಸ್ಟ್ 10) ಆಗಸ್ಟ್ 13ರವರೆಗೆ ಪವರ್ ಕಟ್ (Power Cut) ಇರಲಿದೆ. ಕೇಬಲ್​ಗಳ ಚಾರ್ಜಿಂಗ್, ಮರ ಕತ್ತರಿಸುವುದು, ಟ್ರಾನ್ಸ್​ಫಾರ್ಮರ್ ವರ್ಕ್ ಮುಂತಾದ ಬೆಸ್ಕಾಂನ (BESCOM) ನಿರ್ವಹಣಾ ಕಾಮಗಾರಿಗಳಿಂದಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಚ್​ಎಸ್​ಆರ್​ ಲೇಔಟ್, ಜಕ್ಕಸಂದ್ರ, ಸರ್ಜಾಪುರ ಮುಂತಾದ ಏರಿಯಾಗಳಲ್ಲಿ ಇಂದಿನಿಂದ 4 ದಿನ ಕರೆಂಟ್ ಇರುವುದಿಲ್ಲ.

ಇಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜಕ್ಕಸಂದ್ರ, ಎಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಲಾರ್‌ಪುರಿಯಾ ಗ್ರೀನೇಜ್ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇನ್ನೆರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಪವರ್ ಕಟ್

ಆಗಸ್ಟ್ 11ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತ, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಆಗಸ್ಟ್ 12 ಮತ್ತು 13ರಂದು ಎಲೆಕ್ಟ್ರಾನಿಕ್ ಸಿಟಿ 2ನೇ ಹಂತ, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ