ಕಾಂಗ್ರೆಸ್ ಗೆ ಸುಳ್ಳು ಸುದ್ದಿ ಹುಟ್ಟಿಸುವುದು ಹಳೆ ಖಯಾಲಿ, ಖಾಯಿಲೆ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ
ಸುಳ್ಳನ್ನ ಹುಟ್ಟಿಸಿ ಅದನ್ನೇ ಲೀಡ್ ಮಾಡೋದು ಅದರ ಜೊತೆ ಬದುಕೋದು ಕಾಂಗ್ರೆಸ್ ನ ಹಳೆ ಖಾಯಿಲೆ. ಬೊಮ್ಮಾಯಿ ನಮ್ಮ ನಾಯಕ. ಅವರ ನೇತೃತ್ವದಲ್ಲೆ ನಾವು ಚುನಾವಣೆ ಎದುರಿಸುತ್ತೇವೆ.
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಸರಣಿ ಟ್ವೀಟ್ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಗೆ(Congress) ಸುಳ್ಳು ಸುದ್ದಿ ಹುಟ್ಟಿಸುವುದು ಹಳೆ ಖಾಯಿಲೆ. 10 ತಿಂಗಳ ಹಿಂದೆಯೆ ಈ ಖಾಯಿಲೆಯನ್ನ ಕಾಂಗ್ರೆಸ್ ಅವರು ಶುರು ಮಾಡಿದ್ರು. ಹಳ್ಳಿ ಕಡೆ ಅಮಾವಾಸ್ಯೆ ಹುಣ್ಣಿಮೆಗೆ ಕೆಲವರು ಹೆಂಗೆಂಗೋ ಆಡ್ತಾರೆ ಅದೇ ರೀತಿ ಕಾಂಗ್ರೆಸ್ ಅವರು ಆಡ್ತಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಸುಳ್ಳನ್ನ ಹುಟ್ಟಿಸಿ ಅದನ್ನೇ ಲೀಡ್ ಮಾಡೋದು ಅದರ ಜೊತೆ ಬದುಕೋದು ಕಾಂಗ್ರೆಸ್ ನ ಹಳೆ ಖಾಯಿಲೆ. ಬೊಮ್ಮಾಯಿ ನಮ್ಮ ನಾಯಕ. ಅವರ ನೇತೃತ್ವದಲ್ಲೆ ನಾವು ಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ಗೆ ಇರುವ ಸಂಬಂಧ ಎಂತಾದು ಅಂತ ಗೊತ್ತಿದೆ. ಅದೇ ರೀತಿ ಎಲ್ಲರಿಗೂ ಇದೆ ಅಂತ ಅವರು ಭಾವಿಸುತ್ತಾರೆ. ಸಿದ್ದರಾಮಯ್ಯಗೆ ತನ್ನ ಜನ್ಮ ದಿನಾಂಕದ ಬಗ್ಗೆಯೆ ನಂಬಿಕೆಯಿಲ್ಲ. ಮೇಷ್ಟ್ರು ಬರೆದಿರೂದರ ಬಗ್ಗೆ ನಂಬಿಕೆಯಿಲ್ಲ. ಅಪ್ಪ ಅಮ್ಮ ಹೇಳಿಲ್ಲ ಅಂತಾರೆ. ಎಂಎಲ್ಎ ಗೆ ಕೊಟ್ಟ ಜನ್ಮದಿನಾಂಕದ ಬಗ್ಗೆಯು ಗೊತ್ತಿಲ್ಲ ಅಂತಾರೆ ಆದ್ರೆ 75ನೇ ಜನ್ಮದಿನ ಆಚರಣೆ ಮಾಡ್ತಾರೆ. ಪೂರ್ವ ನಿಯೋಜಿತ ಕಾರ್ಯಕ್ರಮವಾಗಿ ಬಂದು ಸಾರ್ವಜನಿಕರ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದ್ರು, ಅವರು ಕದ್ದು ಮುಚ್ಚಿ ಏನು ರಾಜ್ಯಕ್ಕೆ ಬಂದೋಗಿಲ್ಲ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿ.ಟಿ.ರವಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕಾಲೆಳೆಯುವ ಪ್ರಯತ್ನ ಮಾಡಿದೆ. ಅಮಿತ್ ಶಾ(Amit Shah) ಬಂದುಹೋದ ಬಳಿಕ ಮೋಡ ಕವಿದ ವಾತಾವರಣ. 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವುದು ಸನ್ನಿಹಿತವಾಗಿದೆ. ಬೊಮ್ಮಾಯಿ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ ಎಂದು ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ.
ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬೊಮ್ಮಾಯಿ ಅವರನ್ನ ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಸಿಎಂ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ ಎಂದು ಬಿಜೆಪಿಗೆ ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.