AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಡಿಸೆಂಬರ್ 4ರಿಂದ 8ವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ಯಾವೆಲ್ಲ ಪ್ರದೇಶದಲ್ಲಿ ಪವರ್​​ ಕಟ್​

ಬೆಂಗಳೂರಿನಲ್ಲಿ ಡಿಸೆಂಬರ್ 4 ರಿಂದ 8 ರವರೆಗೆ ಬೆಸ್ಕಾಂ ನಿಗದಿತ ವಿದ್ಯುತ್ ವ್ಯತ್ಯಯ ಘೋಷಿಸಿದೆ. ಮಳೆಗಾಲದಿಂದ ವಿಳಂಬವಾದ ದುರಸ್ತಿ ಕಾರ್ಯಕ್ಕಾಗಿ ಈ ಕಡಿತ ಅನಿವಾರ್ಯ. ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತಗೊಳ್ಳಲಿದ್ದು, ಹಲವು ಬೆಂಗಳೂರು ಪ್ರದೇಶಗಳು ಪ್ರಭಾವಿತವಾಗಲಿವೆ. ನಿವಾಸಿಗಳು ಮೊಬೈಲ್ ಚಾರ್ಜ್, ನೀರಿನ ಸಂಗ್ರಹದಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಬೆಸ್ಕಾಂ ಸೂಚಿಸಿದೆ.

Bengaluru Power Cut: ಡಿಸೆಂಬರ್ 4ರಿಂದ 8ವರೆಗೆ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ಯಾವೆಲ್ಲ ಪ್ರದೇಶದಲ್ಲಿ ಪವರ್​​ ಕಟ್​
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 04, 2025 | 10:55 AM

Share

ಬೆಂಗಳೂರು, ಡಿ.4: ಬೆಂಗಳೂರು (Bengaluru) ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಡಿಸೆಂಬರ್ 4 ರಿಂದ ಅಂದರೆ ಇಂದಿನಿಂದ ಐದು ದಿನಗಳವರೆಗೆ ನಿಗದಿತ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೇಳಿದೆ. ಮಳೆಗಾಲ ಮತ್ತು ಬೇಸಿಗೆ ತಿಂಗಳುಗಳಲ್ಲಿ ವಿಳಂಬ ಆಗಿರುವ ದುರಸ್ಥಿತಿ ಕಾರ್ಯವನ್ನು ಈಗ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ. ಡಿಸೆಂಬರ್ 8ರವರೆಗೆ ದುರಸ್ಥಿತಿ ಕಾರ್ಯ ನಡೆಯಲಿದೆ. ಒಂದು ವೇಳೆ ಸಮಯಕ್ಕಿಂತ ಮುಂಚಿತವಾಗಿ ಕೆಲಸಗಳು ಪೂರ್ಣಗೊಂಡರೆ ವಿದ್ಯುತ್​ ಸರಬರಾಜು ಮುಂದುವರಿಸಲಾಗುವುದು. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಪ್ರದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿದ್ಯುತ್ ಕಡಿತವು 1 ರಿಂದ 5 ಗಂಟೆಗಳವರೆಗೆ ಬದಲಾಗಬಹುದು ಎಂದು ಹೇಳಿದ್ದಾರೆ.

ಬೆಂಗಳೂರು ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು:

ಬೆಂಗಳೂರಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ನಿರೀಕ್ಷೆಯಿದೆ.ವೈಟ್‌ಫೀಲ್ಡ್, ಹೂಡಿ, ಐಟಿಪಿಎಲ್ ಮತ್ತು ಮಹದೇವಪುರ, ಶಿವಾಜಿನಗರ, ರಿಚ್‌ಮಂಡ್ ಟೌನ್ ಮತ್ತು ಎಂಜಿ ರಸ್ತೆಯ ಕೆಲವು ಭಾಗಗಳಲ್ಲಿ ಈ ವಿದ್ಯುತ್ ಕಡಿತಗೊಳ್ಳಲಿದೆ. ಇನ್ನು ಕೆಲವು ಕಡೆ ಕೇಬಲ್‌ಗಳು, ಸೇವಾ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಲು, ಫೀಡರ್ ಲೈನ್‌ಗಳನ್ನು ನವೀಕರಿಸಲು ಹಾಗೂ ನಗರದಲ್ಲಿ ವಿದ್ಯುತ್ ಲೋಡಿಂಗ್​ ಇರುವ ಕಾರಣದಿಂದ ವಿದ್ಯುತ್​​ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಜೆಪಿ ನಗರ, ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಪದ್ಮನಾಭನಗರ, ಅರೇಹಳ್ಳಿ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ನಾಗರಭಾವಿ, ಚಂದ್ರಾ ಲೇಔಟ್, ಮಾಗಡಿ ರಸ್ತೆಯ ಭಾಗಗಳು, ಹೆಬ್ಬಾಳ, ಸಂಜಯನಗರ, ಯಲಹಂಕ, ವಿದ್ಯಾರಣ್ಯಪುರ, ಆರ್‌ಟಿ ನಗರ, ಸಹಕಾರ ನಗರ, ವೈಟ್ ಫೀಲ್ಡ್, ಹೂಡಿ, ಕೆಆರ್ ಪುರಂ, ಐಟಿಪಿಎಲ್, ಮಹದೇವಪುರ, ವರ್ತೂರು, ಶಿವಾಜಿನಗರ, ಶಾಂತಿನಗರ, ರಿಚ್ಮಂಡ್ ಟೌನ್, ಲ್ಯಾಂಗ್ಫೋರ್ಡ್ ರಸ್ತೆ, ಎಂಜಿ ರಸ್ತೆಯ ಕೆಲವು ಭಾಗಗಳಲ್ಲಿ ವಿದ್ಯುತ್​​​​ ಕಡಿತವಾಗಲಿದೆ.

ಇದನ್ನೂ ಓದಿ: ಡ್ರಗ್ ಮಾಫಿಯಾ ವಿರುದ್ಧ ಬೆಂಗಳೂರು ಪೊಲೀಸರ ಸತತ ದಾಳಿ: 11 ತಿಂಗಳಲ್ಲಿ 146 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಬೆಸ್ಕಾಂ ಹೇಳಿದೆ. ವಿದ್ಯುತ್ ಕಡಿತದ ಸಮಯದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪವರ್ ಬ್ಯಾಂಕ್‌ಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದು. ಹಾಗೂ ನೀರಿನ ಸಂಗ್ರಹ ಕೂಡ ಮೊದಲೇ ಮಾಡಿಕೊಳ್ಳಬೇಕು. ಇನ್ನು ಗೀಸರ್‌ಗಳು, ವಾಷಿಂಗ್ ಮೆಷಿನ್‌ಗಳು ಅಥವಾ ಮೈಕ್ರೋವೇವ್‌ಗಳಂತಹ ಭಾರವಾದ ಉಪಕರಣಗಳನ್ನು ಬಳಸುವುದನ್ನು ತಪ್ಪಿಸುವುದು ಸೂಕ್ತ ಎಂದು ಎಚ್ಚರಿಯನ್ನು ನೀಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ