ಬೆಂಗಳೂರು, ಡಿಸೆಂಬರ್ 16: ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನ (Bengaluru) ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ಕೋರಮಂಗಲದಲ್ಲಿ ಮಂಗಳವಾರ (ಡಿಸೆಂಬರ್ 17) ಮತ್ತು ಬುಧವಾರ (ಡಿಸೆಂಬರ್ 18) ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.
ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್ ಆ್ಯಂಡ್ ಆಸ್ಪತ್ರೆ, ತಾವರೆಕೆರೆ, ಆಕ್ಸೆಂಚರ್, ಒರಕಲ್, ಕ್ರೈಸ್ಟ್ ಕಾಲೇಜು, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಅಕ್ಸಾ, ಆಸಿಸ್ ಭವನ್, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೂವ್ ರೋಡ್, ಬಾಲಾಜಿ ಥಿಯೆಟರ್, ಅಗ್ರಂ ವಿವೇಕಾನಗರ, ಸಣ್ಣೆನಗಹಳ್ಳಿ, ವೋನ್ನರ್, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾಟ್ರಸ್, ಲಿಂಡನ್, ಯಲಂಗುಂಟೆ ಪಾಳ್ಯಮ್, ಏರ್ ಫೋರ್ಸ್, ರೋಡ್, ರುದ್ರಪ್ಪ ಗಾರ್ಡನ್, ಎಂ.ಜಿ ಗಾರ್ಡನ್, ಆಸ್ತಿನ್ ಟೌನ್, ನೀಲಸಂದ್ರ, ಬಜಾರ್, ಆರ್ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಒಆರ್. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಟ್ ಆಗಲಿದೆ.
ಬೆಂಗಳೂರು ನಗರ:- ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014
ಕೋಲಾರ: 8277884015, ಚಿಕ್ಕಬಳ್ಳಾಪುರ : 8277884016, ಬಿಆರ್ಸಿ: 8277884017, ರಾಮನಗರ: 8277884018, ತುಮಕೂರು: 8277884019, ಚಿತ್ರದುರ್ಗ: 8277884020, ದಾವಣಗೆರೆ: 8277884021
ಇದನ್ನೂ ಓದಿ: ಕನಕಪುರ ರೋಡ್ ಜಂಕ್ಷನ್, ಕಾಮಾಕ್ಯ ಜಂಕ್ಷನ್ನಲ್ಲಿ ನಿರ್ಮಾಣವಾಗಲಿದೆ ಡಬಲ್ ಡೆಕ್ಕರ್ ಫ್ಲೈಓವರ್
ದೋಷಪೂರಿತ ವಿದ್ಯುತ್ ಮಾರ್ಗಗಳ ತ್ವರಿತ ಕಾರ್ಯನಿರ್ವಹಣೆ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ, ಬೆಂಗಳೂರು ನಗರದಾದ್ಯಂತ ಎಲ್ಲ 11 ಕೆ.ವಿ. ವಿದ್ಯುತ್ ಮಾರ್ಗಗಳನ್ನು ಸ್ಕಾಡಾ ಹಾಗೂ ಡಿಎಂಎಸ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತಗೊಳಿಸಲಾಗಿದೆ. ಪ್ರಸ್ತುತ ಈ ವ್ಯವಸ್ಥೆಯು 115 ವಿದ್ಯುತ್ ಉಪ ಸ್ಥಾವರಗಳು ಮತ್ತು 1,901 ವಿದ್ಯುತ್ ಫೀಡರ್‌ಗಳನ್ನು ಒಳಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ