ಬೆಂಗಳೂರು: ಮಳೆ ಕಡಿಮೆಯಾಗಿದ್ದರೂ ದಿನವೂ ಸಂಜೆ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಇರುವುದರಿಂದ ಬೆಂಗಳೂರಿನಲ್ಲಿ ಯಾವಾಗ ಬೇಕಿದ್ದರೂ ಮಳೆಯ (Bengaluru Rains) ಆರ್ಭಟ ಹೆಚ್ಚಾಗಬಹುದು. ಹೀಗಾಗಿ, ವಿದ್ಯುತ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಗಳು ನಡೆಯುವ ಕಾರಣದಿಂದ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಇಂದಿನಿಂದ (ಸೆ. 20) ಸೆ. 23ರವರೆಗೆ ವಿದ್ಯುತ್ ಪೂರೈಕೆಯಲ್ಲಿ (Bangalore Power Cut) ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಇಂದು (ಸೆಪ್ಟೆಂಬರ್ 20) ವಿಜಯನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆಯವರೆಗೆ, ಈಸ್ಟ್ ಸ್ಟೇಜ್ ತಿಮ್ಮೇನಹಳ್ಳಿ, ಎಂಸಿ ಲೇಔಟ್ ಭಾಗ, ಬಿನ್ನಿ ಲೇಔ, ಮಾರ್ನಳ್ಳಿ ವಿನಾಯಕ ಲೇಔಟ್ ಭಾಗ, ಪಿಸಿ ಇಂಡಸ್ಟ್ರಿಯಲ್ ಏರಿಯಾ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಇಂಡಿ ಏರಿಯಾ, ನಂಜಪ್ಪ ಇಂಡಿ. ಎಸ್ಟೇಟ್, ಸುನ್ನದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 5ನೇ ಬ್ಲಾಕ್, 5ನೇ ಬ್ಲಾಕ್, 7 ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11 ನೇ ಬ್ಲಾಕ್, KHB ಕಾಲೋನಿ, HVR ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ KHB ಕಾಲೋನಿ, KHB ಕಾಲೋನಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿಯ ಭಾಗದಲ್ಲಿ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಂಜೆಯವರೆಗೆ ಪವರ್ ಕಟ್
ಸೆಪ್ಟೆಂಬರ್ 21ರಂದು ಜಯನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗೇ, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ಸರ್ಕಲ್, ವಿದ್ಯಾಪೀಠ ಸರ್ಕಲ್, ಪ್ರಮೋದ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಅವಳಿಗುಪ್ಪೆ, ರಾಜವ್ವನಗರ ಅಪಾರ್ಟ್‌ಮೆಂಟ್, ಬಿಎಸ್‌ಕೆ 3ನೇ ಹಂತದಲ್ಲಿ ಪವರ್ ಕಟ್ ಇರಲಿದೆ.
ಸೆಪ್ಟಂಬರ್ 23ರಂದು ಕೆಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ 5 ಗಂಟೆಯವರೆಗೆ ಪವರ್ ಕಟ್ ಇರಲಿದೆ. ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, KAIDB 1 ನೇ ಹಂತ, KAIDB 2 ನೇ ಹಂತ, ISRO ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.