AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 9ರವರೆಗೆ ವಿದ್ಯುತ್ ವ್ಯತ್ಯಯ

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(KPTCL) ಬೆಂಗಳೂರಿನ ವಿವಿಧೆಡೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ  9ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಯುಂಟಾಗಲಿದೆ.

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 9ರವರೆಗೆ ವಿದ್ಯುತ್ ವ್ಯತ್ಯಯ
ವಿದ್ಯುತ್
ನಯನಾ ರಾಜೀವ್
|

Updated on: Feb 07, 2023 | 12:19 PM

Share

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(KPTCL) ಬೆಂಗಳೂರಿನ ವಿವಿಧೆಡೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ  9ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಯುಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನೀಡಿದ ಅಂಕಿಅಂಶಗಳ ಪ್ರಕಾರ, ಕೆಪಿಟಿಸಿಎಲ್ ಟ್ರಾನ್ಸ್‌ಫಾರ್ಮರ್‌ಗಳ ಕೂಲಂಕುಷ ಪರೀಕ್ಷೆ, ಕೇಬಲ್ ಹಾಕುವಿಕೆ, ರಿಲೇ ಪರೀಕ್ಷೆ, ಚಾರ್ಜಿಂಗ್, ನಿಯತಕಾಲಿಕ ಮತ್ತು ತ್ರೈಮಾಸಿಕ ನಿರ್ವಹಣೆ, ಅಸ್ತಿತ್ವದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆ ಮತ್ತು ಎತ್ತರವನ್ನು ಹೆಚ್ಚಿಸುವ ಕೆಲಸ ಮಾಡಲಿದೆ ಎಂದು ಸೂಚಿಸಿದೆ. ಸ್ಟ್ರಿಂಗ್ ಮತ್ತು ವಿಸ್ತರಣಾ ಕಾರ್ಯಗಳು ಕೂಡ ಇದರಲ್ಲಿ ಸೇರಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಫೆಬ್ರವರಿ 7, ಮಂಗಳವಾರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಕೈಗಾರಿಕಾ ಪ್ರದೇಶ, ಕುಮಾರಸ್ವಾಮಿ ಲೇಔಟ್, ವಿಟ್ಲ ನಗರ, ವಿಕ್ರಂ ನಗರ, ಇಲ್ಯಾಜ್ ನಗರ, ಯಲಚೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ವೀವರ್ಸ್ ಕಾಲೋನಿ, ಗೊಟ್ಟಿಗೆರೆ, ಮಂಟಪ, ಪೂರ್ವಂಕರ, ಎಎಂಸಿ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ರಾಷ್ಟ್ರೀಯ ಉದ್ಯಾನವನ, ಬಸವನಪುರ, ಬೈತಾರ, ಮೈಲಸಂದರಡ್ಡಿ, ಲಕ್ಷ್ಮೀಪುರ, ಶಿವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಮತ್ತಷ್ಟು ಓದಿ: Electricity Rate Hike: ವಿದ್ಯುತ್ ದರ ಏರಿಕೆಗೆ ಎಸ್ಕಾಂ ಪ್ರಸ್ತಾವನೆ: ಬೆಸ್ಕಾಂ ಹಾಗೂ ಇಂಧನ ಇಲಾಖೆ ನಡೆಗೆ FKCCI ವಿರೋಧ

ಫೆಬ್ರವರಿ 8, ಬುಧವಾರ ಮಾರನಹಳ್ಳಿ, ಚಿಕ್ಕೇನಹಳ್ಳಿ, ಮತ್ತು ಸುತ್ತಮುತ್ತಲಿನ ಗ್ರಾಮಗಳು, ಟೆಲಿಕಾಂ ಲೇಔಟ್, ಆರ್‌ಪಿಸಿ ಲೇಔಟ್, ಹಂಪಿ ನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ.

ಫೆಬ್ರವರಿ 9, ಗುರುವಾರ ಆನಗೋಡು, ಅತ್ತಿಗೆರೆ, ಮಾಯಕೊಂಡ, ಸಾಸಲುಹಳ್ಳ ಎಂಯುಎಸ್‌ಎಸ್, ಸಾಸ್ವಿಹಳ್ಳಿ, ನಿಲುವಂಜಿ, ಮುತ್ತಿಗಿ, ಬಡಾ, ಚಿಗಟೇರಿ, ಮಟ್ಟಿಹಳ್ಳಿ, ನಾಗರಕೊಂಡ, ಬೆಣ್ಣೆಹಳ್ಳಿ, ಹಗರಿಗುಡಿಹಳ್ಳಿ, ಗೌರಿಪುರ, ಹುಣಸೇನಹಳ್ಳಿ, ಜ.ಯೋ.ಜ.ನಗರದ ಎಲ್ಲಾ ಫೀಡರ್‌ಗಳಿಂದ ಎಲ್ಲಾ 11 ಕಿಲೋವೋಲ್ಟ್ (ಕೆವಿ) ಫೀಡರು ) ವಿಡಿ ಹಳ್ಳಿ, ದುಗಾವರ, ರೆಡ್ಡಿಹಳ್ಳಿ, ಸಿದ್ದಾಪುರ, ನನ್ನಿವಾಳ, ರಮೇಶ್ ನಗರ, ಪ್ರಾವಿಡೆಂಟ್ ಹೌಸಿಂಗ್ ಅಪಾರ್ಟ್‌ಮೆಂಟ್ ಹಂತ 1 ಮತ್ತು ಹಂತ 2 ರಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ