Bengaluru Power Cut: ಬೆಂಗಳೂರಿನ ಮಲ್ಲೇಶ್ವರ, ಹೆಬ್ಬಾಳ ಸೇರಿ ಕೆಲವು ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ
Bangalore News: ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಿರುವುದರಿಂದ ಇಂದು ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂ, ಹೆಬ್ಬಾಳ, ಜಾಲಹಳ್ಳಿ, ಚಂದಾಪುರ ವ್ಯಾಪ್ತಿಯ ಏರಿಯಾಗಳಲ್ಲಿ ಇಂದು (ಶನಿವಾರ) ಪವರ್ ಕಟ್ (Power Cut in Bangalore) ಇರಲಿದೆ. ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ, ಬೆಸ್ಕಾಂ (BESCOM) ಮತ್ತು ಕೆಪಿಟಿಸಿಎಲ್ (KPTCL) ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಿರುವುದರಿಂದ ಇಂದು ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿ ಪವರ್ ಕಟ್ ಇರಲಿದೆ.
ಇಂದು (ಅಕ್ಟೋಬರ್ 22) ರಾಮನಗರ, ಮಲ್ಲೇಶ್ವರಂ, ಹೆಬ್ಬಾಳ, ಜಾಲಹಳ್ಳಿ ಮತ್ತು ಚಂದಾಪುರ ವಿಭಾಗಗಳಲ್ಲಿ ಪವರ್ ಕಟ್ ಇರಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶ, ಆರ್ ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುಲ ರಸ್ತೆ, ಕರಿಯಪ್ಪ ಲೇಔಟ್, ಆಶಾರಾಮ್ ರಸ್ತೆ, 1ನೇ ಬ್ಲಾಕ್ ಆನಂದ ನಗರ, ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ 1ನೇ ಬ್ಲಾಕ್ ನಂದಿ ದುರ್ಗ, ಮಾರಪ್ಪ ಗಾರ್ಡನ್, ಜೆ ಸಿ ನಗರ, ಮಿಲ್ಲರ್ಸ್ ರಸ್ತೆ, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೆಟ್ಟಿಹಳ್ಳಿ, ನ್ಯೂ ಬಿಇಎಲ್ ರಸ್ತೆ, ದೇವಿನಗರ, ಎಂಎಸ್ ಆರ್ ಇಂಡಸ್ಟ್ರಿಯಲ್ ಎಸ್ಟೇಟ್ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು, ನಾಳೆ ಪವರ್ ಕಟ್
ಹಾಗೇ, ಸಂಜಯನಗರ, ಐಐಎಸ್‌ಸಿ ಎಲ್/ಒ, ಬಿಎಸ್‌ಎನ್‌ಎಲ್, ಇಸ್ರೋ, ಎಲ್ ಜಿ ಹಳ್ಳಿ, ಕೋಲ್ಟ್ಜೆ ಪಟೇಲ್ ಬಿ ಅಪಾರ್ಟ್‌ಮೆಂಟ್, ಆಧಾರ್ ಬಿಲ್ಡಿಂಗ್, ಚಿಕ್ಕಮಾರನಹಳ್ಳಿ, ಸೂರ್ಯನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಚಂದಾಪುರ, ಹಳೇ ಚಂದಾಪುರ, ನೇರಲೂರು, ಕೀರ್ತಿ ಲೇಔಟ್, ಮುತ್ತಾನಲ್ಲೂರು ಮತ್ತು ಚಂದಾಪುರದ ಸುತ್ತಮುತ್ತ, ಹೊಸಕಲ್ಲಹಳ್ಳಿ, ಹಳೇಕಲ್ಲಹಳ್ಳಿ, ಬಾಳೇನಹಳ್ಳಿ, ರಾಮಜೋಗಿಹಳ್ಳಿ, ಕುರಡಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕರೆಂಟ್ ಇರುವುದಿಲ್ಲ.