Bengaluru Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

|

Updated on: Nov 22, 2024 | 8:22 AM

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನವೆಂಬರ್ 22 ರಂದು ವಿದ್ಯುತ್ ಕಡಿತವಾಗಲಿದೆ. ಕೆಹೆಚ್‌ಬಿ ಮತ್ತು ಜಕ್ಕಸಂದ್ರ ಉಪಕೇಂದ್ರಗಳಲ್ಲಿ ನಿರ್ವಹಣಾ ಕಾರ್ಯಗಳಿಂದಾಗಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಶಿವನಹಳ್ಳಿ, ಕೋರಮಂಗಲ ಮುಂತಾದ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ 10 ರಿಂದ ವಿದ್ಯುತ್ ಕಟ್​ ಆಗಲಿದೆ.

Bengaluru Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನವೆಂಬರ್​ 22: ಬೆಂಗಳೂರು (Bengaluru) ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್​ ಕಡಿತವಾಗಲಿದೆ. ಕೆಹೆಚ್​ಬಿ ಮತ್ತು ಜಕ್ಕಸಂದ್ರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್​ ವ್ಯತ್ಯಯ

ಕೆಹೆಚ್​ಬಿ ಪ್ರದೇಶ: ಬೆಳಗ್ಗೆ 10.3000 ಮಧ್ಯಾಹ್ನ 3.30ರವರೆಗೆ ಶಿವನಹಳ್ಳಿ, ಶ್ರೀನಿಧಿ ಲೇಔಟ್, ಪುಟ್ಟೇನಹಳ್ಳಿ, ಪಾವನಿ, ಸಿಆರ್​ಪಿಎಫ್​, ರಾಮಗೊಂಡನಹಳ್ಳಿ, ಐವಿಆರ್​ಐ, ಶಿರ್ಕೆ ಅಪಾರ್ಟ್ ಮೆಂಟ್, ಬಿಎಂಎಸ್ ಹಾಸ್ಟೆಲ್, 5ನೇ ಹಂತ ಯಲಹಂಕ, ಹೊಸಪಟ್ಟಣ ಅನಂತಪುರ, ಪುಟ್ಟೇನಹಳ್ಳಿ ಪಾವನಿ, ಸುರದೇನಪುರ, ಇಸ್ರೋ ಲೇಔಟ್, ಆಕಾಶಿನಾ, ಬೆಸ್ಕಾಂ, ಎಲ್​​ಬಿಎಸ್ ನಗರ, ವೈಎನೈ, ಎ, ಬಿ, ಸೆಕ್ಟರ್, ಆವಲಹಳ್ಳಿ, ಎಸ್.ಎನ್.ಹಳ್ಳಿ, ರಾಜಾ ನುಕುಂಟೆ, ಹೊನ್ನೇನಹಳ್ಳಿ ನಾಗೇನಹಳ್ಳಿ, ಎ.ವಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲ್ಲಿಕುಂಟೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆಗುಂಡಿ ನಿರ್ವಹಣೆಗೆ ಬಿಬಿಎಂಪಿ ಹೊಸ ದಾಳ: ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ

ಜಕ್ಕಸಂದ್ರ ಪ್ರದೇಶಗಳು: ಬೆಳಗ್ಗೆ 10 ರಿಂದ ಸಂಜೆ5ಗಂಟೆಯವರೆಗೆ ಬಿಡಬ್ಲ್ಯುಎಸ್‌ಎಸ್‌ಬಿ, ಎಸ್‌ಟಿಪಿ, ಎಚ್. ಎಸ್.ಆರ್. 5ನೇ ಸೆಕ್ಟರ್, ಟೀಚರ್ಸ್ ಕಾಲೊನಿ, ವೆಂಕಟಾಪುರ, ಗ್ರೀನೇಜ್ ಅಪಾರ್ಟ್‌ಮೆಂಟ್, ಕೋರಮಂಗಲ, ಚಕ್ಕಸಂದ್ರ ಎಕ್ಸಟೆನ್ನನ್ 1ನೇ ಹಂತ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ