ಬೆಂಗಳೂರಿನ ಎಲ್ಲ ವರ್ಕ್​ಶಾಪ್​ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ: ರಾಮಲಿಂಗಾ ರೆಡ್ಡಿ

| Updated By: ವಿವೇಕ ಬಿರಾದಾರ

Updated on: Oct 30, 2023 | 5:07 PM

ಎಲ್ಲೇಲ್ಲಿ ಬೆಂಕಿ ಅನಾಹುತ ಆಗುವಂತಹ ಸಾಧ್ಯತೆ ಇರುತ್ತೇ, ಅಲ್ಲಿ ಎಚ್ಚರಿಕೆಯಿಂದ ಇರಬೇಕು. ಈ ಪ್ರಕರಣದಲ್ಲಿ ಮಾಲೀಕನ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪದೇ ಪದೇ ಅಗ್ನಿ ಅವಘಡಗಳು ಆಗುತ್ತಿವೆ. ವರ್ಕ್ ಶಾಪ್​ಗೆ ಲೈಸನ್ಸ್ ಬೇಕು. ವರ್ಕ್ ಶಾಪ್ ನಡೆಸುವವರು ನಿರ್ಲಕ್ಷ್ಯ ಮಾಡಿದ್ದಾರೆ. ತಪ್ಪು ಯಾರದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಬೆಂಗಳೂರಿನ ಎಲ್ಲ ವರ್ಕ್​ಶಾಪ್​ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ: ರಾಮಲಿಂಗಾ ರೆಡ್ಡಿ
ಸಚಿವ ರಾಮಲಿಂಗಾ ರೆಡ್ಡಿ
Follow us on

ಬೆಂಗಳೂರು ಅ.30: ನಗರದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್​ವಿ ಕೋಚ್ ವರ್ಕ್ಸ್​ನಲ್ಲಿ ಸಂಭವಿಸಿದ ಖಾಸಗಿ ಬಸ್ (Privet Bus)​​ ಅಗ್ನಿ ಅವಘಡ (Fire Accident) ಸ್ಥಳಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭೇಟಿ ನೀಡಿದರು. ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿ ಅವಘಡದಲ್ಲಿ ಸುಮಾರು 19 ಬಸ್​ಗಳು ಸುಟ್ಟು ಹೋಗಿವೆ. ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ವರ್ಕ್​ಶಾಪ್​ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಗರದ ಎಲ್ಲಾ ವರ್ಕ್​ಶಾಪ್​ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ ಎಂದರು.

ಎಲ್ಲೇಲ್ಲಿ ಬೆಂಕಿ ಅನಾಹುತ ಆಗುವಂತಹ ಸಾಧ್ಯತೆ ಇರುತ್ತೇ, ಅಲ್ಲಿ ಎಚ್ಚರಿಕೆಯಿಂದ ಇರಬೇಕು. ಈ ಪ್ರಕರಣದಲ್ಲಿ ಮಾಲೀಕನ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪದೇ ಪದೇ ಅಗ್ನಿ ಅವಘಡಗಳು ಆಗುತ್ತಿವೆ. ವರ್ಕ್ ಶಾಪ್​ಗೆ ಲೈಸನ್ಸ್ ಬೇಕು. ವರ್ಕ್ ಶಾಪ್ ನಡೆಸುವವರು ನಿರ್ಲಕ್ಷ್ಯ ಮಾಡಿದ್ದಾರೆ. ತಪ್ಪು ಯಾರದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಬೆಂಕಿ ನಂದಿಸುವ ಸಿಲಿಂಡರ್ ಜಾಸ್ತಿ ಇರಲಿಲ್ಲ. ಇಲ್ಲಿ ಸಾಕಷ್ಟು ಬಸ್​ಗಳು ಇದ್ದರೂ ಒಳಗೆ ಪ್ರವೇಶಿಸುವ ಗೇಟ್ ಮಾತ್ರ ಇದೆ, ನಿರ್ಗಮನ ಗೇಟ್ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಖಾಸಗಿ ಬಸ್​​ ಅಗ್ನಿ ದುರಂತ: ಸ್ಥಳದಲ್ಲಿದ್ದವು 12 ಗ್ಯಾಸ್ ಸಿಲಿಂಡರ್​, 30 ಬ್ಯಾಟರಿ, ತಪ್ಪಿದ ಭಾರಿ ಅನಾಹುತ: 42 ಜನ ಬಚಾವ್

ಮತ್ತೆ ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳುತ್ತೇವೆ: ಡಿಕೆ ಶಿವಕುಮಾರ್​

ಪೊಲೀಸರ ಪ್ರಕಾರ ವೆಲ್ಡಿಂಗ್ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಯಾರೇ ಆಗಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳುತ್ತೇವೆ. ಅಗ್ನಿಶಾಮಕದಳ ಮತ್ತು ಪೋಲಿಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 30 October 23