Bengaluru Rain: ಬೆಂಗಳೂರಿನ ಕೆಲವೆಡೆ ವ್ಯಾಪಕ ಮಳೆ; ವಾಹನ ಸವಾರರ ಪರದಾಟ

| Updated By: guruganesh bhat

Updated on: Jul 25, 2021 | 9:50 PM

ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ರಾಮಮೂರ್ತಿನಗರದ ಹೊಯ್ಸಳನಗರದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು, ತಗ್ಗು ಪ್ರದೇಶಗಳತ್ತ ನೀರು ನುಗ್ಗುತ್ತಿದೆ.

Bengaluru Rain: ಬೆಂಗಳೂರಿನ ಕೆಲವೆಡೆ ವ್ಯಾಪಕ ಮಳೆ; ವಾಹನ ಸವಾರರ ಪರದಾಟ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು ಶಿವಾನಂದ ಸರ್ಕಲ್, ಮಂತ್ರಿ ಮಾಲ್ ಬಳಿ ರಸ್ತೆ ಜಲಾವೃತಗೊಂಡಿದೆ. ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಮೆಜೆಸ್ಟಿಕ್, ಲಾಲ್​ಬಾಗ್, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ರಿಚ್​ಮಂಡ್ ಟೌನ್ ಸುತ್ತಮುತ್ತ ಮಳೆ ಸುರಿಯುತ್ತಿದೆ. ದಿಢೀರ್ ಮಳೆಯಿಂದ ಪಾದಚಾರಿಗಳು, ಸವಾರರು ಪರದಾಟ ಪಡುತ್ತಿದ್ದಾರೆ. ಬಸ್ ನಿಲ್ದಾಣ, ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದಾರೆ.

ಮೈಸೂರು ರಸ್ತೆ ಮಾರ್ಕೆಟ್​ ಫ್ಲೈಓವರ್​ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ​ಫ್ಲೈಓವರ್​ ಬಳಿ ಮ್ಯಾನ್​ಹೋಲ್​ನಿಂದ ನೀರು ಉಕ್ಕಿ ಹರಿಯುತ್ತಿದೆ.ಮೈಸೂರು ರಸ್ತೆ ಮಾರ್ಕೆಟ್​ ಫ್ಲೈಓವರ್​ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ​ಫ್ಲೈಓವರ್​ ಬಳಿ ಮ್ಯಾನ್​ಹೋಲ್​ನಿಂದ ನೀರು ಉಕ್ಕಿ ಹರಿಯುತ್ತಿದೆ. ರಾಜಕಾಲುವೆ ಕಾಮಗಾರಿ ಅಪೂರ್ಣವಾಗಿದ್ದರಿಂದ ರಾಮಮೂರ್ತಿನಗರದ ಹೊಯ್ಸಳನಗರದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು, ತಗ್ಗು ಪ್ರದೇಶಗಳತ್ತ ನೀರು ನುಗ್ಗುತ್ತಿದೆ.

ಇದನ್ನೂ ಓದಿ:

Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು

ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮ‌ವಾದ ಸೂರು ನೋಡಿ ಭಾವುಕರಾದ ದಂಪತಿ

(Bengaluru Rain Heavy rains experienced in some parts of city )