ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮವಾದ ಸೂರು ನೋಡಿ ಭಾವುಕರಾದ ದಂಪತಿ
ನಾವು ಹೊರಗಡೆ ಇದಿದ್ದಕ್ಕೆ ಬಚಾವ್ ಆಗಿದ್ದೇವೆ. ಈಗ ಅಳಿದುಳಿದ ಸಾಮಗ್ರಿ ತೆಗೆದುಕೊಂಡು ಹೊಗಲು ಬಂದಿದ್ದಿವೆ. ಊಟ ಮಾಡುವುದಕ್ಕೆ ಅಕ್ಕಿಯೂ ಇಲ್ಲ, ಗಂಜಿ ಕೇಂದ್ರಕ್ಕೆ ಹೋಗಬೇಕು ಎಂದು ಕುಸಿದ ಮನೆ ಕಂಡು ದಂಪತಿ ಭಾವುಕರಾಗಿದ್ದಾರೆ.
ಉತ್ತರ ಕನ್ನಡ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅದೆಷ್ಟೋ ಜನರು ಸಂಕಷ್ಟ ಎದುರಿಸುವಂತಾಗಿದೆ. ಬೆಳಗಾವಿ, ರಾಯಚೂರು, ಗದಗ ಮತ್ತು ಉತ್ತರ ಕನ್ನಡದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅನೇಕರು ತಮ್ಮ ಸೂರು ಕಳೆದುಕೊಂಡು ಪ್ರಾಣಭಯದಿಂದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿದೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಕಳೆದ 3 ದಿನಗಳಿಂದ ಭಾರೀ ಮಳೆಯಾಗಿದೆ. ಇದರಿಂದ ಗುಡ್ಡಗಳು ಕುಸಿದಿದ್ದು, ಅನೇಕ ಮನೆಗಳು ನೆಲಸಮವಾಗಿದೆ. ಹೀಗೆ ಮನೆ ಕಳೆದುಕೊಂಡವರಲ್ಲಿ ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ಮಂಜುಳಾ ವಿಷ್ಣು ದಂಪತಿ ಕೂಡ ಒಬ್ಬರು.
ಮನೆ ಬಿಳುವಾಗ ನಮ್ಮ ಜೀವ ಉಳಿದಿದ್ದೆ ಹೆಚ್ಚು. ಮಳೆ ಹಾಗೂ ನೆರೆ ರಭಸಕ್ಕೆ ನಮ್ಮ ಕಣ್ಣೇದುರೇ ಮನೆ ನೆಲಸಮವಾಯಿತು. ನಾವು ಹೊರಗಡೆ ಇದಿದ್ದಕ್ಕೆ ಬಚಾವ್ ಆಗಿದ್ದೇವೆ. ಈಗ ಅಳಿದುಳಿದ ಸಾಮಗ್ರಿ ತೆಗೆದುಕೊಂಡು ಹೊಗಲು ಬಂದಿದ್ದಿವೆ. ಊಟ ಮಾಡುವುದಕ್ಕೆ ಅಕ್ಕಿಯೂ ಇಲ್ಲ, ಗಂಜಿ ಕೇಂದ್ರಕ್ಕೆ ಹೋಗಬೇಕು ಎಂದು ಕುಸಿದ ಮನೆ ಕಂಡು ದಂಪತಿ ಭಾವುಕರಾಗಿದ್ದಾರೆ.
ಆಧಾರ್ ಕಾಡ್೯ ಹಿಡಿದು ಎಲ್ಲಾ ದಾಖಲೆ ಪತ್ರ ಮನೆಯ ಜತೆಯೇ ಹೋಯಿತು. ಏನು ಮಾಡುವುದು ಎಂದು ತಿಳಿಯುತ್ತಿಲ್ಲ.ಊಟಕ್ಕೆ ಕಾಳಜಿ ಕೇಂದ್ರವೇ ಗತಿಯಾಗಿದೆ. ಮನೆಯಲ್ಲಿ ಒಂದು ಕಾಳು ಅಕ್ಕಿ ಉಳಿದಿಲ್ಲ ಎಂದು ಟಿವಿ9 ಡಿಜಿಟಲ್ ಜತೆ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಗುಳ್ಳಾಪುರ-ಹಳವಳ್ಳಿ ಸಂಪರ್ಕ ಸೇತುವೆ ನೀರುಪಾಲು ಗುಳ್ಳಾಪುರ-ಹಳವಳ್ಳಿ ಸಂಪರ್ಕ ಸೇತುವೆ ಕೊಚ್ಚಿಹೋದ ಹಿನ್ನೆಲೆ, ಸೇತುವೆ ಕೊಚ್ಚಿಹೋಗಿ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ ಆಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಳವಳ್ಳಿ, ಹೆಗ್ಗಾರ, ಕಲ್ಲೇಶ್ವರ, ಶೇವ್ಕಾರ, ಕೊನಾಳ ಸೇರಿ 10ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಸೇತುವೆ ಕೊಚ್ಚಿಹೋಗಿದೆ. 10ಕ್ಕೂ ಹೆಚ್ಚು ಗ್ರಾಮಗಳ ಸ್ಥಿತಿ ಈಗ ಅಕ್ಷರಶಃ ನಡುಗಡ್ಡೆಯಂತಗಿದೆ.
2019ರ ಪ್ರವಾಹದಲ್ಲಿ ಗ್ರಾಮಗಳ ಸಂಪರ್ಕಕ್ಕೆ ನಿರ್ಮಿಸಿದ್ದ 2 ತೂಗುಸೇತುವೆ ಕೊಚ್ಚಿಹೋಗಿದ್ದವು. ಇದೀಗ ಇದ್ದ ಒಂದು ಸಂಪರ್ಕ ಸೇತುವೆಯೂ ನೀರುಪಾಲಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಆನ್ಲೆ ಬಳಿ ಪ್ರವಾಹಕ್ಕೆ ಮನೆ ಕುಸಿದುಬಿದ್ದಿದೆ. ಮನೆ ಕುಸಿದುಬಿದ್ದ ಹಿನ್ನೆಲೆ ಮನೆಯ 6 ಜನರು ಬೀದಿಗೆ ಬಿದ್ದಂತಾಗಿದೆ. ಇದ್ದ ಮನೆ ಕಳೆದುಕೊಂಡು 6 ಜನ ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ:
Published On - 2:05 pm, Sun, 25 July 21