ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಮನೆ ಕುಸಿತ, ಚಿಕ್ಕಮಗಳೂರಿನಲ್ಲಿ ವೃದ್ಧರೊಬ್ಬರ ಸಾವು; ಸೇತುವೆಗಳು ಜಲಾವೃತ, ಸಂಪರ್ಕ ಕಡಿತ

ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಮನೆ ಕುಸಿತ, ಚಿಕ್ಕಮಗಳೂರಿನಲ್ಲಿ ವೃದ್ಧರೊಬ್ಬರ ಸಾವು; ಸೇತುವೆಗಳು ಜಲಾವೃತ, ಸಂಪರ್ಕ ಕಡಿತ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2021 | 4:09 PM

ಅಡುಗೆ ಕೋಣೆಯಲ್ಲಿ ಒಂದಷ್ಟು ಜನ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ಕೆಲ ಕ್ಷಣಗಳಲ್ಲಿ ಏನು ಸಂಭವಿಸಲಿದೆ ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಕಳೆದ ಸಲದಂತೆ ಈ ಬಾರಿಯೂ ರಾಜ್ಯಾದಂತ ಸುರಿಯುತ್ತಿರುವ ಧಾರಾಕಾರ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಮನೆಗಳು ಕುಸಿಯುತ್ತಿವೆ ಮತ್ತು ರಸ್ತೆಗಳೆಲೆಲ್ಲ ನೀರು ಹರಿದು ಬಂದಿರುವುದರಿಂದ ಮತ್ತು ಸೇತುವೆಗಳು ಮುಳುಗಡೆಯಾಗಿರುವುದರಿಂದ ಹಲವಾರು ಸ್ಥಳಗಳು ಮುಖ್ಯ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿವೆ. ಜಲಾವೃತ ಪ್ರದೇಶಗಳಲ್ಲಿನ ಸ್ಥಳಗಳಿಂದ ಜನರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಮತ್ತು ಹಿರಿಯ ನಾಗರಿಕರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವುದು ಕಷ್ಟವಾಗುತ್ತಿದೆ.

ಈ ವಿಡಿಯೋನಲ್ಲಿ ನೀವು ನೋಡುತ್ತಿರುವ ಹಾಗೆ ಚಿತ್ರದುರ್ಗದಲ್ಲಿ ಮನೆಯೊಂದು ಕುಸಿದು ಮನೆಯಲ್ಲಿರುವ ಜನ ನಿರ್ವಸಿತಗರಾಗಿ ರಸ್ತೆಗೆ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರಿ ಮಳೆಯಿಂದ ಹಳೆಯ ಮನೆಯೊಂದು ಕುಸಿದಿರುವುದು ನಿಮಗಿಲ್ಲಿ ಕಾಣಿಸುತ್ತಿದೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ವೃದ್ಧರೊಬ್ಬರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ನೀವು ನೋಡುತ್ತಿರುವ ಮೂರನೇ ದೃಶ್ಯ ಮಂಗಳೂರಿನ ಒಂದು ಬಾರ್ ಅಂಡ್ ರೆಸ್ಟುರಾಂಟ್​ನದ್ದು. ಈ ಬಾರ್​ನ ಕಿಚನ್ ಗೋಡೆ ಮತ್ತು ಛಾವಣಿ ಕುಸಿಯುತ್ತಿರುವ ಲೈವ್ ದೃಶ್ಯಾವಳಿಯನ್ನು ಕಾಣಬಹುದು. ಅಡುಗೆ ಕೋಣೆಯಲ್ಲಿ ಒಂದಷ್ಟು ಜನ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ಕೆಲ ಕ್ಷಣಗಳಲ್ಲಿ ಏನು ಸಂಭವಿಸಲಿದೆ ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಹಾಗೆಯೇ, ಉತ್ತರ ಕರ್ನಾಟಕದ ಗದಗನಲ್ಲಿ ಮನೆಯೊಂದು ಕುಸಿದು ಬಿದ್ದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಇಂದು-ನಾಳೆ ವಿಪರೀತ ಮಳೆ; ಕರಾವಳಿ, ಮಲೆನಾಡು ಭಾಗಗಳಲ್ಲಿ ಆರೆಂಜ್​ ಅಲರ್ಟ್​​