AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಟಾಕಿಯ ಸದ್ದಿಗೆ ಬೆಚ್ಚಿಬಿದ್ದು ಮದುಮಗನೊಂದಿಗೆ ಓಡಿ ಹೋದ ಕುದುರೆ!

ರಾಜಸ್ತಾನದ ಹಳ್ಳಿಯೊಂದರಲ್ಲಿ ವರನನ್ನು ಹೊತ್ತುಕೊಂಡು ಕುದುರೆಯೊಂದು ಓಡಿ ಹೋಗಿದೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ‘ದಗಡು ಪರಬನ ಅಶ್ವಮೇಧ’ ಕತೆಯನ್ನು ನೆನಪಿಸುವಂತೆ ನಡೆದಿರುವ ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

Viral Video: ಪಟಾಕಿಯ ಸದ್ದಿಗೆ ಬೆಚ್ಚಿಬಿದ್ದು ಮದುಮಗನೊಂದಿಗೆ ಓಡಿ ಹೋದ ಕುದುರೆ!
ಕುದುರೆಯ ಮೇಲೆ ಕೂತಿರುವ ವರ
Follow us
TV9 Web
| Updated By: shivaprasad.hs

Updated on: Jul 23, 2021 | 5:30 PM

ಮದುವೆಯೆಂದರೇ ಗೌಜು- ಸಂಭ್ರಮ. ಅದರಲ್ಲೂ ಉತ್ತರ ಭಾರತದಲ್ಲಿ ಮದುವೆಯ ಶಾಸ್ತ್ರ ಸಂಪ್ರದಾಯಗಳು ಬಹಳ ಅದ್ದೂರಿಯಿಂದ ನಡೆಯುತ್ತವೆ. ಮದುವೆಯಲ್ಲಿ ಮದುಮಗ ಕುದುರೆಯ ಮೇಲೇರಿ ಬರುವುದೂ ಇಂತಹ ಸಂಪ್ರದಾಯಗಳಲ್ಲೊಂದು. ಮದುವೆಯ ಸಂಭ್ರಮ ಮತ್ತಷ್ಟು ಕಳೆಗಟ್ಟಲು ಪಟಾಕಿ- ಸುಡುಮದ್ದುಗಳನ್ನೂ ಕೆಲವರು ಸಿಡಿಸುತ್ತಾರೆ. ಕೆಲವೊಮ್ಮೆ ಅದು ಎಂತಹ ಫಜೀತಿಯನ್ನು ತಂದೊಡ್ಡುತ್ತದೆ ಎಂಬುದಕ್ಕೆ ದೃಷ್ಟಾಂತವಾಗಿ ವೈರಲ್ ಆದ ವಿಡಿಯೊವೊಂದು ಇಲ್ಲಿದೆ.

ರಾಜಸ್ತಾನದ ಅಜ್ಮೇರ್ ಸಮೀಪದ ರಾಮ್​ಪುರ ಗ್ರಾಮದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಕುದುರೆ ಏರಿ ಬಂದ ಮದುಮಗ, ಸಭಾಂಗಣಕ್ಕೆ ಪ್ರವೇಶಿಸುವ ಮೊದಲು ಶಾಸ್ತ್ರ ಪ್ರಕಾರದಂತೆ ಹೊರಗೆ ನಿಂತಿದ್ದಾನೆ. ವಿಧಿ ವಿಧಾನಗಳು ನಡೆಯುತ್ತಿರುವಾಗ ಮದುಮಗ ಬಂದ ಖುಷಿಗೆ ಯಾರೋ ಪಟಾಕಿ ಹೊಡೆದಿದ್ದಾರೆ. ಅದರಿಂದ ವಿಚಲಿತವಾದ ಕುದುರೆ ಗಾಬರಿ ಬಿದ್ದಿದೆ. ಮೊದಲಿಗೆ ಅಲ್ಲೇ ಕೊಸರಾಡಿದ ಅದು, ನಂತರ ಮದುಮಗನೊಂದಿಗೆ ಓಟ ಕಿತ್ತಿದೆ. ಕುದುರೆಯನ್ನು ಕರೆತಂದಿದ್ದ ಅದರ ಮಾಲೀಕನೂ ಕುದುರೆಯ ಹಿಂದೆ ಓಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನು ನೋಡಿರುವ ಸಾಹಿತ್ಯ ಪ್ರೇಮಿಗಳಿಗೆ ತಕ್ಷಣ ಒಂದು ಘಟನೆ ನೆನಪಾಗಿರಬಹುದು. ಜಯಂತ್ ಕಾಯ್ಕಿಣಿ ಅವರ ಒಂದು ಕತೆ ‘ದಗಡು ಪರಬನ ಅಶ್ವಮೇಧ’ದಲ್ಲೂ ಇಂಥದ್ದೇ ಪ್ರಸಂಗ ಬರುತ್ತದೆ. ಮದುಮಗ ಕುದುರೆಯಲ್ಲಿರುವಾಗ ಅಚಾನಕ್ಕಾಗಿ ಉಂಟಾದ ಶಬ್ದಕ್ಕೆ ಅದು ಹೆದರಿ ಮದುಮಗನನ್ನು ಹೊತ್ತು ಪರಾರಿಯಾಗುತ್ತದೆ. ಅಲ್ಲಿಂದ ಕತೆ ಬೇರೆ ಬೇರೆ ಹರಹು ಪಡೆದುಕೊಳ್ಳುತ್ತದೆ. ಆದರೆ, ಕತೆಯ ತುಣುಕೊಂದು ನಿಜ ಜೀವನದಲ್ಲಿ ನಡೆದಿರುವಂತೆ ಈ ವಿಡಿಯೊ ಸೆರೆಯಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೊ ಇಲ್ಲಿದೆ:

ಇದನ್ನೂ ಓದಿ:

Tokyo Olympics 2020 Opening Ceremony: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ 2020ಕ್ಕೆ ಮನರಂಜನಾ ಸಮಾರಂಭದ ಮೂಲಕ ವಿದ್ಯುಕ್ತ ಚಾಲನೆ

ಚೀನಾದ ಹೆನನ್ ಪ್ರಾಂತ್ಯದಲ್ಲಿ ನಿಲ್ಲದ ಮಳೆ, ಡ್ರೋನ್ ಸೆರೆಹಿಡಿದ ದೃಶ್ಯಗಳು ದಿಗಿಲು ಹುಟ್ಟಿಸುತ್ತವೆ, ರಕ್ಷಣಾ ಕಾರ್ಯ ಜಾರಿ

ಎಮ್ಮೆಯ ಸಂದರ್ಶನ ಮಾಡಿದ ಪಾಕಿಸ್ತಾನದ ವರದಿಗಾರ! ಪ್ರಶ್ನೆಗೆ ಎಮ್ಮೆಯ ಉತ್ತರ ಏನಿತ್ತು? ವಿಡಿಯೋ ವೈರಲ್​

(Horse ran with groom: the video goes viral)

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ