Bengaluru Rain: ಬೆಂಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ; ಕೆರೆಯಂತಾದ ರಸ್ತೆಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 09, 2024 | 8:41 PM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಸೂರ್ಯ ಮುಳುಗುತ್ತಿದ್ದಂತೆಯೇ ಶುರುವಾದ ಮಳೆರಾಯ ರಾತ್ರಿಯಾದರೂ ಬಿಡುತ್ತಿಲ್ಲ. ಹೌದು..ನಗರದ ಹಲವೆಡೆ ಇಂದು(ಮೇ 09) ಸಂಜೆ ಆರಂಭವಾದ ಮಳೆ ರಾತ್ರಿ ವರೆಗೂ ಮುಂದುರೆದಿದೆ. ಇದರಿಂದ ರಸ್ತೆಗಳು ನೀರು ತುಂಬಿಕೊಂಡು ಕೆರೆಯಂತಾಗಿವೆ.

Bengaluru Rain: ಬೆಂಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ; ಕೆರೆಯಂತಾದ ರಸ್ತೆಗಳು
ಬೆಂಗಳೂರಿನಲ್ಲಿ ಮಳೆ
Follow us on

ಬೆಂಗಳೂರು, ಮೇ.09: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು,(Bengaluru Rain) ಇಂದು(ಮೇ,09) ಕೂಡ ವರುಣನ ಆರ್ಭಟ ಜೋರಾಗಿದೆ. ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ವಸಂತನಗರ, ಶಿವಾಜಿ ನಗರ, ಜಯನಗರ, ಚಂದ್ರಲೇಔಟ್, ಬನಶಂಕರಿ, ಸದಾಶಿವನಗರ, ಆರ್‌.ಟಿ.ನಗರ, ಹೆಬ್ಬಾಳ, ಸಹಕಾರನಗರ, ಭಾಷ್ಯಂ ಸರ್ಕಲ್ ಸೇರಿದಂತೆ ಮಹಾನಗರದ ಹಲವೆಡೆ ಮಳೆ ಶುರುವಾಗಿದ್ದು, ಮಳೆ ಹಿನ್ನೆಲೆ ವಾಹನ​ ಸವಾರರು ಪರದಾಡುವಂತಾಗಿದೆ. ಇನ್ನು ಮಳೆಯಿಂದ ಬಿಸಿಲಿಗೆ ಸುಸ್ತಾಗಿದ್ದ ರಾಜ್ಯ ರಾಜಧಾನಿ ಕೂಲ್​ ಆಗಿದೆ.

ನೆಲಮಂಗಲದಲ್ಲೂ ಬಾರಿ ಮಳೆ

ನಿನ್ನಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಆದ ಭಾರಿ ಮಳೆಗೆ ಬಾಳೆ, ಅಡಿಕೆ ಮರಗಳು ನೆಲಕಚ್ಚಿದ್ದವು. ಇಂದು ಕೂಡ ಪೀಣ್ಯಾ,ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಬಿರುಗಾಳಿ ಸಹಿತ ಬಾರಿ ಮಳೆ ಶುರುವಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ, ಜಾಗ್ರತೆಯಿಂದ ಇರಲು ಕೆಲ ಸಲಹೆ ಕೊಟ್ಟ ಹವಾಮಾನ ಇಲಾಖೆ

ಹಲವೆಡೆ ಮುಂದುವರಿದ ಮಳೆ;ಕೆರೆಯಂತಾದ ತಗ್ಗು ಪ್ರದೇಶದ ರಸ್ತೆಗಳು

ಮೆಜೆಸ್ಟಿಕ್, ಸದಾಶಿವನಗರ, ವಸಂತನಗರ, ವಿಜಯನಗರ, ಜಯನಗರ, ಚಂದ್ರಾಲೇಔಟ್, ಶಿವಾಜಿನಗರ, ಬನಶಂಕರಿ
ಆರ್.ಟಿ.ನಗರ, ಹೆಬ್ಬಾಳ, ಸಹಕಾರನಗರ, ರಾಜಾಜಿನಗರ, ಶಾಂತಿನಗರ ಸೇರಿದಂತೆ ನಗರದ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದೆ. ಇದರಿಂದ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಇನ್ನು ಕೆಲಸ ಮುಗಿಸಿ ಮನೆಗೆ ತೆರಳ್ತಿದ್ದ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಮೂನ್ಸುಚನೆ ನೀಡಿದ್ದ ಹವಾಮಾನ ಇಲಾಖೆ

ಇನ್ನು ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಗುಡುಗು ಸಹಿತ 40 ರಿಂದ 50 ಕೀ.ಮಿ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬರಲಿದ್ದು, ಮಳೆಯಿಂದ ಜನರು ಜಾಗ್ರತೆ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಜೊತೆಗೆ ಮೇ. 12 ನೇ ತಾರೀಖಿನವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆಯಿದೆ ಎಂದು ಮೂನ್ಸುಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Thu, 9 May 24