Bengaluru Rains: ಬೆಂಗಳೂರಿನ ಯಾವ್ಯಾವ ಪ್ರದೇಶಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ? ವಿವರ ಇಲ್ಲಿದೆ

Bengaluru Weather: ಮುಂದಿನ 24 ಗಂಟೆಗಳವರೆಗೆ ಹೆಚ್ಚು ಮಳೆ ಸಂಭವ ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದಿಂದ ತಿಳಿಸಿದೆ. ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. 

Bengaluru Rains: ಬೆಂಗಳೂರಿನ ಯಾವ್ಯಾವ ಪ್ರದೇಶಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ? ವಿವರ ಇಲ್ಲಿದೆ
ಮಳೆ (ಸಂಗ್ರಹ ಚಿತ್ರ)

ಬೆಂಗಳೂರು: ನಗರದಲ್ಲಿ ಇಂದು (ಅಕ್ಟೋಬರ್ 17) ಸಂಜೆ ವೇಳೆಗೆ ಸಾಧಾರಣ ಮಳೆ ಆಗುವ ಸಂಭವ ಇದೆ. ಬೆಂಗಳೂರು ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಅತೀ ಕಡಿಮೆ ಮಳೆ ಆಗಲಿದೆ. ಅಂದಾಜು 0.1 ರಿಂದ 2.4 ಮಿಲಿ ಮೀಟರ್ ಮಳೆ ಸಾಧ್ಯತೆ ಇದೆ. ದಾಸರಹಳ್ಳಿ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪಶ್ಚಿಮ ವಲಯದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.

ದಾಸರಹಳ್ಳಿ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಯಲಹಂಕ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪಶ್ಚಿಮ ವಲಯದಲ್ಲಿ ಅಂದಾಜು 2.5 ಮಿಲಿ ಮೀಟರ್ ನಿಂದ 15.5 ಮಿಲಿ ಮೀಟರ್ ಮಳೆ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳವರೆಗೆ ಹೆಚ್ಚು ಮಳೆ ಸಂಭವ ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದಿಂದ ತಿಳಿಸಿದೆ. ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮಳೆ
ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ತಾಲೂಕು ಕಚೇರಿ ಮುಂದಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸವಾರರ ಪರದಾಟ ಕಂಡುಬಂದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತ ಚಾಮರಾಜನಗರದಲ್ಲಿ ಕೂಡ ಮಳೆಯಾಗಿದೆ. ಭಾರಿ ಮಳೆಗೆ ಲಾರಿ ಟೈರ್ ಮಣ್ಣಿನಲ್ಲಿ ಸಿಲುಕಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಘಟನೆ ನಡೆದಿದೆ. ಕಳಪೆ ಕಾಮಗಾರಿಯಿಂದಾಗಿ ಲಾರಿಯ ಚಕ್ರ ಹೂತು ಹೋಗಿದೆ. ಲಾರಿಯ ಮುಂಭಾಗದ ಎಡ ಚಕ್ರ ಹೂತುಕೊಂಡಿದೆ.

ಬೆಂಗಳೂರು: ಮಳೆಗೆ ಮನೆ ಕುಸಿತ
ಭಾರಿ ಮಳೆಗೆ ಬೆಂಗಳೂರು ನಗರದಲ್ಲಿ ಇಂದು (ಅಕ್ಟೋಬರ್ 17) ಮತ್ತೊಂದು ಮನೆ ಕುಸಿದಿದೆ. ಸುಮಾರು 80 ವರ್ಷದ ಹಿಂದೆ ನಿರ್ಮಾಣವಾದ ಮನೆಯೊಂದು ರಾಜಾಜಿನಗರದ ಆರ್.ಜಿ.ಐ ಕಾಲೋನಿಯ ವಾರ್ಡ್ ನಂ. 97 ದಯಾನಂದನಗರದಲ್ಲಿ ಕುಸಿದು ನೆಲಕ್ಕೆ ಉರುಳಿದೆ.

ಮೊನ್ನೆ ರಾತ್ರಿ‌ 9ರ ಸುಮಾರಿಗೆ ಮನೆಯ ಒಂದು ಭಾಗ ಉರುಳಿಬಿದ್ದಿತ್ತು. ಅಕ್ಕಪಕ್ಕದಲೇ ಇರುವ ಮನೆಯ ಗೋಡೆ ಕುಸಿದಿತ್ತು. ಕುಸಿದ ಮನೆಯಲ್ಲಿ 7 ಜನರು ವಾಸವಾಗಿದ್ದರು. ಮನೆ ಕುಸಿದು ಕುಟುಂಬ ಬೀದಿಗೆ ಬಿದ್ದಿತ್ತು. ಪತ್ನಿ ಮನೆ ಕೆಲಸ, ಗಂಡ ಗಾರೆ ಕೆಲಸ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 7 ಸದಸ್ಯರ ಕುಟುಂಬ ಮನೆ ಇಲ್ಲದೆ ಬಿದ್ದಿಯಲ್ಲೇ ಜೀವನ ಸಾಗಿಸುವಂತಾಗಿತ್ತು. ಊಟ, ನಿದ್ರೆಯಿಲ್ಲದೆ ಬೀದಿಯಲ್ಲೇ ಪರದಾಡುತ್ತಿದ್ದರು. ಮೊನ್ನೆ ರಾತ್ರಿಯೇ ದುರ್ಘಟನೆ ನಡೆದಿದ್ರೂ ಯಾವೊಬ್ಬ ಅಧಿಕಾರಿಯೂ ಇದುವರೆಗೂ ಭೇಟಿ ನೀಡಿಲ್ಲ. ಶಾಸಕ ಹಾಗೂ ಬಿಬಿಎಂಪಿ ಅಧಿಕಾರಿಗಳು ಇಲ್ಲಿಯವರೆಗೂ ಮನೆಯ ಸುತ್ತ ಸುಳಿದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಉತ್ತರಾಖಂಡ್​​ನಲ್ಲಿ ಭಾರಿ ಮಳೆ ಸಾಧ್ಯತೆ; 13 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, ರಕ್ಷಣಾ ತಂಡಗಳು ಸಜ್ಜು

ಇದನ್ನೂ ಓದಿ: Kerala Rain Updates: ಕೇರಳದಲ್ಲಿ ಧಾರಾಕಾರ ಮಳೆ; ಇದುವರೆಗೆ 18 ಮಂದಿ ಸಾವು, ಸೇನೆಯಿಂದ ಸಹಾಯಬೇಕೆಂದ ಪಿಣರಾಯಿ ವಿಜಯನ್​

Click on your DTH Provider to Add TV9 Kannada