ರಾಮೇಶ್ವರಂ‌ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಂದ ಮೊಬೈಲ್ ಬಳಕೆಯ ನಾಟಕ? ಪೊಲೀಸರಿಗೆ ತಲೆನೋವಾದ ಆರೋಪಿ ಪತ್ತೆ ಕಾರ್ಯ

Bengaluru Rameshwaram Cafe Bomb Blast: ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ವ್ಯಕ್ತಿ ಚಲನವಲನಗಳು ಸೆರೆಯಾಗಿವೆ. ತಿಂಡಿಗೆ ಬಿಲ್ ಕೊಡುವಾಗ ಮೊಬೈಲ್ ಟೇಬಲ್ ಮೇಲೆ ಇಟ್ಟಿದ್ದಾನೆ. ಮೊಬೈಲ್ ರಿಜಿಸ್ಟರ್ ಆಗುವಂತೆ ಪದೇ ಪದೇ ಅದನ್ನು ತೋರಿಸಿದ್ದ. ಆದರೆ ಆ ಮೊಬೈಲ್ ಬಳಕೆಯಲ್ಲಿ ಇತ್ತಾ? ಇಲ್ವಾ? ಪೊಲೀಸರ ದಿಕ್ಕು ತಪ್ಪಿಸಲು ನಾಟಕ ಮಾಡಿದನೇ ಎನ್ನುವ ಶಂಕೆ ವ್ಯಕ್ತವಾಗಿದೆ.

ರಾಮೇಶ್ವರಂ‌ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಂದ ಮೊಬೈಲ್ ಬಳಕೆಯ ನಾಟಕ? ಪೊಲೀಸರಿಗೆ ತಲೆನೋವಾದ ಆರೋಪಿ ಪತ್ತೆ ಕಾರ್ಯ
ರಾಮೇಶ್ವರಂ‌ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್: ಪೊಲೀಸರ ದಿಕ್ಕು ತಪ್ಪಿಸಲು ಶಂಕಿತನಿಂದ ಮೊಬೈಲ್ ಬಳಕೆಯ ನಾಟಕ?
Updated By: Rakesh Nayak Manchi

Updated on: Mar 02, 2024 | 4:32 PM

ಬೆಂಗಳೂರು, ಮಾ.2: ನಗರದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ವ್ಯಕ್ತಿ ಚಲನವಲನಗಳು ಸೆರೆಯಾಗಿದ್ದು, ಶಂಕಿತ ಬಾಂಬರ್ ಪಕ್ಕಾ ಪ್ರೀ ಪ್ಲಾನ್ ಮಾಡಿಯೇ ಬಾಂಬ್ ಸ್ಫೋಟಿಸಿದಂತಿದೆ. ಮೊಬೈಲ್ ಬಳಕೆ ಮಾಡುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಆದರೆ, ಆದರೆ ಆ ಮೊಬೈಲ್ ಬಳಕೆಯಲ್ಲಿ ಇತ್ತಾ? ಅಥವಾ ಇರಲಿಲ್ಲವೇ ಎನ್ನುವುದು ಪೊಲೀಸರನ್ನು ಗೊಂದಲಕ್ಕೆ ತಳ್ಳಿದೆ.

ರಾಮೇಶ್ವರಂ ಕೆಫೆಗೆ ಬ್ಯಾಗ್ ಸಹಿತ ನುಗ್ಗಿದ್ದ ಶಂಕಿತ ವ್ಯಕ್ತಿ, ಇಡ್ಲಿ ಸೇವನೆ ಮಾಡಿದ್ದಾನೆ. ಇಡ್ಲಿ ಖರೀದಿ ಮಾಡುವಾ ಬಿಲ್ ಕೌಂಟರ್​ನ ಟೇಬಲ್ ಮೇಲೆ ಆ ವ್ಯಕ್ತಿ ಮೊಬೈಲ್ ಇಟ್ಟಿದ್ದಾನೆ. ತನ್ನ ಬಳಿ ಮೊಬೈಲ್ ಇತ್ತು ಎಂದು ಬಿಂಬಿಸಲು ಪದೇ ಪದೇ ತೋರಿಸಿದ್ದಾನೆ. ತಿಂಡಿ ತಿನ್ನುವಾಗ ಮೊಬೈಲ್​ನಲ್ಲಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ, ಪದೇ ಪದೇ ಮೊಬೈಲ್ ಬಳಕೆ ಮಾಡಿದ್ದನು.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಖಾಕಿ ಪಡೆ ಅಲರ್ಟ್, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿಭದ್ರತೆ

ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಶಂಕಿತ ವ್ಯಕ್ತಿ ಮೊಬೈಲ್ ಬಳಕೆ ಮಾಡುತ್ತಿದ್ದ ಹಿನ್ನೆಲೆ ಪೊಲೀಸರು ಟವರ್ ಡಂಪ್ ಮಾಡಿ ಹುಡುಕಾಟ ನಡೆಸಿದ್ದಾರೆ. ಆ ಸಂದರ್ಭದಲ್ಲಿ 500 ಕ್ಕೂ ಹೆಚ್ಚು ನಂಬರ್​ಗಳು ಆ್ಯಕ್ಟೀವ್ ಆಗಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಲಭ್ಯವಾದ ಪ್ರತಿಯೊಂದು ನಂಬರ್​ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಶಂಕಿತ ಬಾಂಬರ್ ಬಳಸಿದಂತ ಫೋನ್ ನಂಬರ್ ಬಗ್ಗೆ ಸಣ್ಣ ಮಾಹಿತಿ ಕೂಡ ಸಿಗುತ್ತಿಲ್ಲ. ಹಾಗಾದರೆ, ಆ ಶಂಕಿತ ಬಾಂಬರ್ ಮೊಬೈಲ್ ಬಳಸಿದಂತೆ ನಾಟಕ‌ ಮಾಡಿದನೇ ಎನ್ನುವ ಶಂಕೆ ವ್ಯಕ್ತವಾಗಿದೆ. ಆ ಮೊಬೈಲ್ ಬಳಕೆಯಲ್ಲಿ ಇತ್ತಾ? ಅಥವಾ ಇರಲಿಲ್ಲವೇ ಎನ್ನುವುದು ಸದ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Sat, 2 March 24