ಬೆಂಗಳೂರು: 2023ರಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಪುರುಷರೇ ಅಧಿಕ

|

Updated on: Mar 24, 2024 | 12:10 PM

2023 ರಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 883 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 913 ಜನರು ಮೃತಪಟ್ಟಿದ್ದಾರೆ. 2022ಕ್ಕಿಂತ 2023ರಲ್ಲಿ ಅಪಘಾತ ಶೇ17 ರಿಂದ 18 ರಷ್ಟು ಹೆಚ್ಚಾಗಿದೆ. 2022ರಲ್ಲಿ ರಸ್ತೆ ಅಪಘಾತದಲ್ಲಿ 770 ಪುರುಷರು ಮೃತಪಟ್ಟಿದ್ದರು. ಇವರಲ್ಲಿ 393 ಜನ 21-40 ನಡುವಿನ ವಯಸ್ಸಿನ ಪುರುಷರು.

ಬೆಂಗಳೂರು: 2023ರಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಪುರುಷರೇ ಅಧಿಕ
ಅಪಘಾತ
Follow us on

ಬೆಂಗಳೂರು, ಮಾರ್ಚ್​ 24: ಕಳೆದ ವರ್ಷ ಬೆಂಗಳೂರಿನಲ್ಲಿ (Bengaluru) ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟವರಲ್ಲಿ ಪುರುಷರೇ ಅಧಿಕವಾಗಿದ್ದು, ಬಹುತೇಕರು ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವಯಸ್ಸಿನವರಾಗಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ. ಹೆಲ್ಮೆಟ್ ಧರಿಸದಿರುವುದು ಮತ್ತು ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಕಾರಣವೆಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ದಿನದಿಂದ ದಿನಕ್ಕೆ ನಗರದ ಜನಸಂಖ್ಯೆ ಹೆಚ್ಚುತ್ತಿದೆ. ಹಾಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

2023 ರಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು 883 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 913 ಜನರು ಮೃತಪಟ್ಟಿದ್ದಾರೆ. 2022ಕ್ಕಿಂತ 2023ರಲ್ಲಿ ಅಪಘಾತ ಶೇ17 ರಿಂದ 18 ರಷ್ಟು ಹೆಚ್ಚಾಗಿದೆ. 2022ರಲ್ಲಿ ರಸ್ತೆ ಅಪಘಾತದಲ್ಲಿ 770 ಪುರುಷರು ಮೃತಪಟ್ಟಿದ್ದರು. ಇವರಲ್ಲಿ 393 ಜನ 21-40 ನಡುವಿನ ವಯಸ್ಸಿನ ಪುರುಷರು.

ಕಳೆದ ವರ್ಷ 31-40 ವಯಸ್ಸಿನ 165 ಪುರುಷರು (ಶೇ34) ಮೃತಪಟ್ಟಿದ್ದಾರೆ. 2022 ರಲ್ಲಿ ಒಟ್ಟು 123 ಪುರುಷರು ಮೃತಪಟ್ಟಿದ್ದರು. ಇನ್ನು 21-30 ವರ್ಷ ವಯಸ್ಸಿನ 140 ಜನ ಪುರುಷರು ಮಾರಣಾಂತಿಕ ಅಪಘಾತಗಳು ಮತ್ತು 88 ಸ್ವಯಂಕೃತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2023 ರಲ್ಲಿ 21-30 ವರ್ಷ ವಯಸ್ಸಿನ 228 ಜನ ಪುರುಷರು ಮೃತಪಟ್ಟಿದ್ದರೇ, 2022ರಲ್ಲಿ 219 ಜನ ಪುರುಷರು ಸಾವಿಗೀಡಾಗಿದ್ದರು. 2023ರಲ್ಲಿ 11-20 ವರ್ಷ ವಯಸ್ಸಿನ 41 ಹುಡುಗರು ಮೃತಪಟ್ಟಿದ್ದಾರೆ. 2022ರಲ್ಲಿ 26 ಹುಡುಗರು ಮೃಪಟ್ಟಿದ್ದರು.

ಇದನ್ನೂ ಓದಿ: ಬೆಂಗಳೂರು: 2024ರ ಮೊದಲ ಎರಡು ತಿಂಗಳಲ್ಲಿ ಅಪಘಾತದಿಂದ 174 ಜನ ಸಾವು

ಹೆಲ್ಮೆಟ್‌ ಮತ್ತು ಸೀಟ್ ಬೆಲ್ಟ್‌ ಧರಿಸದೆ ಇರುವುದು ಮತ್ತು ಅತಿ ವೇಗದಿಂದ ಅಪಘಾತ ಸಂಭವಿಸಿವೆ. ಹೀಗಾಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಹೇಳಿದರು.

“ವಾಹನಗಳ ಸಂಖ್ಯೆ ಮತ್ತು ರಸ್ತೆ ಬಳಕೆದಾರರ ಜನಸಂಖ್ಯೆ ಹೆಚ್ಚಾದಂತೆ ಸಾವುನೋವುಗಳು ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ನಿಮ್ಹಾನ್ಸ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಗೌತಮ್ ಮೇಲೂರ್ ಸುಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:16 am, Sun, 24 March 24