AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡಿದ್ದ ಪೇಂಟರ್‌ಗೆ ಮಹಿಳೆ ಕೈ ಜೋಡಣೆ ಯಶಸ್ವಿ

ಅಕ್ಟೋಬರ್ 2020 ರಲ್ಲಿ, ಪೇಂಟರ್‌ ಕೆಲಸ ಮಾಡುತ್ತಿದ್ದ ರಾಜ್ ಕುಮಾರ್(45) ತಮ್ಮ ಸೈಕಲ್‌ನಲ್ಲಿ ನಂಗ್ಲೋಯ್‌ನಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ರೈಲಿಗೆ ಸಿಲುಕಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಇದೀಗಾ ಮೆದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ್ದ ಮಹಿಳೆಯ ಕೈಗಳನ್ನು ಜೋಡಿಸಲಾಗಿದೆ.

ಅಪಘಾತದಲ್ಲಿ ಎರಡೂ ಕೈ ಕಳೆದುಕೊಂಡಿದ್ದ ಪೇಂಟರ್‌ಗೆ ಮಹಿಳೆ ಕೈ ಜೋಡಣೆ ಯಶಸ್ವಿ
ಪೇಂಟರ್‌ಗೆ ಮಹಿಳೆ ಕೈ ಜೋಡಣೆ
ಅಕ್ಷತಾ ವರ್ಕಾಡಿ
|

Updated on: Mar 06, 2024 | 5:45 PM

Share

ನವದೆಹಲಿ: ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ ದೆಹಲಿಯ ಪೇಂಟರ್‌ಗೆ ಮಹಿಳೆಯೊಬ್ಬರ ಕೈಗಳನ್ನು ಜೋಡಿಸಲಾಗಿದೆ. 11 ವೈದ್ಯರನ್ನು ಒಳಗೊಂಡ ತಂಡವು ಸುಮಾರು 12 ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಕೈ ಜೋಡಿಸಿದ್ದಾರೆ. ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕೈ ಕಸಿ ಶಸ್ತ್ರಚಿಕಿತ್ಸೆಯು ನಡೆದಿದ್ದು, ಇಂಥಾ ಶಸ್ತ್ರಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆಸಲಾಗಿದೆ.

ಅಕ್ಟೋಬರ್ 2020 ರಲ್ಲಿ, ಪೇಂಟರ್‌ ಕೆಲಸ ಮಾಡುತ್ತಿದ್ದ ರಾಜ್ ಕುಮಾರ್(45) ತಮ್ಮ ಬೈಸಿಕಲ್‌ನಲ್ಲಿ ನಂಗ್ಲೋಯ್‌ನಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ರೈಲಿಗೆ ಸಿಲುಕಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಇದೀಗಾ ಮೆದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ್ದ ಮಹಿಳೆಯ ಕೈಗಳನ್ನು ಜೋಡಿಸಲಾಗಿದೆ. ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಸರ್ಜರಿ ವಿಭಾಗದ ಅಧ್ಯಕ್ಷ ಡಾ ಮಹೇಶ್ ಮಂಗಲ್ ಮತ್ತು ಪ್ಲಾಸ್ಟಿಕ್ ಮತ್ತು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ ಸ್ವರೂಪ್ ಸಿಂಗ್ ಗಂಭೀರ್ ಅವರ ತಂಡದ ಪೇಂಟರ್‌ಗೆ ಮಹಿಳೆಯ ಕೈಗಳನ್ನು ಯಶಸ್ವಿಯಾಗಿ ಜೋಡಣೆ ಮಾಡಿದ್ದಾರೆ.

ಇದನ್ನೂ ಓದಿ: Mental Abuse: ಫಸ್ಟ್ ನೈಟ್‌ ದಿನದಿಂದಲೇ ಗಂಡು ಮಗು ಹೆರುವಂತೆ ಅತ್ತೆ ಮಾವನಿಂದ ಕಿರುಕುಳ; ಕೋರ್ಟ್​​​ ಮೆಟ್ಟಿಲೇರಿದ ಯುವತಿ

ಕಸಿ ಪ್ರೋಟೋಕಾಲ್‌ಗಳನ್ನು ಗಮನದಲ್ಲಿಟ್ಟುಕೊಂಡು, ವಿವರವಾದ ಪರೀಕ್ಷೆ ಮತ್ತು ಅಗತ್ಯ ತನಿಖೆಗಳ ನಂತರ, 11 ವೈದ್ಯರ ತಂಡವು ಸಂಕೀರ್ಣವಾದ 12-ಗಂಟೆಗಳ ಕಾರ್ಯವಿಧಾನವನ್ನು ಕಾರ್ಯಗತಗೊಳಿಸಿತು, ಮೂಳೆಗಳು, ಅಪಧಮನಿಗಳು, ನಾಳಗಳು, ಸ್ನಾಯುರಜ್ಜುಗಳು, ಸ್ನಾಯುಗಳು, ನರಗಳು ಮತ್ತು ಚರ್ಮ ಸೇರಿದಂತೆ ವಿವಿಧ ಘಟಕಗಳನ್ನು ಸೂಕ್ಷ್ಮವಾಗಿ ಮರುಜೋಡಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ