ಬೆಂಗಳೂರು: 2024ರ ಮೊದಲ ಎರಡು ತಿಂಗಳಲ್ಲಿ ಅಪಘಾತದಿಂದ 174 ಜನ ಸಾವು

ಅತಿ ವೇಗ ವಾಹನ ಚಾಲನೆಯಿಂದ ಶೇ10 ಸಾವುಗಳು ದೇವನಹಳ್ಳಿಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಭವಿಸಿವೆ. ಇದರ ನಂತರ ಕೆಂಗೇರಿ ನೈಸ್ ರಸ್ತೆಯಲ್ಲಿ ಹೆಚ್ಚು ಜನ ಮೃತಪಟ್ಟಿದ್ದಾರೆ. 2023ರಲ್ಲಿ ಮೃತಪಟ್ಟ 914 ಜನರಲ್ಲಿ ದ್ವಿಚಕ್ರ ವಾಹನ ಸವಾರರು ಶೇ74 ರಷ್ಟಿದ್ದರೇ, ಶೇ21 ಪಾದಾಚಾರಿಗಳು ಮೃತಪಟ್ಟಿದ್ದಾರೆ.

ಬೆಂಗಳೂರು: 2024ರ ಮೊದಲ ಎರಡು ತಿಂಗಳಲ್ಲಿ ಅಪಘಾತದಿಂದ 174 ಜನ ಸಾವು
ಅಪಘಾತ
Follow us
ವಿವೇಕ ಬಿರಾದಾರ
|

Updated on: Mar 13, 2024 | 8:12 AM

ಬೆಂಗಳೂರು, ಮಾರ್ಚ್​ 13: ರಾಜಧಾನಿ ಬೆಂಗಳೂರು (Bengaluru) 2024ರ ಮೊದಲ ಎರಡು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ (Accident) 174 ಮಂದಿ ಮೃತಪಟ್ಟಿದ್ದಾರೆ. ಇನ್ನು 2023ರಲ್ಲಿ 914 ಜನ ಸಾವಿಗೀಡಾಗಿದ್ದಾರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಹೇಳಿದರು. ಮಂಗಳವಾರ (ಮಾರ್ಚ್ 12) ರಂದು ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ ಇದ್ದು, 1,000ಕ್ಕೆ 827 ಜನರ ಬಳಿ ವಾಹನಗಳಿವೆ. ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿವೆ.

ಅತಿ ವೇಗ ವಾಹನ ಚಾಲನೆಯಿಂದ ಶೇ10 ಸಾವುಗಳು ದೇವನಹಳ್ಳಿಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಭವಿಸಿವೆ. ಇದರ ನಂತರ ಕೆಂಗೇರಿ ನೈಸ್ ರಸ್ತೆಯಲ್ಲಿ ಹೆಚ್ಚು ಜನ ಮೃತಪಟ್ಟಿದ್ದಾರೆ.

2023ರಲ್ಲಿ ಮೃತಪಟ್ಟ 914 ಜನರಲ್ಲಿ ದ್ವಿಚಕ್ರ ವಾಹನ ಸವಾರರು ಶೇ74 ರಷ್ಟಿದ್ದರೇ, ಶೇ21 ಪಾದಾಚಾರಿಗಳು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಶೇ60 ರಷ್ಟು ಜನ 60 ವಯಸ್ಸಿಗಿಂತ ಮೇಲ್ಪಟ್ಟವರು. ಸಂಚಾರ ನಿರ್ವಹಣೆಯನ್ನು ಹೆಚ್ಚಿಸಲು, ಅಪಘಾತಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಬೆಂಗಳೂರು ಪೊಲೀಸರು ಕೈಗೊಂಡ ವಿವಿಧ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಘಾತ ಪ್ರಕರಣ ಹೆಚ್ಚಳ: ಮೃತರಾದವರೆಷ್ಟು? ಇಲ್ಲಿದೆ ಅಂಕಿ-ಸಂಖ್ಯೆ

ಸುಧಾರಿತ ತಂತ್ರಜ್ಞಾನಗಳಾದ AI, ಬಿಗ್ ಡೇಟಾ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IOT), ಜಂಕ್ಷನ್‌ಗಳಲ್ಲಿ AI ಆಧಾರಿತ ಸಿಗ್ನಲ್‌ಗಳು, AI ಕ್ಯಾಮೆರಾ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸಿವೆ ಎಂದರು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮೂರು ಗಂಟೆಗಳಲ್ಲಿ ಹೆಬ್ಬಾಳದಲ್ಲಿ 90,000 ವಾಹನಗಳು ಹಾದು ಹೋಗುತ್ತವೆ. ಇದು ಜಾಗತಿಕವಾಗಿ ಅತ್ಯಧಿಕವಾಗಿದೆ. ಹೀಗಾಗಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ನಕ್ಷೆ ಆಧಾರಿತ ಸೇವೆಗಳು, ಎಫ್​ಎಮ್​ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜನರಲ್ಲಿ ತಿಳಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ