6 ಕೋಟಿ ಕಾರನ್ನು ಆರ್​ಟಿಒ ಅಧಿಕಾರಿಗಳಿಂದ ಬಿಡಿಸಿಕೊಳ್ಳಲು 5500 ರೂ ದಂಡ ಪಾವತಿಸಬೇಕಾಯ್ತು!

| Updated By: guruganesh bhat

Updated on: Aug 27, 2021 | 9:08 PM

ಸುಮಾರು ಎರಡು ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ಅವರಿಂದ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದ ಮಾಡಿದ್ದ ಬಾಬು ತಮ್ಮ ಹೆಸರಿಗೆ ಕಾರನ್ನು ನೋಂದಾಯಿಸಿಕೊಂಡಿರಲಿಲ್ಲ. ಅಲ್ಲದೇ ಕಾರಿನ ಮಾಲಿನ್ಯ ಪ್ರಮಾಣ ಪತ್ರವನ್ನು ಸಹ ಮಾಡಿಸಿರಲಿಲ್ಲ.

6 ಕೋಟಿ ಕಾರನ್ನು ಆರ್​ಟಿಒ ಅಧಿಕಾರಿಗಳಿಂದ ಬಿಡಿಸಿಕೊಳ್ಳಲು 5500 ರೂ ದಂಡ ಪಾವತಿಸಬೇಕಾಯ್ತು!
ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಕಾರು
Follow us on

ನೆಲಮಂಗಲ: ಆರ್​ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಅಮಿತಾಭ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿದ್ದ ಸೂಕ್ತ ದಾಖಲೆಗಳಿಲ್ಲದ ಐಷಾರಾಮಿ ಕಾರನ್ನು ಉಮ್ರಾ ಡೆವಲಪರ್ಸ್ ಮಾಲೀಕ ಬಾಬು ದಂಡ ಪಾವತಿಸಿ ಬಿಡಿಸಿಕೊಂಡಿದ್ದಾರೆ. ₹ 5,500 ದಂಡ ಪಾವತಿಸಿ ಅವರು ಆರ್ಟಿಒ ಅಧಿಕಾರಿಗಳಿಂದ ಕಾರನಗನು ಬಿಡಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರಿಂದ 6 ಕೋಟಿಯ ಕಾರನ್ನು ಖರೀದಿಸಿರುವುದಾಗಿ ಬಾಬು ಹೇಳಿಕೊಂಡಿದ್ದರು.

ಸುಮಾರು ಎರಡು ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ಅವರಿಂದ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದ ಮಾಡಿದ್ದ ಬಾಬು ತಮ್ಮ ಹೆಸರಿಗೆ ಕಾರನ್ನು ನೋಂದಾಯಿಸಿಕೊಂಡಿರಲಿಲ್ಲ. ಅಲ್ಲದೇ ಕಾರಿನ ಮಾಲಿನ್ಯ ಪ್ರಮಾಣ ಪತ್ರವನ್ನು ಸಹ ಮಾಡಿಸಿರಲಿಲ್ಲ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಸೂಕ್ತ ದಾಖಲೆ ಇಲ್ಲದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕೆಲವು ದಿನಗಳ ಮುನ್ನ ಜಪ್ತಿ ಮಾಡಿದ್ದರು. ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿ ಆಗಿದ್ದ ಕಾರನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಸೀಜ್ ಮಾಡಲಾಗಿತ್ತು. MH 02, BB 2 ಸಂಖ್ಯೆಯ ರೋಲ್ಸ್ ರಾಯ್ಸ್ ಕಾರು ಸೀಜ್ ಆಗಿದ್ದು, ರೋಲ್ಸ್ ರಾಯ್ಸ್ ಕಾರಿಗೆ ಸೂಕ್ತ ದಾಖಲೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಬಾಬು ಎಂಬಾತ ಅಮಿತಾಭ್ ಬಚ್ಚನ್ ರಿಂದ 6 ಕೋಟಿಗೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದ. ಈತ ಬಾಬು ಉಮ್ರಾ ಡೆವಲಪರ್ಸ್ ಮಾಲೀಕ ಎಂದು ತಿಳಿದುಬಂದಿದೆ. ಇನ್ನೂ ಸಹ ಕಾರಿನ ಮೂಲ ದಾಖಲಾತಿ ಬದಲಾಗದ ಹಿನ್ನೆಲೆಯಲ್ಲಿ ಅಮಿತಾಬ್ ಬಚ್ಚನ್ ಹೆಸರಲ್ಲೇ ಕಾರು ನೋಂದಣಿಯಾಗಿತ್ತು.

10 ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಪೋರ್ಶ್, ರೋಲ್ಸ್ ರಾಯ್ಸ್, ಫೆರಾರಿ ಸೇರಿದಂತೆ ಅನೇಕ ಕಾರುಗಳು ಅಧಿಕಾರಿಗಳು ವಶಪಡಿಸಿಕೊಂಡ ಕಾರುಗಳ ಪಟ್ಟಿಯಲ್ಲಿವೆ. ಈ ಕಾರುಗಳನ್ನು ರೋಡ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಲು‌ ಅನ್ಯ ರಾಜ್ಯದಲ್ಲಿ ನೋಂದಣಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಕಾರಿನ ಸೂಕ್ತ ದಾಖಲೆಗಳನ್ನು ತಂದು ಕೊಡುವಂತೆ ನೋಟಿಸ್ ನೀಡಲಾಗಿದೆ. ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಕಾರೊಂದೇ ಅಲ್ಲದೇ ಒಟ್ಟು 10 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದಾಖಲೆಗಳಿಲ್ಲದೆ ಐಶಾರಾಮಿ ಕಾರುಗಳು ಓಡಾಡುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್, ಆರ್​ಟಿಒ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರು ಜಪ್ತಿ ಮಾಡುವ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ:

ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀ

(Bengaluru Rolls Royce car seized released after 5500 fine paid to RTO officers )

Published On - 7:59 pm, Fri, 27 August 21