ಮತ್ತೆ ಮುನ್ನೆಲೆಗೆ ಬಂದ ಶಾಲಾ ಸಮಯ ಬದಲಾವಣೆ: ಖಾಸಗಿ ಶಾಲೆಗಳ ಒಕ್ಕೂಟ, ಪೋಷಕರ ವಿರೋಧ

|

Updated on: Sep 18, 2023 | 8:58 AM

ಶಾಲಾ ಸಮಯ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ, ಶಾಲೆ, ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಚಿಂತಿಸುವಂತೆ ಹೈಕೋರ್ಟ್​ ಸೂಚಿಸಿದೆ. ಹೀಗಾಗಿ ಶಾಲಾ ಅವಧಿಯನ್ನ ಬೆಳಗ್ಗೆ 9ರ ಬದಲಿಗೆ 8ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ & ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಶಾಲಾ ಸಮಯ ಬದಲಾವಣೆ: ಖಾಸಗಿ ಶಾಲೆಗಳ ಒಕ್ಕೂಟ, ಪೋಷಕರ ವಿರೋಧ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್​ 18: ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ, ಬೆಂಗಳೂರಿನ ಶಾಲೆ (School), ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಚಿಂತಿಸುವಂತೆ ಹೈಕೋರ್ಟ್​ ಸೂಚಿಸಿದೆ. ಮೂಲಕ ಶಾಲಾ ಸಮಯ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಶಾಲಾ ಅವಧಿಯನ್ನ ಬೆಳಗ್ಗೆ 9ರ ಬದಲಿಗೆ 8ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಬೆಳಗ್ಗೆ 8 ಕ್ಕೆ ಶಾಲೆಗಳು ಶುರುವಾದರೆ ಕಷ್ಟ ಅಂತಿದ್ದಾರೆ. ಈ ಹಿನ್ನೆಲೆ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಮುಖಂಡರ ಸಭೆ ಕರೆದು ತೀರ್ಮಾಸಲು ಮುಂದಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗಣೇಶ ಹಬ್ಬದ ನಂತರ ಸಂಬಂಧಪಟ್ಟವರ ಜೊತೆ ಸಭೆ ನಡೆಸಲು ನಿರ್ಧರಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದು, ತೀರ್ಪಿನ ಪ್ರತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿ ತರಕಾರಿ ಸಿಪ್ಪೆ ಸುಲಿದ ಮಹಿಳೆ: ನೆಟ್ಟಿಗರು ಏನಂದ್ರು ನೋಡಿ

ಇದು ಹೈಕೋರ್ಟ್‌ನ ಸಲಹೆಯಾಗಿರುವುದರಿಂದ, ನಾವು ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದೇವೆ. ಒಮ್ಮೆ ನಾವು ಪ್ರತಿಯನ್ನು ಸ್ವೀಕರಿಸಿದ ನಂತರ, ಯಾವ ಸಮಯದಲ್ಲಿ ನ್ಯಾಯಾಲಯವು ಸಮಯವನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ ಮತ್ತು ನಂತರ ಸಮಸ್ಯೆಯನ್ನು ಚರ್ಚಿಸಲು ಮಧ್ಯಸ್ಥಗಾರರೊಂದಿಗೆ ಸಭೆಗೆ ಕರೆಯುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹದಗೆಟ್ಟಿರುವ ಟ್ರಾಫಿಕ್ ಪರಿಸ್ಥಿತಿ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಸಲಹೆಯನ್ನು ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಮಯವನ್ನು ರಾಜ್ಯ ಸರ್ಕಾರ ಪರಿಗಣಿಸುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಪರಿಸ್ಥಿತಿ ಆತಂಕ; ಬೆಂಗಳೂರಿನಲ್ಲಿ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ಆರೋಗ್ಯ ಇಲಾಖೆಯಿಂದ ಪೋಷಕರಿಗೆ ಗೈಡ್ ಲೈನ್ಸ್

ಸಮಯ ಬದಲಾವಣೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದು, ಸಮಯ ಬದಲಾವಣೆಯಿಂದ ಪೋಷಕರು ಮತ್ತು ಮಕ್ಕಳಿಗೆ ತೊಂದರೆಯುಂಟಾಗಬಹುದು. ಸದ್ಯದ ಸಮಯ ಪರಿಪೂರ್ಣವಾಗಿದ್ದು, ಪ್ರತಿಯೊಬ್ಬರೂ ಅದಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳಿದ್ದಾರೆ.

ಪ್ರಸ್ತುತ, ಶಾಲೆಗಳ ಸಮಯ ಬೆಳಿಗ್ಗೆ 8.45 / 9 ರಿಂದ 3.45 / 4 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತವೆ. ಗಾರ್ಮೆಂಟ್ಸ್ ಸೇರಿದಂತೆ ಇತರ ಖಾಸಗಿ ಉದ್ಯಮಗಳು ಬೆಳಿಗ್ಗೆ 9 ರಿಂದ 9.30 ರವರೆಗೆ ತೆರೆದಿರುತ್ತವೆ.

ಈ ಹಿಂದೆಯೂ ಇಲಾಖೆಯು ಶಾಲಾ ಸಮಯ ಬದಲಾವಣೆಗೆ ಯತ್ನಿಸಿದಾಗಲೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದವು. 2007 ರಲ್ಲಿ ಇಲಾಖೆಯು ನಗರದಲ್ಲಿ ಶಾಲೆಗಳು ಬೆಳಿಗ್ಗೆ 8.30 ರಿಂದ ಕಾರ್ಯನಿರ್ವಹಿಸಲು ಪ್ರಮುಖ ನಿರ್ಧಾರ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.