ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ; ಕೆಆರ್​ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು

ಇಂದು ಹಬ್ಬವಿರುವ ಕಾರಣ ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಜನಜಂಗುಳಿ ಕಂಡ ಬಂತು. ಕಾಲು ಇಡಲು ಸಾಧ್ಯವಾಗದಷ್ಟು ಜನಸಾಗರವೇ ತುಂಬಿ ಹಬ್ಬಕ್ಕೆ ಬೇಕಾದ ಅಗತ್ಯವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ರು. ಒಂದು ಕಡೆ ಹೂ ಹಣ್ಣು ಖರೀದಿಯಲ್ಲಿ ಹೆಣ್ಣು ಮಕ್ಕಳು ಬ್ಯೂಸಿಯಾದರೆ ಮತ್ತೊಂದು ಕಡೆ ಗಣೇಶ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗಂಡ್ ಹೈಕಳು ಬ್ಯೂಸಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ; ಕೆಆರ್​ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು
ಕೆಆರ್ ಮಾರ್ಕೆಟ್
Follow us
| Updated By: ಆಯೇಷಾ ಬಾನು

Updated on: Sep 18, 2023 | 7:44 AM

ಬೆಂಗಳೂರು, ಸೆ.18: ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ(Gowri Ganesha Festival) ಸಂಭ್ರಮ ಮನೆ ಮಾಡಿದೆ. ಹಬ್ಬ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಕೂಡ ಜೋರಾಗಿದೆ. ಹೂವು, ಹಣ್ಣು, ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ಕೆ.ಆರ್​.ಮಾರ್ಕೆಟ್​ನಲ್ಲಿ(KR Market) ಜನ ಸೇರಿದ್ದಾರೆ. ಭಾದ್ರಪದ ಚೌತಿಯಂದು ಬರುವ ಗೌರಿ ಗಣೇಶ ಹಬ್ಬದ ಆಚರಣೆಗೆ ಇಡೀ ದೇಶವೇ ಸಜ್ಜಾಗಿದ್ದು, ಗೌರಿ ಗಣೇಶ ಹಬ್ಬಕ್ಕೆ ಭರ್ಜರಿಯಾಗಿ ಖರೀದಿ ನಡೆಯುತ್ತಿದೆ. ಕಳೆದ ಎರಡ್ಮೂರು ವರ್ಷದಿಂದ ಕಳೆಗುಂದಿದ ಚೌತಿ ಹಬ್ಬ. ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಿಲಿಕಾನ್ ಸಿಟಿ ಮಂದಿ ತಯಾರಿ ನಡೆಸಿದ್ದಾರೆ.

ಮಾರುಕಟ್ಟೆಯಲ್ಲಿ ಗರಿಗೇದರಿದ ಹಬ್ಬದ ವಾತಾವರಣ

ಇಂದು ಹಬ್ಬವಿರುವ ಕಾರಣ ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಜನಜಂಗುಳಿ ಕಂಡ ಬಂತು. ಕಾಲು ಇಡಲು ಸಾಧ್ಯವಾಗದಷ್ಟು ಜನಸಾಗರವೇ ತುಂಬಿ ಹಬ್ಬಕ್ಕೆ ಬೇಕಾದ ಅಗತ್ಯವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ರು. ಒಂದು ಕಡೆ ಹೂ ಹಣ್ಣು ಖರೀದಿಯಲ್ಲಿ ಹೆಣ್ಣು ಮಕ್ಕಳು ಬ್ಯೂಸಿಯಾದರೆ ಮತ್ತೊಂದು ಕಡೆ ಗಣೇಶ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗಂಡ್ ಹೈಕಳು ಬ್ಯೂಸಿಯಾಗಿದ್ದಾರೆ. ಇನ್ನೂ ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಹೂ-ಹಣ್ಣು ಬೆಲೆ ಕೊಂಚ ಕಡಿಮೆ ಇದ್ದ ಕಾರಣ ಜನರು ಸ್ವಲ್ಪ ನಿಟ್ಟುಸಿರು ಬಿಡುತ್ತಾ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಹೂವಿನ ಬೆಲೆ ಎಷ್ಟಿದೆ?

ಎಷ್ಟಿದೆ ಹಣ್ಣುಗಳ ಬೆಲೆ?

  • ಏಲಕ್ಕಿ ಬಾಳೆ -120 ರಿಂದ 140 ರೂ.
  • ಅನಾನಸ್ -30 ರಿಂದ 70 ರೂ.
  • ದಾಳಿಂಬೆ -50 ರಿಂದ 100 ರೂ.
  • ಸೇಬು -180 ರಿಂದ 250 ರೂ.
  • ಸೀಬೆ -60 ರಿಂದ 80 ರೂ.

ತರಕಾರಿ ಬೆಲೆ

  • ಹಾಗಲಕಾಯಿ – 60ರೂ.
  • ಬಿಟ್ರೋಟ್ – 40ರೂ.
  • ಬೀನ್ಸ್ – 80ರೂ.
  • ಬದನೆಕಾಯಿ – 60ರೂ.
  • ಎಲೆಕೋಸು – 80ರೂ.
  • ಮೂಲಂಗಿ – 60ರೂ.
  • ಹಸಿರುಮೆಣಸಿನ ಕಾಯಿ – 60ರೂ.
  • ಬೆಂಡೆ ಕಾಯಿ – 40ರೂ.
  • ನುಗ್ಗೆಕಾಯಿ – 60ರೂ.
  • ಟೋಮಾಟೋ – 15ರೂ.
  • ಈರುಳ್ಳಿ – 30ರೂ.
  • ಬೆಳ್ಳುಳ್ಳಿ – 80ರೂ.

ಇನ್ನು, ಈ ಬಾರಿ ತರಕಾರಿ ಬೆಲೆ ಎಲ್ಲವೂ ಕಡಿಮೆಯಾಗಿದೆ.‌ ವ್ಯಾಪಾರವು ಚೆನ್ನಾಗಿ ನಡೆತ ಇದೆ. ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಜಾಸ್ತಿಯಾಗಿತ್ತು.‌ಈ ಬಾರಿ ಹೂ ಹಾಗೂ ಹಣ್ಣಿನ ದರ ಸ್ವಲ್ಪ ಜಾಸ್ತಿಯಾಗಿದೆ.‌ ಆದ್ರೂ ಗ್ರಾಹಕರು ಖರೀದಿ ಮಾಡ್ತಿದ್ದಾರೆ ಅಂತ ವ್ಯಾಪಾರಿಗಳು ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?