ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿ ತರಕಾರಿ ಸಿಪ್ಪೆ ಸುಲಿದ ಮಹಿಳೆ: ನೆಟ್ಟಿಗರು ಏನಂದ್ರು ನೋಡಿ
ಬೆಂಗಳೂರಿನ ಈ ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಟ್ರಾಫಿಕ್ನಲ್ಲಿ ಮಹಿಳೆಯೊಬ್ಬರು ತಮ್ಮ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವುದು ವೈರಲ್ ಆಗಿತ್ತು. ಇದೀಗ ಅದೇ ರೀತಿಯಾಗಿ ಮಹಿಳೆಯೊಬ್ಬರು ಟ್ರಾಫಿಕ್ನಲ್ಲಿ ಸಿಲುಕಿ ತರಕಾರಿ ಸುಲಿದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 18: ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ ಹಬ್ ಎಂದು ಖ್ಯಾತಿಯಾಗಿರುವ ಬೆಂಗಳೂರ ಟ್ರಾಫಿಕ್ (traffic) ಸಿಟಿ ಎಂಬ ಬಿರುದನ್ನು ಸಹ ಪಡೆದುಕೊಂಡಿದೆ. ಒಂದು ವರದಿಯ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಈ ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಟ್ರಾಫಿಕ್ನಲ್ಲಿ ಮಹಿಳೆಯೊಬ್ಬರು ತಮ್ಮ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವುದು ವೈರಲ್ ಆಗಿತ್ತು. ಇದೀಗ ಅದೇ ರೀತಿಯಾಗಿ ಮಹಿಳೆಯೊಬ್ಬರು ಟ್ರಾಫಿಕ್ನಲ್ಲಿ ಸಿಲುಕಿ ತರಕಾರಿ ಸುಲಿದಿದ್ದಾರೆ.
ಪ್ರಿಯಾ ಎಂಬ ಎಕ್ಸ್ ಬಳಕೆದಾರರೊಬ್ಬರು, ಟ್ರಾಫಿಕ್ನಲ್ಲಿ ಸಿಲುಕಿದ್ದು, ಕಾರಿನಲ್ಲಿ ತರಕಾರಿಗಳ ಸಿಪ್ಪೆ ಸುಲಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ದಟ್ಟಣೆಯ ಟ್ರಾಫಿಕ್ ಸಮಯದಲ್ಲಿ ನಾವು ಉತ್ಪಾದಕರಾಗಿರುವುದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಗಣೇಶ ಚತುರ್ಥಿ: ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನದಟ್ಟಣೆ, ಮೇಲ್ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸುಮಾರು 50,000 ವೀಕ್ಷಣೆ ಮತ್ತು ಸುಮಾರು 100 ಕಾಮೆಂಟ್ಗಳು ಬಂದಿವೆ. ಬೆಂಗಳೂರಿನ ದಟ್ಟಣೆಯ ಟ್ರಾಫಿಕ್ ಪ್ರಯಾಣಿಸುವಾಗ ಕಲಿವುದು, ಸಾಧಿಸುವುದು ಮತ್ತು ಬೆಳೆಯಲು ತುಂಬಾ ಇದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು, ಹಾಹಾ.. ಮೊಬೈಲ್ ಹೈಡ್ರೋಪೋನಿಕ್ಸ್ ಫಾರ್ಮ್ಗಳ ಕಲ್ಪನೆಯೊಂದಿಗೆ ಸ್ಟಾರ್ಟ್ ಅಪ್ ಕಂಪಗಳು ಬಂದರೂ ನನಗೆ ಆಶ್ಚರ್ಯವಾಗುವುದಿಲ್ಲ. ಬೆಂಗಳೂರಿನ ಈ ಟ್ರಾಫಿಕ್ ನಡುವೆ ಸಿಲ್ಕ್ ಬೋರ್ಡ್ನಿಂದ ಇಂದಿರಾನಗರವನ್ನು ತಲಪುವಷ್ಟರಲ್ಲಿ ಸಸ್ಯಗಳು ಬೆಳೆಯುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು, ಗಗನಕ್ಕೆ ಏರಿದ ಹೂವು-ಹಣ್ಣು ಬೆಲೆ
ಸಮದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಕೆಲವು ಬಳಕೆದಾರರು ತಿಳಿಸಿದ್ದಾರೆ.
ಕ್ಲಾಸಿಕ್ ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿವೆ. ಇದು ಬೆಂಗಳೂರಿನ ಟ್ರಾಫಿಕ್ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:18 am, Mon, 18 September 23