ಹೂವಿನಿಂದಲ್ಲ, ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ: ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟು, ನಾಣ್ಯಗಳಿಂದ ಸಿಂಗಾರ
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ. ಇಡೀ ದೇಗುಲದ ಆವರಣದಲ್ಲಿ ನೋಟು, ನಾಣ್ಯದ ಡೆಕೋರೇಷನ್ ಮಾಡಲಾಗಿದ್ದು, 58 ಲಕ್ಷ ಮೌಲ್ಯದ 5, 10, 20 ನಾಣ್ಯಗಳು, 10, 20, 50, 100, 200, 500, 2000 ನೋಟುಗಳಿಂದ ಅಲಂಕಾರ ಮಾಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 17: ಗಣೇಶನ ಹಬ್ಬಕ್ಕೆ (Ganesh festival) ಕೌಂಟ್ ಡೌನ್ ಶುರುವಾಗಿದೆ. ನಾಳೆ ಗಣೇಶನ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಹೂವಿನಂದಲ್ಲ, ಬದಲಿಗೆ ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಸತ್ಯಸಾಯಿ ಗಣಪತಿ ದೇಗುಲದಲ್ಲಿ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯಗಳಿಂದ ಅಲಂಕಾರ ಮಾಡಲಾಗಿದೆ. ಇಡೀ ದೇಗುಲದ ಆವರಣದಲ್ಲಿ ನೋಟು, ನಾಣ್ಯದ ಡೆಕೋರೇಷನ್ ಮಾಡಲಾಗಿದ್ದು, 58 ಲಕ್ಷ ಮೌಲ್ಯದ 5, 10, 20 ನಾಣ್ಯಗಳು, 10, 20, 50, 100, 200, 500, 2000 ನೋಟುಗಳಿಂದ ಹೂವಿನ ಸರಮಾಲೆಯ ವಿಶೇಷ ಬಗೆಯ ಅಲಂಕಾರದಲ್ಲಿ ಗಣೇಶನನ್ನು ನೋಡುವುದೇ ಚಂದ. ನಾಳೆ ಬೆಳಿಗ್ಗೆಯಿಂದ ಗಣೇಶನಿಗೆ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
