Video: ಅರಣ್ಯಾಧಿಕಾರಿಗಳು ಗಸ್ತಿನಲ್ಲಿರುವಾಗ ಎದುರಾದ ಒಂಟಿ ಸಲಗ: ಜೀಪ್​​ ನೋಡಿ ಹೆದರಿ ಹಿಮ್ಮುಖವಾಗಿ ಓಡಿದ ಕಾಡಾನೆ

Video: ಅರಣ್ಯಾಧಿಕಾರಿಗಳು ಗಸ್ತಿನಲ್ಲಿರುವಾಗ ಎದುರಾದ ಒಂಟಿ ಸಲಗ: ಜೀಪ್​​ ನೋಡಿ ಹೆದರಿ ಹಿಮ್ಮುಖವಾಗಿ ಓಡಿದ ಕಾಡಾನೆ

ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2023 | 4:42 PM

Chamarajanagar News: ಜೀಪನ್ನು ನೋಡಿ ಹೆದರಿದ  ಒಂಟಿ ಸಲಗ ಹಿಮ್ಮುಖವಾಗಿ ಓಡಿದೆ. ಬಂಡೀಪುರದಲ್ಲಿ ನಡೆದ ಘಟನೆ ಹೇಳಲಾಗುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೀಪ್ ಬರುತ್ತಿರುವುದನ್ನು ಗಮನಿಸಿದ ಭಾರೀ ಗಾತ್ರದ ಕಾಡಾನೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಓಡಿದೆ.

ಚಾಮರಾಜನಗರ, ಸೆಪ್ಟೆಂಬರ್​ 17: ಪ್ರಾಣಿಗಳು ಕೆಲವೊಮ್ಮೆ ಮಾಡುವಂತಹ ತಂಟಾಟಗಳು ನೋಡುಗರಲ್ಲಿ ಖುಷಿ ತರುತ್ತದೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಜೀಪನ್ನು ನೋಡಿ ಹೆದರಿದ ಒಂಟಿ ಸಲಗ (elephant) ಹಿಮ್ಮುಖವಾಗಿ ಓಡಿದೆ. ಬಂಡೀಪುರದಲ್ಲಿ ನಡೆದ ಘಟನೆ ಹೇಳಲಾಗುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೀಪ್ ಬರುತ್ತಿರುವುದನ್ನು ಗಮನಿಸಿದ ಭಾರೀ ಗಾತ್ರದ ಕಾಡಾನೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಓಡಿದೆ. ಅರಣ್ಯಾಧಿಕಾರಿಗಳು ಗಸ್ತಿನಲ್ಲಿರುವಾಗ ಸಿಂಗಲ್ ಟಸ್ಕರ್ ಎದುರಾಗಿದೆ. ಈ ವೇಳೆ ವಾಹನದ ಆಕ್ಸಿಲೆಟರ್ ರೈಸ್ ಮಾಡಿರುವ ಜೀಪ್​ನ ಚಾಲಕ ಜೀಪ್​ ಸದ್ದು ಮಾಡುತ್ತಿದ್ದಂತೆ ಹೆದರಿ ಪರಾರಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.