ಬೆಂಗಳೂರು ಆಗ್ನೇಯ ವಿಭಾಗ ಪೊಲೀಸರಿಂದ ಡಿಜಿಟಲೀಕರಣ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಹೊಸ ವ್ಯವಸ್ಥೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 03, 2023 | 7:39 AM

ರಜೆ, ಡ್ಯೂಟಿ ಸೇರಿದಂತೆ ಇತರೆ ಕೆಲಸಗಳ ನಿಮಿತ್ತ ಪೊಲೀಸ್ ಸಿಬ್ಬಂದಿ ಟಪಲ್ ಹಿಡಿದುಕೊಂಡು ಡಿಸಿಪಿ ಕಚೇರಿ ಅಲೆದಾಡಬೇಕಿತ್ತು. ಆದ್ರೆ, ಇದೀಗ ಬೆಂಗಳೂರು ನಗರ ಆಗ್ನೇಯ ಪೊಲೀಸ್​ ವಿಭಾಗ ಸಿಬ್ಬಂದಿ ಅಲೆದಾಟಕ್ಕೆ ಬ್ರೇಕ್ ಹಾಕಿದೆ. ಹೌದು.. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಪೊಲೀಸ್​ ಸಿಬ್ಬಂದಿ ಇನ್ಮುಂದೆ ಪ್ರತಿನಿತ್ಯ ಟಪಲ್ ಹಿಡಿದುಕೊಂಡು ಓಡಾಡುವಂತಿಲ್ಲ. ಡಿಸಿಪಿ ಬೆಂಗಳೂರು ನಗರದ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದ್ದಾರೆ. ಏನಿದು?

ಬೆಂಗಳೂರು ಆಗ್ನೇಯ ವಿಭಾಗ ಪೊಲೀಸರಿಂದ ಡಿಜಿಟಲೀಕರಣ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಹೊಸ ವ್ಯವಸ್ಥೆ
ಬೆಂಗಳೂರು ನಗರ ಆಗ್ನೇಯ ಪೊಲೀಸ್​​ ವಿಭಾಗ
Follow us on

ಬೆಂಗಳುರು, (ಅಕ್ಟೋಬರ್ 03): ಬೆಂಗಳೂರು ನಗರ ಆಗ್ನೇಯ ಪೊಲೀಸ್​​ ವಿಭಾಗದ (bengaluru South East Division Police) ಒಂದಲ್ಲ ಒಂದು ಜನ ಸ್ನೇಹಿಗೆ ಹೆಸರು ವಾಸಿಯಾಗಿದೆ. ಹೌದು…ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ತಮ್ಮ ವ್ಯಾಪ್ತಿಯ ಎಲ್ಲ ವಿಭಾಗದ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿತ್ತು. ಅಲ್ಲದೇ ತ್ವರಿತಗತಿಯಲ್ಲಿ ದೂರು ಸ್ವೀಕರಿಸುವ ನಿಟ್ಟಿನಲ್ಲಿ QR ಕೋಡ್ ಸಾಫ್ಟ್ ವೇರ್ ಸಿದ್ಧಪಡಿಸಲಾಗಿತ್ತು. ಇದೀಗ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಸಿಬ್ಬಂದಿಗೆ ರಜೆ, ಪ್ರಮೋಷನ್ , ಹೆಲ್ತ್ ಸಮಸ್ಯೆ , ಸ್ಯಾಲರಿ, ರಿಟೈನ್ಮೆಂಟ್ ಸೆಟ್ಮಲೆಂಟ್ , ಟಪಾಲು ಡ್ಯೂಟಿ ಏನೇ ಇದ್ದರೂ ಸಹ ಇನ್ಮುಂದೆ ಡಿಸಿಪಿ ಕಚೇರಿಗೆ ಬರುವಂತಿಲ್ಲ. ಸ್ಥಳದಲ್ಲೇ ಆನ್​ಲೈನ್ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ.

ಹದಿನಾಲ್ಕು ಸ್ಟೇಷನ್ , ಮೂರು ಎಸಿಪಿ ಕಚೇರಿ, ಡಿಸಿಪಿ ಕಚೇರಿಯಲ್ಲಿ ಈ ಹೊಸ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿ ಇನ್ಮುಂದೆ ಪ್ರತಿನಿತ್ಯ ಟಪಲ್ ಹಿಡಿದುಕೊಂಡು ಓಡಾಡುವಂತಿಲ್ಲ. ರಜೆ ಬೇಕಂದ್ರೆ ಸಿಬ್ಬಂದಿ ಡಿಸಿಪಿ ಕಚೇರಿಗೆ ಬರುವಂತಿಲ್ಲ. ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದ್ದಾರೆ. ಸರ್ಕಾರದ ಇ-ಆಪೀಸ್ ವೆಬ್ ಸೈಟ್ ಬಳಸಿ ಆಡಳಿತ ವ್ಯವಸ್ಥೆಯ ಡಿಜಿಟಲೀಕರಣ ಪ್ರಾಯೋಗಿಕ ಯಶಸ್ವಿಯಾಗಿದೆ. ಒಂದು ಇ-ಮೇಲ್ ಮಾಡಿದ್ರೆ ಸಾಕು ಒಂದು ಗಂಟೆಯಲ್ಲಿ ಕೆಲಸ ಪೂರ್ಣವಾಗಲಿದೆ. ಈ ಮೂಲಕ ಟಪಾಲ್ ಗೆಂದು ಸೀಮಿತವಾಗಿದ್ದ 34 ಸಿಬ್ಬಂದಿ ಬೇರೆ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಸಿಬ್ಬಂದಿ ಕೆಲಸದ ಮೇಲೆ ನಿಗಾ ಇಡಲು ಆಗ್ನೇಯ ವಿಭಾಗದ ಡಿಸಿಪಿಯಿಂದ ಹೊಸ ಪ್ರಯತ್ನ

ಡಿಸಿಪಿ ಸಹಿ ಕೂಡಾ ಆನ್ ಲೈನ್ ಮೂಲಕವೇ ವ್ಯವಸ್ಥೆ ಮಾಡಲಾಗಿದ್ದು, ಇನ್ಮುಂದೆ ಡಿಸಿಪಿ ಕಚೇರಿಗೆ ದಾಖಲೆಗಳನ್ನ ಹಿಡಿದುಕೊಂಡು ಹೋಗುವಂತಿಲ್ಲ. ಇನ್ಸ್ ಪೆಕ್ಟರ್ ಸೇರಿದಂತೆ ಎಸಿಪಿ ಕೂಡಾ ಕಚೇರಿಯಲ್ಲಿ ಕುಳಿತಕೊಂಡೇ ಕೆಲಸ ಮಾಡಬಹುದು. ಬೇರೆ ಬಂದೋಬಸ್ತ್ ಅಥವಾ ಹೊರಗೆ ಡ್ಯೂಟಿ ಇದ್ದರೂ ಲ್ಯಾಟ್ ಟಾಪ್ ಮೂಲಕ ಸಂವಹನ ಮಾಡಬಹುದು. ಇದರೊಂದಿಗೆ ಡಿಜಿಟಲ್ ಮಾಡುವ ಮೂಲಕ ಸಮಯ ಉಳಿತಾಯ, ಇಲಾಖೆಯ ಹಣ ವ್ಯಯಕ್ಕೆ ಬ್ರೇಕ್ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಈ ಹೊಸ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಕಮಿಷನರ್ ದಯಾನಂದ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ