ಬೆಂಗಳೂರು: ಬಿಎಂಡಬ್ಲ್ಯು ಬೈಕ್​ನ ವೇಗ ತೋರಿಸಲು ಹೋಗಿ ಅಪಘಾತ, ವ್ಯಕ್ತಿ ಸಾವು

| Updated By: Ganapathi Sharma

Updated on: Dec 21, 2023 | 10:03 AM

ನಾಸಿರ್ ಮತ್ತು ಮುದಾಸಿರ್ ಇಬ್ಬರೂ ಬೈಕ್ ಡೀಲರ್ ಆಗಿದ್ದರು. ಮುದಾಸಿರ್ ತನ್ನ ಗ್ರಾಹಕರೊಬ್ಬರಿಗೆ ಅತ್ಯಾಧುನಿಕ ಬೈಕ್‌ಗಾಗಿ ಹುಡುಕುತ್ತಿದ್ದರು. ಮುದಾಸಿರ್‌ಗೆ ತೋರಿಸಲು ನಾಸಿರ್‌ ಬಿಎಂಡಬ್ಲ್ಯು ಬೈಕ್‌ ಪಡೆದಿದ್ದರು. ಇವರಿಬ್ಬರು ಬೈಕ್​ನಲ್ಲಿ ತೆರಳುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರು: ಬಿಎಂಡಬ್ಲ್ಯು ಬೈಕ್​ನ ವೇಗ ತೋರಿಸಲು ಹೋಗಿ ಅಪಘಾತ, ವ್ಯಕ್ತಿ ಸಾವು
ಬೆಂಗಳೂರು: ಬಿಎಂಡಬ್ಲ್ಯು ಬೈಕ್​ನ ವೇಗ ತೋರಿಸಲು ಹೋಗಿ ಅಪಘಾತ, ವ್ಯಕ್ತಿ ಸಾವು
Follow us on

ಬೆಂಗಳೂರು, ಡಿಸೆಂಬರ್ 21: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಅತ್ಯಾಧುನಿಕ ಬಿಎಂಡಬ್ಲ್ಯು ಬೈಕ್ (BMW Bike) ಕಾರಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಇಬ್ಬರು ಬೈಕ್ ಡೀಲರ್‌ಗಳು ಬಿಎಂಡಬ್ಲ್ಯು 1000 ಸಿಸಿ ಬೈಕ್‌ನ ವೇಗದ ಬಗ್ಗೆ ಮಾಹಿತಿ ನೀಡಲು ಅದನ್ನು ವೇಗವಾಗಿ ಓಡಿಸಿ ತೋರಿಸಿದಾಗ ಘಟನೆ ಸಂಭವಿಸಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಶೇಖ್ ನಾಸಿರ್ (32) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸೈಯದ್ ಮುದಾಸಿರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಸಿರ್ ಮತ್ತು ಮುದಾಸಿರ್ ಇಬ್ಬರೂ ಬೈಕ್ ಡೀಲರ್ ಆಗಿದ್ದರು. ಮುದಾಸಿರ್ ತನ್ನ ಗ್ರಾಹಕರೊಬ್ಬರಿಗೆ ಅತ್ಯಾಧುನಿಕ ಬೈಕ್‌ಗಾಗಿ ಹುಡುಕುತ್ತಿದ್ದರು. ಮುದಾಸಿರ್‌ಗೆ ತೋರಿಸಲು ನಾಸಿರ್‌ ಬಿಎಂಡಬ್ಲ್ಯು ಬೈಕ್‌ ಪಡೆದಿದ್ದರು.

ಇವರಿಬ್ಬರು ಬೈಕ್​ನಲ್ಲಿ ತೆರಳುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುದಾಸಿರ್ ದೂರ ಎಸೆಯಲ್ಪಟ್ಟರು. ಗಾಯಾಳುಗಳಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಾಸಿರ್ ಮೃತಪಟ್ಟಿದ್ದಾರೆ. ಮುದಾಸಿರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಮಾಧವ್ ಪಾರ್ಕ್‌ನಿಂದ ಅಶೋಕ ಪಿಲ್ಲರ್‌ಗೆ ತೆರಳುತ್ತಿದ್ದು, ಕಾರು ಕನಪಾಳ್ಯದಿಂದ ಬರುತ್ತಿತ್ತು. ಕಾರು ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅತಿವೇಗದಲ್ಲಿ ಸಂಚರಿಸಿದ್ದು, ಸಮಯಕ್ಕೆ ಸರಿಯಾಗಿ ಬೈಕ್ ನಿಯಂತ್ರಿಸಲು ಸಾಧ್ಯವಾಗದಿರುವುದು ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದನ್ನೂ ಓದಿ: ಅಫಜಲಪುರ-ಕಲಬುರಗಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

ಮಾಲೀಕರನ್ನು ಪತ್ತೆಹಚ್ಚಲು ಪೊಲೀಸರು ಬೈಕ್‌ನ ನೋಂದಣಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಡಬ್ಲ್ಯು ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ