AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನೀರು ಉಳಿಸುವ ಪ್ರಯತ್ನಕ್ಕೆ ದೊಡ್ಡ ಜಯ, ಪ್ರತಿ ದಿನ ಕೋಟ್ಯಂತರ ಲೀಟರ್ ನೀರು ಸೇವ್

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಎದುರಾಗಿದ್ದ ಸಂದರ್ಭದಲ್ಲಿ, ನೀರಿನ ಉಳಿತಾಯದ ದೃಷ್ಟಿಯಿಂದ ಹೊಸ ಪ್ರಯೋಗವೊಂದನ್ನು ಅನುಷ್ಠಾನಗೊಳಿಸಲಾಗಿತ್ತು. ಅನಿಯಮಿತ ನೀರು ಪೋಲಾಗುವುದನ್ನು ತಡೆಯಲು ಅಪಾರ್ಟ್​​ಮೆಂಟ್​ಗಳು, ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಟ್ಯಾಪ್ ಏರೇಟರ್​​ಗಳನ್ನು ಅಳವಡಿಸಲು ಬೆಂಗಳೂರು ಜಲಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದೀಗ ಫಲಕೊಡುತ್ತಿದ್ದು, ಪ್ರತಿದಿನ ಕೋಟ್ಯಂತರ ಲೀಟರ್ ನೀರು ಉಳಿತಾಯವಾಗುತ್ತಿದೆ.

ಬೆಂಗಳೂರಿನಲ್ಲಿ ನೀರು ಉಳಿಸುವ ಪ್ರಯತ್ನಕ್ಕೆ ದೊಡ್ಡ ಜಯ, ಪ್ರತಿ ದಿನ ಕೋಟ್ಯಂತರ ಲೀಟರ್ ನೀರು ಸೇವ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Oct 06, 2025 | 3:05 PM

Share

ಬೆಂಗಳೂರು, ಅಕ್ಟೋಬರ್ 6: ಬೆಂಗಳೂರಿನಲ್ಲಿ ತೀವ್ರ ಬರ ಹಾಗೂ ನೀರಿನ ಬಿಕ್ಕಟ್ಟು ಎದುರಾದ ನಂತರ, ಜೀವ ಜಲದ ಅನಿಯಂತ್ರಿತ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಕಳೆದ ವರ್ಷ ಕಠಿಣ ಕ್ರಮಕ್ಕೆ ಮುಂದಾಗಿತ್ತು. ನಗರದ ದೊಡ್ಡ ದೊಡ್ಡ ಅಪಾರ್ಟ್​​ಮೆಂಟ್​ಗಳಲ್ಲಿ, ರಸ್ಟೋರೆಂಟ್​ಗಳಲ್ಲಿ, ಹೋಟೆಲ್​​ಗಳಲ್ಲಿ ಹಾಗೂ ಬೃಹತ್ ಕಟ್ಟಡಗಳಲ್ಲಿ ಟ್ಯಾಪ್ ಏರೇಟರ್‌ (tap aerators)  ಅಳವಡಿಸುವುದನ್ನು ಕಡ್ಡಾಯಗೊಳಿಸಿತ್ತು. ಅದೀಗ ಫಲಕೊಡುತ್ತಿದೆ. ಈ ಟ್ಯಾಪ್ ಏರೇಟರ್​​ನಿಂದ ದಿನದಲ್ಲಿ 10 ಕೋಟಿ ಲೀಟರ್​ಗೂ ಹೆಚ್ಚು ನೀರು ಉಳಿತಾಯವಾಗುತ್ತಿದೆ. ಇದೀಗ ನೀರಿನ ಉಳಿತಾಯಕ್ಕೆ ಟ್ಯಾಪ್ ಏರೇಟರ್​ಗಳು ಅತ್ಯುತ್ತಮ ಸಾಧನಗಳೆಂಬುದು ಸಾಬೀತಾಗಿದೆ.

ಏನಿದು ಟ್ಯಾಪ್ ಏರೇಟರ್‌?

ಇದು ನಲ್ಲಿಗಳಿಗೆ ಜೋಡಿಸಲಾಗುವ  ಸಣ್ಣ ಸಾಧನ. ಈ ಸಾಧನಗಳನ್ನು ನಲ್ಲಿಗಳಿಗೆ ಜೋಡಿವುದರಿಂದ ಶಾಲೆಗಳು, ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು ಮತ್ತು ಮಾಲ್‌ಗಳಲ್ಲಿ ಪ್ರತಿದಿನ ಕೋಟ್ಯಂತರ ಲೀಟರ್‌ಗಳಷ್ಟು ನೀರು ಉಳಿತಾಯವಾಗುತ್ತಿದೆ. ಕಳೆದ ವರ್ಷ ಮಾಡಿದ ಈ ಪ್ರಯೋಗದಿಂದ, ಇದೀಗ ನಗರದಲ್ಲಿ ಈ ಟ್ಯಾಪ್ ಏರೇಟರ್‌ ಅಳವಡಿಕೆ ಹೆಚ್ಚಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಬೆಂಗಳೂರಿನಾದ್ಯಂತ ಇಲ್ಲಿಯವರೆಗೆ 15 ಲಕ್ಷಕ್ಕೂ ಹೆಚ್ಚು ಏರೇಟರ್‌ಗಳನ್ನು ಅಳವಡಿಸಲಾಗಿದೆ. ಟ್ಯಾಪ್ ಏರೇಟರ್‌ ನಿಯಮ ಪಾಲಿಸದವರಿಗೆ 5,000 ರೂ. ದಂಡ ಮತ್ತು ಕಡಿಮೆ ನೀರಿನ ಪೂರೈಕೆಯ ಶಿಕ್ಷೆ ವಿಧಿಸಲಾಗುತ್ತಿದೆ.

ದೊಡ್ಡ ಪ್ರಮಾಣದಲ್ಲಿ ಈ ಬದಲಾವಣೆಗಳ ನಂತರ ನೀರು ಸರಬರಾಜು ಮಾಡಿದ ನಂತರ ಅಧಿಕಾರಿಗಳು ದಿನಕ್ಕೆ ಸುಮಾರು 100 ಮಿಲಿಯನ್ (10 ಕೋಟಿ) ಲೀಟರ್ ನೀರನ್ನು ಉಳಿಸಿದ್ದಾರೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ. 2024-25 ರಲ್ಲಿ ಟ್ಯಾಪ್ ಏರೇಟರ್‌ ನಿಯಮ ಉಲ್ಲಂಘಿಸಿದ 594 ಪ್ರಕರಣಗಳು ಪತ್ತೆಯಾಗಿದ್ದು, ದೂರು ದಾಖಲಿಸಲಾಗಿದೆ. ಸುಮಾರು 30 ಲಕ್ಷ ರೂ. ದಂಡವನ್ನು ಸಂಗ್ರಹಸಲಾಗಿದೆ ಎಂದು ವರದಿ ತಿಳಿಸಿದೆ. ಏರೇಟರ್‌ಗಳನ್ನು ಹೆಚ್ಚಾಗಿ ಹ್ಯಾಂಡ್‌ವಾಶ್ ನಲ್ಲಿಗಳಿಗೆ ಸೇರಿಸಲಾಗುತ್ತದೆ. ಈ ಸಾಧನಗಳು ನೀರಿನ ಹರಿವನ್ನು ನಿಮಿಷಕ್ಕೆ 10 ರಿಂದ 15 ಲೀಟರ್‌ಗಳಿಂದ ಕೇವಲ 3 ರಿಂದ 4 ಲೀಟರ್‌ಗಳಿಗೆ ಇಳಿಸುತ್ತವೆ, ಕೆಲವು ಸಂದರ್ಭಗಳಲ್ಲಿ ವ್ಯರ್ಥವಾಗುವುದನ್ನು ಕೂಡ ಶೇಕಡಾ 50 ರಿಂದ 80 ರಷ್ಟು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಸುಸೈಡ್ ಹಾಟ್ ಸ್ಪಾಟ್ ಆಗುತ್ತಿದೆಯೇ ನಮ್ಮ ಮೆಟ್ರೋ ಸ್ಟೇಷನ್​ಗಳು; ಪಿಎಸ್ಡಿ ಡೋರ್ ಅಳವಡಿಸಲು ಹೆಚ್ಚಾಯ್ತು ಪ್ರಯಾಣಿಕರಿಂದ ಒತ್ತಡ!

ಇನ್ನು ಏರೇಟರ್‌ಗಳನ್ನು ಮೊದಲು ಅಳವಡಿಸಿದ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟ (BAF) ಈ ಪ್ರಯತ್ನದಲ್ಲಿ ಹಾಗೂ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ . ಶಾಲಾ ವಿದ್ಯಾರ್ಥಿಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಜಲ ಸಂರಕ್ಷಣಾ ತಜ್ಞ ಮಾಧವನ್ ರಾವ್ ಈ ಬಗ್ಗೆ ಅನೇಕ ಮಾಹಿತಿ ನೀಡಿದ್ದಾರೆ. #MissionSchools10MLD ಅಭಿಯಾನದ ಮೂಲಕ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ರಾವ್ ಈ ಮಾದರಿಯನ್ನು 1,000 ಶಾಲೆಗಳಿಗೆ ಅಳವಡಿಸುವ ಮೂಲಕ,  ಪ್ರತಿದಿನ 10 ಮಿಲಿಯನ್ ಲೀಟರ್ ಉಳಿಸುವ ಗುರಿಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Mon, 6 October 25

Follow Us
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ
ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!