AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ’: ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!

ಸದನದಲ್ಲಿ ಶಾಸಕರು ಐಪಿಎಲ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರಿಂದ ಕೆಎಸ್‌ಸಿಎ ಉಚಿತ ಟಿಕೆಟ್ ನೀಡಲು ಒಪ್ಪಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ, ಶಾಸಕ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಟಿಕೆಟ್‌ಗಳನ್ನು ನಿರಾಕರಿಸಿದ್ದಾರೆ. ವಿಐಪಿ ಸಂಸ್ಕೃತಿ ಮತ್ತು ಜನಪ್ರತಿನಿಧಿಗಳ ನಂಬಿಕೆಗೆ ಧಕ್ಕೆ ಕುರಿತು ಸುರೇಶ್ ಕುಮಾರ್ ತಮ್ಮ ವಿರೋಧ ವ್ಯಕ್ತಪಡಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ': ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!
'ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ' ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!
ಭಾವನಾ ಹೆಗಡೆ
| Edited By: |

Updated on:Mar 28, 2026 | 4:12 PM

Share

ಬೆಂಗಳೂರು, ಮಾರ್ಚ್​ 28: ಐಪಿಎಲ್ ಮ್ಯಾಚ್​ಗಳ ಟಿಕೆಟ್ (IPL Ticket) ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮಗೆ ಐಪಿಎಲ್ ಟಿಕೆಟ್​ಗಳನ್ನು ನೀಡಬೇಕೆಂದುದಕ್ಕೆ ಸ್ಪಂದಿಸಿರುವ ಕೆಎಸ್‌ಸಿಎ, ತಥಾಸ್ತು ಎಂದಿದೆ. ಸದನದಲ್ಲಿ ಚರ್ಚೆಯಾಗಿ ಕೇವಲ 24 ಗಂಟೆಗಳಲ್ಲಿಯೇ ಈ ರೀತಿಯ ಸ್ಪಂದನೆ ದೊರೆತಿರುವುದೂ ವಿವಾದವೆದ್ದಿದೆ. ಆದರೆ ಈ ಎಲ್ಲಾ ಜಟಾಪಟಿ ನಡುವೆ ಎಮ್ಎಲ್ಎ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಿಕೆಟ್​ಗಳನ್ನು ನಿರಾಕರಿಸಿದ್ದಾರೆ.

ಟಿಕೆಟ್ ಬೇಡವೆಂದು ಫೆಸ್​ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ ಐಪಿಎಲ್ ಟಿಕೆಟ್​​ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್‌ಸಿಎ ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 2+1 ಒಟ್ಟು 3 ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಕೊಂಡಿದೆ. ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್‌ಸಿಎ, ಮುಂದಿನ‌ ಐಪಿಎಲ್‌ ಪಂದ್ಯಕ್ಕೆ 5 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ಇದೆಲ್ಲದರ ನಡುವೆ ವಿಜಯೇಂದ್ರ ಟಿಕೆಟ್ ನಿರಾಕರಿಸಿದ್ದಲ್ಲದೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೂಡ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ 24 ಗಂಟೆಯಲ್ಲೇ ಬಗೆಹರಿದ ಶಾಸಕರ IPL ಟಿಕೆಟ್ ಜ್ವಲಂತ ಸಮಸ್ಯೆ, ಒಬ್ಬರಿಗೆ ಎಷ್ಟು ಗೊತ್ತಾ?

ಪೋಸ್ಟ್​ನಲ್ಲೇನಿದೆ?

ಶಾಸಕರು ಐಪಿಎಲ್ ಟಿಕೆಟ್ ಸ್ವೀಕರಿಸುವುದನ್ನು ಖಂಡಿಸಿರುವ ಸುರೇಶ್ ಕುಮಾರ್ , ಮಾಧ್ಯಮಗಳಲ್ಲಿ ಸುದ್ದಿಯಾಗಿರುವಂತೆ ಪ್ರತಿಯೊಬ್ಬ ಶಾಸಕರಿಗೆ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡುವ ವಿಷಯಕ್ಕೆ ತಮ್ಮ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ ಎಂದ ಶಾಸಕ, ವಿಧಾನಸಭೆಯಲ್ಲಿ ಚರ್ಚೆ ನಡೆದ 24 ಗಂಟೆಗಳಲ್ಲಿ ಸರ್ಕಾರ ತಕ್ಷಣ ಘೋಷಣೆ ಮಾಡಿರುವುದು ಆಶ್ಚರ್ಯಕರ. ಜನಪ್ರತಿನಿಧಿಗಳ ವಿಷಯ ಬಂದಾಗ ಮಾತ್ರ ಕಾರ್ಯ ಕೈಗೊಳ್ಳುವುದರಿಂದ ಸಾರ್ವಜನಿಕ ನಂಬಿಕೆಗೆ ಹೊಣೆ ಬರುತ್ತದೆ. ಆ ಟಿಕೆಟ್ ಅಥವಾ ಪಾಸ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತೇನೆ. ವಿಐಪಿ ಸಂಸ್ಕೃತಿ ಮುಂದುವರಿದಂತೆ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್​ ಅವರಿಗೆ ಪತ್ರ ಬರದಿರುವ ಅವರು, “ನನ್ನ ಹೆಸರಿನಲ್ಲಿ ಬೇರೆ ಯಾರಿಗೂ ಐ ಪಿ ಎಲ್​ ಟಿಕೆಟ್​ ನೀಡಬಾರದು,” ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Sat, 28 March 26

Follow Us
ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ?
ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!
ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!
ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ
ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ