AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು, ಉದ್ಯಮದಲ್ಲಿ ನಂಬರ್ ಒನ್: ಸಿಎಂ ಬೊಮ್ಮಾಯಿ

ಬಂಗಾರದ ಊರು ಅಂದರೆ ಅದು ಬೆಂಗಳೂರು. ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು. ಬೆಂಗಳೂರು ಉದ್ಯಮದಲ್ಲಿ ನಂಬರ್ ಒನ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು, ಉದ್ಯಮದಲ್ಲಿ ನಂಬರ್ ಒನ್: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Nov 18, 2022 | 9:26 PM

Share

ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit) ಯಶಸ್ವಿಯಾಗಿದೆ. ಈ ಯಶಸ್ಸನ್ನು ನಾವೆಲ್ಲ ಮುಂದೆ ಕೊಂಡೊಯ್ಯಬೇಕು. ಬಂಗಾರದ ಊರು ಅಂದರೆ ಅದು ಬೆಂಗಳೂರು. ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು. ಬೆಂಗಳೂರು ಉದ್ಯಮದಲ್ಲಿ ನಂಬರ್ ಒನ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕೊನೆಯ ದಿನವಾದ ಇಂದು (ನ.18) ಟೆಕ್ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಕಳೆದ 3 ದಿನಗಳಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಟೆಕ್ ಶೃಂಗಸಭೆಗೆ ಇಂದು ತೆರೆ ಬಿದ್ದಿದೆ. ಕೊನೆದಿನದ ಶೃಂಗಸಭೆಯಲ್ಲಿ ಮಾತನಾಡಿದ ಅವರು ನಂಬರ್ ಒನ್ ಪಟ್ಟ ಉಳಿಸಿಕೊಳ್ಳುವುದೇ ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲು. ಹಿಂದೆ ಬೆಂಗಳೂರಿನಲ್ಲಿ ಮಹಾ ಸರಸ್ವತಿ ನೆಲೆಸಿದ್ದಳು. ಈಗ ಮಹಾಲಕ್ಷ್ಮಿ‌ ಕೂಡ ನೆಲೆಸಿದ್ದಾಳೆ. ಮುಂದಿನ ಟೆಕ್ ಸಮ್ಮಿಟ್​​ಗೆ ಎಲ್ಲರೂ ಸೇರೋಣ. ಆಗ ಈಗಿನದಕ್ಕಿಂತ ಹೆಚ್ಚು ಯಶಸ್ವಿ ಉದ್ಯಮಿಗಳು ಬರುವಂತಾಗಲಿ. ಮುಂದಿನ ಟೆಕ್ ಸಮ್ಮಿಟ್ ಬಿಯಾಂಡ್ ಬೆಂಗಳೂರು ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಟೆಕ್ ಶೃಂಗಸಭೆಯಲ್ಲಿ ಒಟ್ಟು 32 ದೇಶಗಳು ಭಾಗಿಯಾಗಿದ್ದವು

ಬೆಂಗಳೂರಿನ ಟೆಕ್ ಶೃಂಗಸಭೆ ಸಭೆಯಲ್ಲಿ ಒಟ್ಟು 32 ದೇಶಗಳು ಭಾಗಿಯಾಗಿದ್ದವು ಎಂದು ಐಟಿ-ಬಿಟಿ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಒಟ್ಟು 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, 72 ಸಂವಾದಗಳು ನಡೆದಿವೆ ಎಂದರು.

405 ಭಾಷಣಕಾರರು, 9,356 ಉದ್ಯಮಿ ಪ್ರತಿನಿಧಿಗಳು‌ ಭಾಗಿಯಾಗಿದ್ದು, ಟೆಕ್ ಶೃಂಗಸಭೆಯಲ್ಲಿ 585 ಸ್ಟಾಲ್‌ಗಳನ್ನು ತೆರೆಯಲಾಗಿತ್ತು. 25,728ಕ್ಕೂ ಹೆಚ್ಚು ಜನ ಸ್ಟಾಲ್‌ಗಳಿಗೆ ಭೇಟಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Fri, 18 November 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು