ಬೆಂಗಳೂರಿನಲ್ಲಿ ಎಮ್ಮೆಗಳಿಂದ ಟ್ರಾಫಿಕ್: ಪ್ರತಿನಿತ್ಯ ಕಿರಿಕಿರಿಯಿಂದ ಎಮ್ಮೆಗಳ ವಿರುದ್ಧ ದೂರು ನೀಡಿದ ಟೆಕ್ಕಿಗಳು
ಎಮ್ಮೆಗಳ ಕಾಟಕ್ಕೆ ಕಂಗಾಲಾದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಸಮಸ್ಯೆಯಿಂದ ಪಾರು ಮಾಡುವಂತೆ ಟ್ವಿಟರ್ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru Traffic) ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಕೆಲ ಪ್ರಮುಖ ರಸ್ತೆಗಳಲ್ಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಆದ್ರೆ, ಇದೀಗ ಬೆಂಗಳೂರಿನಲ್ಲಿ ಎಮ್ಮೆಗಳಿಂದ(buffaloes) ವಾಹನ ಸವಾರರಿಗೆ ಟ್ರಾಫಿಕ್ ಕಿರಿ-ಕಿರಿ ಉಂಟಾಗಿದೆ. ಹೌದು..ಎಮ್ಮೆಗಳ ಕಾಟಕ್ಕೆ ಕಂಗಾಲಾದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು (techies) ಸಮಸ್ಯೆಯನ್ನು ಪರಿಹರಿಸುವಂತೆ ಟ್ವಿಟರ್ ಮೂಲಕ ಪೊಲೀಸ್ ಮೊರೆ ಹೋಗಿದ್ದು, ಮಾರ್ನಿಂಗ್ ಟೈಮ್ ನಲ್ಲಿ ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ತೊಂದರೆಯಾಗುತ್ತಿದೆ. ಎಮ್ಮೆಗಳಿಂದ ಆಫೀಸ್‌ಗೆ ಹೋಗುವ ಮಾರ್ಗಮಧ್ಯೆ ಭಾರಿ ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಕಸವನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಐಟಿ ಕಂಪನಿಗಳು ಕೇಂದ್ರೀಕೃತವಾಗಿವೆ. ಕಚೇರಿಗೆ ಹೋಗಲು ರಸ್ತೆಯಲ್ಲಿನ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನು ಒಳಗೊಂಡಂತೆ 20 ನಿಮಿಷದ ದಾರಿಯನ್ನು ಕ್ರಮಿಸಬೇಕಿರುತ್ತದೆ. ಆದರೆ, ಕಚೇರಿಗೆ ಹೋಗುವ ಬೆಳಗ್ಗಿನ ಜಾವದಲ್ಲೇ ಹಿಂಡು- ಹಿಂಡಾಗಿ ಎಮ್ಮೆಗಳು ರಸ್ತೆಯಲ್ಲೇ ಇರುತ್ತವೆ. ಈ ವೇಳೆ ಎಮ್ಮೆಗಳು ಕಾರು, ಬೈಕ್, ಬಸ್, ಬೈಕ್‌ಗಳು ಸೇರಿ ಎಲ್ಲ ವಾಹನಗಳಿಗೆ ಅಡ್ಡ್ ನಿಲ್ಲುತ್ತವೆ. ಇದರಿಂದ ನಿತ್ಯವೂ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ ಎಂದು ಅವಲತ್ತುಕೊಂಡಿದ್ದಾರೆ.
Daily march of buffalos on #Kasavanahalli mainroad,choking entire peak traffic for 30mins. Just 2kms away from Wipro,Microsoft’s of the world.All complaints to @ArvindLBJP @BBMPCOMM @hsrltrafficps yield nothing!#Lawless #Administration of #ITCorridor@DCPTrEastBCP@SplCPTraffic pic.twitter.com/rCmjRyy0Od
— SaveBellandur(ಬೆಳ್ಳಂದೂರು ಉಳಿಸಿ) (@kdevforum) January 20, 2023
ಇನ್ನು ಕೆಲವೊಮ್ಮೆ ಸರದಿ ಸಾಲಿನಲ್ಲಿ ರಸ್ತೆಯನ್ನು ದಾಟಲು ಎಮ್ಮೆಗಳು ಮುಂದಾಗುತ್ತವೆ. ಈ ವೇಳೆ 30 ರಿಂದ 45 ನಿಮಿಷ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗುತ್ತದೆ. ಇದ್ರಿಂದ ನಗರದ ಕಸವನಹಳ್ಳಿ ರೋಡ್ ನಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಆಫೀಸ್ಗಳಿಗೆ ತೆರಳಲು ತಡವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆ ಕಳೆದ ಆರೇಳು ತಿಂಗಳಿನಿಂದ ನಿತ್ಯ ಸಂಭವಿಸುತ್ತಿದೆ ಎಂದು ಟೆಕ್ಕಿಗಳು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಟೆಕ್ಕಿಗಳು ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.