Bangalore Power Cut: ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಎಲ್ಲೆಲ್ಲಿ?

| Updated By: ಆಯೇಷಾ ಬಾನು

Updated on: Aug 14, 2023 | 2:24 PM

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಣೆ ಕಾರ್ಯದಿಂದಾಗಿ ಬೆಂಗಳೂರು ನಗರದ ಹಲವು ಕಡೆ ಇಂದು ಮತ್ತು ನಾಳೆ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಕಟ್ ಆಗುವ ನಿರೀಕ್ಷೆ ಇದೆ.

Bangalore Power Cut: ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ, ಎಲ್ಲೆಲ್ಲಿ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆ.14: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಎರಡೂ ಕಂಪನಿಗಳು ನಡೆಸುತ್ತಿರುವ ಹಲವು ನಿರ್ವಹಣೆ ಕಾರ್ಯದಿಂದಾಗಿ ಬೆಂಗಳೂರು ನಗರದಲ್ಲಿ ಇಂದು ಅಂದರೆ ಸೋಮವಾರ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ.

ತ್ರೈಮಾಸಿಕ ನಿರ್ವಹಣೆ, ನಿರ್ಮಾಣ ಮತ್ತು ಸ್ಟ್ರಿಂಗ್ ಕೆಲಸ, 24×7 ನೀರು ಸರಬರಾಜು ಕೆಲಸ, ಓರೆಯಾದ ಕಂಬಗಳ ನೇರಗೊಳಿಸುವಿಕೆ, ಕ್ಲಿಯರಿಂಗ್/ಕಟಿಂಗ್, ಸ್ವಯಂ ನಿರ್ವಹಣಾ ಯೋಜನೆಯಡಿಯಲ್ಲಿ ಲೈನ್‌ಗಳನ್ನು ಬದಲಾಯಿಸುವುದು ಮತ್ತು ಲೈನ್‌ಗಳನ್ನು ಲಿಂಕ್ ಮಾಡುವುದು ಇತ್ಯಾದಿ ಸೇರಿದಂತೆ ಅನೇಕ ನಿರ್ವಹಣೆ ಕಾರ್ಯಗಳು ಇಂದು ನಡೆಯಲಿವೆ. ಬಹುತೇಕ ಕಾಮಗಾರಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ನಿರೀಕ್ಷೆಯಿದೆ, ಆದರೆ ಕೆಲವು ಯೋಜನೆಗಳು ಸಂಜೆ 5 ಗಂಟೆಯವರೆಗೆ ನಡೆಯಬಹುದು, ಇದರ ಪರಿಣಾಮವಾಗಿ ಕನಿಷ್ಠ ಆರು ಗಂಟೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಪ್ರಯಾಣಿಕರ ಸುರಕ್ಷತೆಗಾಗಿ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ಯಾನಿಕ್ ಬಟನ್​​, ಜಿಪಿಎಸ್​ ಅಳವಡಿಕೆ

ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಎಸ್.ಎಸ್.ಹೈಟೆಕ್ ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆಟ್ಟು, ಶಿವಕುಳೇನೂರು, ಕೊಂಡದಹಳ್ಳಿ, ಚಿಕ್ಕೋಡ, ಮಠದ ಗ್ರಾ.ಪಂ., ಜಿ.ಎನ್.ಕೆರೆ ಗ್ರಾ.ಪಂ., ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ ಸುತ್ತಮುತ್ತ, ಕೈಗಾರಿಕಾ ಪ್ರದೇಶ ಸುತ್ತಮುತ್ತ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಶಿಕ್ಷಕರ ಕಚೇರಿ ಸುತ್ತಮುತ್ತಲಿನ ಪ್ರದೇಶಗಳು, ಡಿ.ಎಸ್.ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳದಹಳ್ಳಿ, ಕೆನ್ನೆದೆಲಾವು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಇನಹಳ್ಳಿ, ಸೀಬರ, ಸಿದ್ದವನದುರ್ಗ ಸುತ್ತಮುತ್ತಲಿನ ಪ್ರದೇಶಗಳು, ಮಾದನಾಯಕನಹಳ್ಳಿ, ಯಲವರ್ತಿ ಸುತ್ತಮುತ್ತಲಿನ ಪ್ರದೇಶಗಳು, ದೇವರಹಳ್ಳಿ, ಗಂಗೂರು, ಯರಗಟ್ಟಿಹಳ್ಳಿ, ನೀತಿಗೆರೆ, ಕೊರಟಿಕೆರೆ, ಗುಳ್ಳಹಳ್ಳಿ, ಹೊಳೆಹಳ್ಳಿ, ಹೊಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪ ಕೇಂದ್ರಗಳು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 12:09 pm, Mon, 14 August 23