Bangalore Tirupati Helicopter: ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ, ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ ಆರಂಭ, ಇಲ್ಲಿದೆ ದರ, ಸಮಯ

ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಫ್ಲೈಬ್ಲೇಡ್​​ ಇಂಡಿಯಾ ಸಂಸ್ಥೆ ಸಹಿಸುದ್ದಿ ನೀಡಿದೆ. ಈ ಕಂಪನಿ ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರಿಗೆ ಹೆಲಿಕಾಪ್ಟರ್​ ಸೇವೆ ಆರಂಭಿಸಿದೆ.

Bangalore Tirupati Helicopter: ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ, ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ ಆರಂಭ, ಇಲ್ಲಿದೆ ದರ, ಸಮಯ
ಬೆಂಗಳೂರು-ತಿರುಪತಿ ಹೆಲಿಕಾಪ್ಟರ್​ ಸೇವೆ
Follow us
ವಿವೇಕ ಬಿರಾದಾರ
|

Updated on:Jun 09, 2023 | 10:32 AM

ಬೆಂಗಳೂರು: ತಿರುಪತಿಯ (Tirupati) ಶ್ರೀ ವೆಂಕಟೇಶ್ವರ ಸ್ವಾಮಿ (Venkateswara Swamy) ದೇವಸ್ಥಾನ ದೇಶದಲ್ಲೇ ಪ್ರಸಿದ್ಧಿಯಾದ ಪುಣ್ಯಕ್ಷೇತ್ರ. ಭಾರತದ (India) ವಿವಿಧ ಪ್ರದೇಶಗಳಿಂದ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಪ್ರತಿನಿತ್ಯ ಭೇಟಿ ನೀಡುತ್ತಾರೆ. ಇದರಲ್ಲಿ ಕರ್ನಾಟಕವೇನು ಹೊರತಾಗಿಲ್ಲ. ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಪ್ರತಿನಿತ್ಯ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಇದೀಗ ಬೆಂಗಳೂರಿನಿಂದ ತಿರುಪತಿಗೆ (Bengaluru-Tirupati) ತೆರಳುವ ಭಕ್ತರಿಗೆ ಫ್ಲೈಬ್ಲೇಡ್​​ ಇಂಡಿಯಾ ಸಂಸ್ಥೆ ಸಹಿಸುದ್ದಿ ನೀಡಿದೆ. ಈ ಕಂಪನಿ ಬೆಂಗಳೂರಿನಿಂದ ತಿರುಪತಿಗೆ (Bengaluru-Tirupati Helicopter) ತೆರಳುವ ಭಕ್ತರಿಗೆ ಹೆಲಿಕಾಪ್ಟರ್​ ಸೇವೆ ಆರಂಭಿಸಿದೆ.

ಹಂಚ್ ವೆಂಚರ್ಸ್ ಮತ್ತು ಬೇಡ್ ಏರ್ ಮೊಬಿಲಿಟಿ ಜಂಟಿಯಾಗಿ ಸ್ಥಾಪಿಸಿದ ಕಂಪನಿಯು ಬೆಂಗಳೂರು – ತಿರುಪತಿ ನಡುವೆ ಹಲಿಕಾಪ್ಟರ್ ಸೇವಯನ್ನು ಪ್ರಾರಂಭಿಸಿದೆ. ಈ ಹಲಿಕಾಪ್ಟರ್‌ನಲ್ಲಿ ಯಾತ್ರಾರ್ಥಿಗಳು ಬೆಂಗಳೂರಿನಿಂದ ತಿರುಪತಿ, ಮರಳಿ ತಿರುಪತಿಯಿಂದ ಬೆಂಗಳೂರಿಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.

ತಿರುಪತಿ ಯಾತ್ರಾರ್ಥಿಗಳು ಹೆಲಿಕಾಪ್ಟರ್ ಸೇವೆಯನ್ನು ಯಾವಾಗ ಬೇಕಾದರೂ ಬಳಸಬಹುದು. ಕಂಪನಿಯು ಸೇವೆಯ ಬೆಲೆಯನ್ನು ರೂ.3,50,000 ಎಂದು ನಿಗದಿಪಡಿಸಿದೆ. ಪ್ರತಿ ಹಲಿಕಾಪ್ಟರ್‌ನಲ್ಲಿ ಗರಿಷ್ಠ ಐದು ಜನರು ಪ್ರಯಾಣಿಸಬಹುದು. ಪ್ರಯಾಣಿಕರು ಸಂಪೂರ್ಣ ಹಲಿಕಾಪ್ಟರ್​​ ಅನ್ನು ಬುಕ್ ಮಾಡಬಹುದು ಅಥವಾ ಇತರರೊಂದಿಗೆ ಹಂಚಿಕೊಳ್ಳಬಹುದು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ; ಸೆ.1 ರಿಂದ ಟರ್ಮಿನಲ್ 2ನಿಂದ ಕಾರ್ಯಾಚರಿಸಲಿವೆ ಅಂತಾರಾಷ್ಟ್ರೀಯ ವಿಮಾನಗಳು

ಹಲಿಕಾಪ್ಟರ್ ಸಮಯ

ಹಲಿಕಾಪ್ಟರ್ ಪ್ರಯಾಣವು ಬೆಂಗಳೂರಿನ HAL ವಿಮಾನ ನಿಲ್ದಾಣದಿಂದ ತಿರುಪತಿಗೆ ಬೆಳಿಗ್ಗೆ 09:15-09:30 ನಡುವೆ ಪ್ರಾರಂಭವಾಗುತ್ತದೆ. ತಿರುಪತಿಯಿಂದ ಬೆಂಗಳೂರಿಗೆ ಹಿಂತಿರುಗುವ ಹಲಿಕಾಪ್ಟರ್‌ಗಳು ಸಂಜೆ 04:00 ರಿಂದ 04:15 ರವರೆಗೆ ಹೊರಡುತ್ತವೆ. ಬೆಂಗಳೂರು-ತಿರುಪತಿ ನಡುವಿನ ಸಂಪರ್ಕವನ್ನು ಸುಧಾರಿಸಲು ಕಂಪನಿಯು ಈ ಸೇವೆಯನ್ನು ಪರಿಚಯಿಸಿದೆ. ವಯಸ್ಸಾದವರಿಗೆ ಹೆಚ್ಚು ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ಒದಗಿಸಲು ಇದನ್ನು ಪರಿಚಯಿಸಲಾಗಿದೆ.

ಬೇಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಮಿತ್‌ ದತ್ತಾ ಮಾತನಾಡಿ, ಭಾರತದಲ್ಲಿ ತೀರ್ಥಯಾತ್ರೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ವಯೋವೃದ್ಯರು ದೇವಸ್ಥಾನಗಳಿಗೆ ಹೋಗಲು ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಪ್ರಮುಖ ಆಧ್ಯಾತ್ಮಿಕ ತಾಣವಾದ ತಿರುಪತಿಗೆ ಒಂದೇ ದಿನದಲ್ಲಿ ಹೋಗಿ ಬರಲು ಬೇಡ್ ಇಂಡಿಯಾ ಹೆಲಿಕಾಪ್ಟರ್​ ಸೇವೆ ಆರಂಭಿಸಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 am, Fri, 9 June 23