ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ಪ್ರತಿಷ್ಠಾಪನೆ: ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಚಿವ ಕಿಶನ್ ರೆಡ್ಡಿ ಸಂತಸ
ಇಂದು ನಡೆದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ "ಪ್ರಾಣ ಪ್ರತಿಷ್ಠಾಪನೆ"ಯಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಕಿಶನ್ ರೆಡ್ಡಿ ಕೂಡ ಭಾಗವಹಿಸಿದ್ದರು.
ಜಮ್ಮುವಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಿರುಪತಿ ಬಾಲಾಜಿ (Tirupati Balaji Temple) ದೇವಸ್ಥಾನವನ್ನು ಗೃಹ ಸಚಿವ ಅಮಿತ್ ಶಾ ಗುರುವಾರ ಉದ್ಘಾಟಿಸಿದ್ದಾರೆ. ವೆಂಕಟೇಶ್ವರ ಸ್ವಾಮಿ ದೇವಸ್ಥಾನದ “ಪ್ರಾಣ ಪ್ರತಿಷ್ಠಾಪನೆ”ಯಲ್ಲಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಕಿಶನ್ ರೆಡ್ಡಿ ಕೂಡ ಭಾಗವಹಿಸಿದ್ದು, ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಜಮ್ಮುವಿನಲ್ಲಿ ನಡೆದ ಭಗವಾನ್ ವೆಂಕಟೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯದ ಭಾಗವಾಗುವ ಮೂಲಕ ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದೇನೆ. ಮಹಾ ಸಂಪ್ರೋಕ್ಷಣೆಯ ಭಾಗವಾಗಿ ವಿಗ್ರಹವನ್ನು ಪ್ರತಿಷ್ಠಾಪಿಸುವುದರಿಂದ ಒಂದು ಕಾಲದಲ್ಲಿ ಮಹರ್ಷಿ ಕಶ್ಯಪರ ನೆಲೆಯಾಗಿದ್ದ ಈ ಭೂಮಿಗೆ ಶಕ್ತಿ ತುಂಬುದಂತ್ತಾಗಿದೆ ಎಂದರು.
ಜಮ್ಮು ಪ್ರದೇಶದ ಅತಿದೊಡ್ಡ ದೇವಾಲಯಗಳಲ್ಲಿ ಒಂದು
ಇಂದು ಗುರುವಾರ ಧ್ವಜಾರೋಹಣ ಮತ್ತು ಸರ್ವದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಾಗವಹಿಸಿ ಮಾತನಾಡಿದ್ದು, ವೆಂಕಟೇಶ್ವರ ದೇವಾಲಯವು ಜಮ್ಮು ಪ್ರದೇಶದ ಅತಿದೊಡ್ಡ ದೇವಾಲಯಗಳಲ್ಲಿ ಒಂದು ಎಂದು ಹೇಳಿದರು.
I feel blessed to be a part of the Prana prathishta of Lord Venkateswara Swamy varu that took place at Jammu.
The consecration of the idol as a part of the Maha Samprokshana will energise this land that was once home to Maharishi Kashyapa pic.twitter.com/h5PlyP51q9
— G Kishan Reddy (@kishanreddybjp) June 8, 2023
ಇದನ್ನೂ ಓದಿ: Tirupati Balaji Temple: ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ
ದೇಶಾದ್ಯಂತ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಬಾಲಾಜಿಯ ದೇವಾಲಯಗಳಿವೆ. ಸದ್ಯ ಉದ್ಘಾಟನೆ ಆಗಿರುವ ದೇವಸ್ಥಾನವು ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ತಿರುಪತಿ ಬಾಲಾಜಿಗೆ ನಮಸ್ಕರಿಸಲು ಅವಕಾಶ ನೀಡುತ್ತದೆ. ಈ ಪ್ರದೇಶದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಸಲಿದೆ ಎಂದು ತಿಳಿಸಿದರು.
ಗರ್ಭಗುಡಿಯಲ್ಲಿ 8 ಅಡಿ ಎತ್ತರದ ವೆಂಕಟೇಶ್ವರನ ವಿಗ್ರಹ
ಜಮ್ಮುವಿನ ತಿರುಪತಿ ಬಾಲಾಜಿ ದೇವಸ್ಥಾನವನ್ನು 62 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಆವರಣದಲ್ಲಿ ವೇದ ಪಾಠಶಾಲೆ, ಹಾಸ್ಟೆಲ್, ಕೊಠಡಿಗಳು, ಕಲ್ಯಾಣಮಂಟಪವನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಗರ್ಭಗುಡಿಯಲ್ಲಿ 8 ಅಡಿ ಎತ್ತರದ ವೆಂಕಟೇಶ್ವರನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಭೂಮಿಯನ್ನು ಟಿಟಿಡಿ ಮಂಡಳಿಗೆ 40 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದೆ. ಅದರ ನಂತರ ತಿರುಪತಿ ದೇವಸ್ಥಾನವು ಇಲ್ಲಿ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಈ ದೇವಾಲಯದ ಭೂಮಿ ಪೂಜೆಯನ್ನು 2021ರ ಜೂನ್ 13ರಂದು ಮಾಡಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.