Tirupati Balaji Temple: ಜಮ್ಮುವಿನಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ
ಜಮ್ಮುವಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನವನ್ನು ಗೃಹ ಸಚಿವ ಅಮಿತ್ ಶಾ ಇಂದು ಉದ್ಘಾಟಿಸಿದ್ದಾರೆ.
ಜಮ್ಮುವಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನವನ್ನು ಗೃಹ ಸಚಿವ ಅಮಿತ್ ಶಾ ಇಂದು ಉದ್ಘಾಟಿಸಿದ್ದಾರೆ. ಜಮ್ಮು ದೇವಾಲಯವು ಆಂಧ್ರಪ್ರದೇಶದ ಹೊರಗೆ ನಿರ್ಮಿಸಲಾದ ಆರನೇ ಬಾಲಾಜಿ ದೇವಾಲಯವಾಗಿದೆ, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಈ ಹಿಂದೆ ಹೈದರಾಬಾದ್, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ನಿರ್ಮಿಸಲಾಗಿದೆ.
ಜಮ್ಮುವಿನ ತಿರುಪತಿ ಬಾಲಾಜಿ ದೇವಸ್ಥಾನ ದರ್ಶನಕ್ಕೆ ತೆರೆದುಕೊಳ್ಳುವುದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಧಾರ್ಮಿಕ ಮತ್ತು ತೀರ್ಥಯಾತ್ರೆಯ ಪ್ರವಾಸೋದ್ಯಮವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಟಿಟಿಡಿ ದೇಶಾದ್ಯಂತ ಬಾಲಾಜಿ ದೇವಾಲಯಗಳನ್ನು ನಿರ್ಮಿಸುತ್ತಿದೆ, ಇದರಿಂದಾಗಿ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದವರು ಇತರ ನಗರಗಳಲ್ಲಿನ ಈ ದೇವಾಲಯಗಳಿಗೆ ಭೇಟಿ ನೀಡಬಹುದು.
#UPDATE | J&K L-G Manoj Sinha inaugurates the Tirupati Balaji temple in Jammu’s Sidhra
The temple has been built on 62 acres of land with approx cost of Rs 25 crores and construction work was completed in the span of two years pic.twitter.com/qYniVLUp7k
— ANI (@ANI) June 8, 2023
ಜಮ್ಮುವಿನ ತಿರುಪತಿ ಬಾಲಾಜಿ ದೇವಸ್ಥಾನವನ್ನು 62 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಆವರಣದಲ್ಲಿ ವೇದ ಪಾಠಶಾಲೆ, ಹಾಸ್ಟೆಲ್, ಕೊಠಡಿಗಳು, ಕಲ್ಯಾಣಮಂಟಪವನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಗರ್ಭಗುಡಿಯಲ್ಲಿ 8 ಅಡಿ ಎತ್ತರದ ವೆಂಕಟೇಶ್ವರನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಭೂಮಿಯನ್ನು ಟಿಟಿಡಿ ಮಂಡಳಿಗೆ 40 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದೆ. ಅದರ ನಂತರ ತಿರುಪತಿ ದೇವಸ್ಥಾನವು ಇಲ್ಲಿ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಿತ್ತು. ಈ ದೇವಾಲಯದ ಭೂಮಿ ಪೂಜೆಯನ್ನು 2021ರ ಜೂನ್ 13ರಂದು ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Thu, 8 June 23