ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ: ಬೆಂಗಳೂರಿನ ಈ ರಸ್ತೆಯಲ್ಲಿ ಸೋಮವಾರ, ಮಂಗಳವಾರ ಸಂಚಾರ ಬಂದ್​​

|

Updated on: Aug 25, 2024 | 8:23 AM

Bengaluru Traffic Advisory For Krishna Janmashtami: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಬೆಂಗಳೂರಿನ ಈ ರಸ್ತೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಯಾವ ರಸ್ತೆಯಲ್ಲಿ ಸಂಚಾರವಿಲ್ಲ, ಬದಲಿ ಮಾರ್ಗ ಯಾವುದು ಇಲ್ಲಿದೆ ಮಾಹಿತಿ

ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ: ಬೆಂಗಳೂರಿನ ಈ ರಸ್ತೆಯಲ್ಲಿ ಸೋಮವಾರ, ಮಂಗಳವಾರ ಸಂಚಾರ ಬಂದ್​​
Follow us on

ಬೆಂಗಳೂರು, ಆಗಸ್ಟ್ 25: ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಉತ್ಸವದ ಪ್ರಯುಕ್ತ ಆಗಸ್ಟ್ 26 ಮತ್ತು 27 ರಂದು ಬೆಂಗಳೂರು (Bengaluru) ನಗರದ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹಾಗೆ ಮತ್ತು ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ರಥೋತ್ಸವಿದೆ. ಹೀಗಾಗಿ ಈ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೂಲಿಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂಜಾ ಮತ್ತು ರಥೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸೋಮವಾರ ಬೆಳಗ್ಗೆ 8 ರಿಂದ ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧಿಸಲಾಗಿದೆ. ವಾಹನ ಸವಾರರ ಅನುಕೂಲಕ್ಕಾಗಿ ಸಂಚಾರ ಪೊಲೀಸರು ಮಾರ್ಗ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗಳಲ್ಲಿ ಭಾನುವಾರ, ಸೋಮವಾರ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಪರ್ಯಾಯ ಮಾರ್ಗ:

ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಯಿಂದ ದೇವಸಂದ್ರ ಮತ್ತು ಕೆ.ಆರ್.ಪುರ ಮಾರ್ಕೇಟ್ ಕಡೆಗೆ ಸಂಚರಿಸುವ ವಾಹನ ಸವಾರರು ಜೈ ಭುವನೇಶ್ವರಿ ಜಂಕ್ಷನ್ ಲುಲೂಸ್ ಬೇಕರಿ ಹತ್ತಿರ ಬಲ ತಿರುವು ಪಡೆದು ಆಯ್ಕೆಪ್ಪನಗರ ಮುಖ್ಯರಸ್ತೆ – ಬಸವನಪುರ ಮುಖ್ಯರಸ್ತೆ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಕೆ.ಆರ್.ಪುರ ಮಾರ್ಕೇಟ್ ಕಡೆಗೆ ಸಂಚರಿಸುವುದು.

ಕೆ.ಆರ್.ಪುರ ಮಾರ್ಕೇಟ್ ಕಡೆಯಿಂದ ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಗೆ ಸಂಚರಿಸುವ ವಾಹನ ಸವಾರರು ಜಿ.ಆರ್.ಟಿ. ಹತ್ತಿರ ಬಲ ತಿರುವು ಪಡೆದು ಬಸವನಪುರ ಮುಖ್ಯರಸ್ತೆಯಲ್ಲಿ (ಕೃಷ್ಣ ಟಾಕೀಸ್ ರಸ್ತೆ) ಸಂಚರಿಸಿ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಮಂದೆ ಸಂಚರಿಸುವುದು.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸುವ ಮೂಲಕವೂ ಸಂಚಾರ ಪೊಲೀಸರು ಸಂಚಾರ್ ನಿರ್ಬಂಧ, ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸಂಚಾರ ದಟ್ಟಣೆ

2023 ರ ಏಪ್ರಿಲ್​ನಿಂದ 2024 ರ ಮಾರ್ಚ್ ರವರೆಗೆ ಬೆಂಗಳೂರಿನಲ್ಲಿ ಹೊಸ ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಒಟ್ಟು 6.37 ಲಕ್ಷ ವಾಹನಗಳು ನೋಂದಣಿಯಾಗಿವೆ. ಇದು ಹಿಂದಿನ ವರ್ಷದ 4.37 ಲಕ್ಷ ನೋಂದಣಿಗಿಂತ ಗಮನಾರ್ಹ ಹೆಚ್ಚಳವಾಗಿದೆ. ಪರಿಣಾಮವಾಗಿ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 am, Sun, 25 August 24