ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದ ಟ್ರಾಫಿಕ್ ಪೊಲೀಸ್: ಒಂದೇ ದಿನಕ್ಕೆ 779 ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಅಪಘಾತ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ರೋಡ್ ರೇಜ್ ಪ್ರಕರಣಗಳು, ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದ್ದು, ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಆಗಸ್ಟ್ 22 ರಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದಿದ್ದಾರೆ.
ಬೆಂಗಳೂರು, ಆಗಸ್ಟ್ 24: ಬೆಂಗಳೂರಲ್ಲಿ ವೀಕೆಂಡ್ ಬಂತಂದ್ರೆ ಸಾಕು ಪಾರ್ಟಿ ಘಾಟು ಜೋರಾಗೆ ಇರುತ್ತೆ. ಅದೇ ನಶೆಯಲ್ಲಿ ಕುಡಿದು ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತ, ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಟ್ರಾಫಿಕ್ ಪೊಲೀಸರು (Traffic police) ಮುಂದಾಗಿದ್ದು, ಸರಿಯಾದ ಶಾಕ್ ನೀಡಿದ್ದಾರೆ. ಸಿಲಿಕಾನ್ ಸಿಟಿಯಾದ್ಯಂತ ನಗರ ಪೊಲೀಸರು ಹೆಣೆದಿದ್ದ ಬಲೆಗೆ ಬಿದ್ದ ವಾಹನ ಸವಾರರು ಕಂಗಾಲಾಗಿ ಹೋಗಿದ್ದಾರೆ.
ಡ್ರಂಕ್ ಅಂಡ್ ಡ್ರೈವ್ ಬೇಟೆ
ನಗರದಲ್ಲಿ ಅಪಘಾತ.. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ.. ರೋಡ್ ರೇಜ್ ಪ್ರಕರಣಗಳು..ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದ್ದು..ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಆಗಸ್ಟ್ 22 ರಿಂದ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಲ ದಿಟ್ಟ ಕ್ರಮಕೈಗೊಂಡ ಪೊಲೀಸರು: ವೀಕೆಂಡ್ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ
ಮದ್ಯಪಾನ ಮಾಡುವ ವಾಹನ ಸವಾರರ ಪರಿಶೀಲನೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಇದರ ಭಾಗವಾಗಿ ನಿನ್ನೆ ಒಂದೇ ದಿನ 1200 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಫೀಲ್ಡ್ಗೆ ಇಳಿದಿದ್ದು 34,676 ವಾಹನಗಳ ತಪಾಸಣೆ ನಡೆಸಿ 779 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಾಹನಗಳನ್ನು ವಶಕ್ಕೆ ಪಡೆದು ನೋಟಿಸ್ ಕೊಟ್ಟು ಕಳಿಸಿದ್ದಾರೆ. ಅಷ್ಟೇ ಅಲ್ಲಾ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸಲು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹಸಿರು ಮಾರ್ಗದ ಮೆಟ್ರೋ ಸಂಚಾರ ವ್ಯತ್ಯಯ: ಮಾರ್ಗ ಮಧ್ಯದಲ್ಲೇ ನಿಂತ ರೈಲು
ಇದೇ ಕಾರ್ಯಾಚರಣೆ ನಗರದಾದ್ಯಂತ ಇಂದು ಕೂಡ ಮುಂದುವರೆಯಲಿದೆ. ಇಂದು ಶನಿವಾರ ಆಗಿರೋದ್ರಿಂದ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗೊ ಸಾಧ್ಯತೆ ಇದೆ. ಹಾಗಾಗಿ ಸಂಚಾರ ಪೊಲೀಸರು ಮತ್ತಷ್ಟು ಅಲರ್ಟ್ ಆಗಲಿದ್ದಾರೆ. ಸಿಟಿ ಜನ ಯಾವುದಕ್ಕೂ ಸೇಫ್ ಆಗಿರಿ. ಕುಡಿದು ವಾಹನ ಚಾಲನೆ ಮಾಡಿದ್ರೆ ದಂಡ ಬೀಳೋದು ಫಿಕ್ಸ್. ಇದು ಒಂದು ಕಡೆ ಆದ್ರೆ ನಿಮ್ಮ ಜೀವಕ್ಕೆ ಕುತ್ತು ತರುವ ಸಾಧ್ಯತೆ ಕೂಡ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.