ಸರ್ಕಾರಿಂದ ಕೋಟ್ಯಂತರ ರೂ. ವೈದ್ಯಕೀಯ ಬಿಲ್‌ ಕ್ಲೈಮ್ ಮಾಡಿಕೊಂಡ ಎಂಎಲ್​​ಸಿ, ಶಾಸಕರು

ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ಅನಾರೋಗ್ಯದ ಹೆಸರಿನಲ್ಲಿ ಕೇವಲ ಒಂದೇ ವರ್ಷದಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ವೈದ್ಯಕೀಯ ಬಿಲ್‌ಗಳನ್ನು ಕ್ಲೈಮ್ ಮಾಡಿದ್ದಾರೆ. ನೈಜ ಹೋರಾಟಗಾರರ ವೇದಿಕೆಯ ಎಚ್ ವಿ ವೆಂಕಟೇಶ್ ಎಂಬುವರು ಕೆಳಿದ್ದ ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ. ಹಾಗಾದ್ರೆ, ಯಾರು ಎಷ್ಟೆಷ್ಟು ಹಣ ಕ್ಲೈಮ್ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.

ಸರ್ಕಾರಿಂದ  ಕೋಟ್ಯಂತರ ರೂ. ವೈದ್ಯಕೀಯ ಬಿಲ್‌  ಕ್ಲೈಮ್ ಮಾಡಿಕೊಂಡ ಎಂಎಲ್​​ಸಿ, ಶಾಸಕರು
Follow us
| Updated By: ರಮೇಶ್ ಬಿ. ಜವಳಗೇರಾ

Updated on:Aug 25, 2024 | 11:44 AM

ಬೆಂಗಳೂರು, (ಆಗಸ್ಟ್ 25): 1 ವರ್ಷದಲ್ಲಿ ಅಂದರೆ 2023ರ ಮೇ 1 ರಿಂದ 2024ರ ಜುಲೈವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರು ಅನಾರೋಗ್ಯದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ವೈದ್ಯಕೀಯ ಬಿಲ್‌ಗಳನ್ನು ಕ್ಲೈಮ್ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರೂ ಸಹ ತಮ್ಮ ಆರೋಗ್ಯಕ್ಕಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಕ್ಲೈಮ್​​ ಮಾಡಿದ್ದಾರೆ. ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ ಸರ್ಕಾರದ ಬರೋಬ್ಬರಿ 48.70 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಸಿಪಿ ಯೋಗೇಶ್ವರ್ (39.64 ಲಕ್ಷ ರೂಪಾಯಿ) ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ (17.03 ಲಕ್ಷ ರೂಪಾಯಿ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಅನಾರೋಗ್ಯ ಕಾರಣಕ್ಕಾಗಿ ಮೆಡಿಕಲ್ ಬಿಲ್ ಪಡೆದಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರ ಪಟ್ಟಿಯನ್ನು ಆರ್‌ಟಿಐ ಮಾಹಿತಿ ನೀಡಿದ್ದು, 2023ರ ಮೇ 1 ರಿಂದ 2024ರ ಜುಲೈವರೆಗೆ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಲಕ್ಷಾಂತರ ರೂಪಾಯಿ ಹಣವನ್ನು ಕ್ಲೇಮ್‌ ಮಾಡಿಕೊಂಡಿದ್ದಾರ. ಅನಾರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡಲು ಅವಕಾಶವಿದೆ. ಇದರಂತೆ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಲಕ್ಷ ಲಕ್ಷ ಹಣವನ್ನು ಕ್ಲೇಮ್‌ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೈಜ ಹೋರಾಟಗಾರ ಎಚ್ ವಿ ವೆಂಕಟೇಶ್ ಎಂಬುವರರ ಆರ್​​ಟಿಐಯಿಂದ ಈ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಫರ್​: ಗಣಿಗ ರವಿಕುಮಾರ್ ಆರೋಪ

ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಒಂದೇ ವರ್ಷದಲ್ಲಿ ದಾಖಲೆಯ 48.70 ಲಕ್ಷ ರೂಪಾಯಿ ಹಣವನ್ನು ಕ್ಲೇಮ್‌ ಮಾಡಿಸಿಕೊಂಡಿದ್ದಾರೆ. ಅತಿ ಹೆಚ್ಚು ಹಣ ಕ್ಲೈಮ್​ ಮಾಡಿದ ವಿಧಾನ ಪರಿಷತ್ ಸದಸ್ಯೆ ಇವರಾಗಿದ್ದಾರೆ. ಇನ್ನು ಕೋಟ್ಯಧಿಪತಿ ಸಿಪಿ ಯೋಗೇಶ್ವರ್‌ 2ನೇ ಸ್ಥಾನದಲ್ಲಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಅವರು ಸರ್ಕಾರಿದಂದ 39.64 ಲಕ್ಷ ರೂಪಾಯಿ ಹಣ ಕ್ಲೈಮ್​ ಮಾಡಿಸಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಖರ್‌ ಅವರ ತಮ್ಮ ಚನ್ನರಾಜ್‌ ಹಟ್ಟುಹೊಳಿ ಮೂರನೇ ಸ್ಥಾನದಲ್ಲಿದ್ದಾರೆ. ಅಕ್ಕ ಸಚಿವರಾಗಿದ್ರೂ ಆರೋಗ್ಯಕ್ಕಾಗಿ 17.03 ಲಕ್ಷ ರೂಪಾಯಿ ಬಿಲ್‌ಅನ್ನು ಹಟ್ಟಿಹೊಳಿ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕೂಡ ಅತಿ ಹೆಚ್ಚು ಕ್ಲೈಮ್​ ಮಾಡಿದ ವ್ಯಕ್ತಿ ಆಗಿದ್ದಾರೆ. ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ ಸರ್ಕಾರದ ಹಣವನ್ನು ಖರ್ಚು ಮಾಡಿದ್ದಾರೆ.

ಹಿರಿಯ ಶಾಸಕ ಲಕ್ಷ್ಮಣ್ ಸವದಿ ಸಹ ಸರ್ಕಾರದ ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಸರ್ಕಾರದಿಂದ ಅವರು 2.41 ಲಕ್ಷ ರೂಪಾಯಿ ಹಣವನ್ನು ಕ್ಲೈಮ್​ ಮಾಡಿದ್ದರೆ, ಜೆಡಿಎಸ್​ ಸದಸ್ಯ ಟಿ ಎ ಶರವಣ ಕೂಡ 2.14 ರೂಪಾಯಿ ಹಣ ಪಡೆದುಕೊಂಡಿದ್ದಾರೆ.

ಹೆಚ್ಚು ಮೆಡಿಕಲ್ ಬಿಲ್ ಕ್ಲೈಮ್‌ ಮಾಡಿದವರು

  • ಹರೀಶ್ ಕುಮಾರ್- 2 ಲಕ್ಷ ರೂಪಾಯಿ
  • ಮರಿತಿಬ್ಬೇಗೌಡ- 1,54,995 ರೂಪಾಯಿ
  • ಎನ್. ವಾಯ್ ನಾರಾಯಣಸ್ವಾಮಿ 3 ಲಕ್ಷ ರೂಪಾಯಿ
  • ಅಬ್ದುಲ್ ಜಬ್ಬಾರ್- 1,1,345 ರೂಪಾಯಿ
  • ಸುಧಾಮ್ ದಾಸ್- 2,04,542 ರೂಪಾಯಿ
  • ಸುನೀಲ್ ವಲ್ಯಾಪುರೆ- 2,75,000 ರೂಪಾಯಿ
  • ಛಲವಾದಿ ನಾರಾಯಣಸ್ವಾಮಿ- 1,18,828 ರೂಪಾಯಿ
  • ವೈಎಂ ಸತೀಶ್- 2,77,559 ರೂಪಾಯಿ
  • ಮಧು ಮಾದೇಗೌಡ- 2,46,233 ರೂಪಾಯಿ
  • ರಘುನಾಥ್ ಮಲ್ಕಾಪುರೆ- 1,34,823 ರೂಪಾಯಿ
  • ಎಂ ಜಿ ಮೂಳೆ- 2,24,282 ರೂಪಾಯಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:39 am, Sun, 25 August 24