Traffic advisory: ಬೆಂಗಳೂರಿನ ಈ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ

|

Updated on: Oct 19, 2024 | 9:18 AM

Bengaluru traffic advisory: ಬೆಂಗಳೂರಿನ ದೊಡ್ಡಗುಂಟ ದಸರಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಾಟರಿ ಮತ್ತು ಅಸ್ಸೆ ರಸ್ತೆಯಲ್ಲಿ ಎರಡು ದಿನ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗೇ ವಾಹನ ಪಾರ್ಕಿಂಗ್​​ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Traffic advisory: ಬೆಂಗಳೂರಿನ ಈ ರಸ್ತೆಯಲ್ಲಿ 2 ದಿನ ವಾಹನ ಸಂಚಾರ ನಿಷೇಧ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​ 19: ಬೆಂಗಳೂರು (Bengaluru) ನಗರದ ಈ ರಸ್ತೆಯಲ್ಲಿ ಎರಡು ದಿನ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಶನಿವಾರ ಮತ್ತು ರವಿವಾರ ರಂದು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಗುಂಟ ದಸರಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಇಂದು (ಅ.19) ಬೆಳಗ್ಗೆ 9 ಗಂಟೆಯಿಂದ ನಾಳೆ (ಅ.20) ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧ:

  1. ಪಾಟರಿ ರಸ್ತೆ – ಎಂ.ಎಂ ರಸ್ತೆ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮೂಲಕ ದೊಡ್ಡಗುಂಟಿ ಸರ್ಕಲ್ ಮತ್ತು ಅಸ್ಸೆ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
  2. ಅಸ್ಸೆ ರಸ್ತೆ – ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ ಮೂಲಕ ಎಂ.ಎಂ ರಸ್ತೆ ಪಾಟರಿ ರಸ್ತೆ ಜಂಕ್ಷನ್​ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
  3. ರಾಮಕೃಷ್ಣಪ್ಪ ರಸ್ತೆ – ಪಿ.ಎಸ್.ಕೆ ನಾಯ್ಡು ರಸ್ತೆ ಜಂಕ್ಷನ್​ನಿಂದ ರಾಮಕೃಷ್ಣಪ್ಪ ರಸ್ತೆ ಸುಂದರಮೂರ್ತಿ ರಸ್ತೆ ಮೂಲಕ ಅಸ್ಸೆ ರಸ್ತೆ ಜಂಕ್ಷನ್​ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ

  1. ಪಾಟರಿ ರಸ್ತೆ – ಎಂ.ಎಂ ರಸ್ತೆ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮೂಲಕ ದೊಡ್ಡಗುಂಟ ಸರ್ಕಲ್ ಮತ್ತು ಅಸ್ಸೆ ರಸ್ತೆ ಕಡೆಗೆ ಹೋಗುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಲಾಜರ್ ರಸ್ತೆ ಮುಖಾಂತರ ಬುದ್ಧ ವಿಹಾರ ರಸ್ತೆ ತಲುಪಿ ನಂತರ ಸಿಂಧಿ ಕಾಲೋನಿ ಜಂಕ್ಷನ್ ಮುಖಾಂತರ ಅಸ್ಸಯೇ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
  2. ಅಸ್ಸೆ ರಸ್ತೆ – ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ – ಎಂ.ಎಂ ರಸ್ತೆ ಕಡೆಗೆ ಹೋಗುವ ಎಲ್ಲ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಅಸ್ಸೆ ರಸ್ತೆ ಮೂಲಕ ಸಿಂಧಿ ಕಾಲೋನಿ ಜಂಕ್ಷನ್ ತಲುಪಿ ನಂತರ ಬುದ್ಧವಿಹಾರ ರಸ್ತೆ ಕೆಂಚಪ್ಪ ರಸ್ತೆ ಮೂಲಕ ಎಂ.ಎಂ ರಸ್ತೆ ಕಡೆಗೆ ಹೋಗಬಹುದಾಗಿದೆ.
  3. ರಾಮಕೃಷ್ಣಪ್ಪ ರಸ್ತೆ – ಪಿ.ಎಸ್.ಕೆ ನಾಯ್ಡು ರಸ್ತೆ ಜಂಕ್ಷನ್‌ನಿಂದ ರಾಮಕೃಷ್ಣಪ್ಪ ರಸ್ತೆ – ಸುಂದರಮೂರ್ತಿ ರಸ್ತೆ ಮೂಲಕ ಅಸ್ಸೆ ರಸ್ತೆ ಜಂಕ್ಷನ್ ಕಡೆಗೆ ಹೋಗುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪಿ.ಎಸ್.ಕೆ ನಾಯ್ಡು ರಸ್ತೆಯಲ್ಲಿ ನೇರವಾಗಿ ಸಾಗಿ ಅಸ್ಸಯೇ ರಸ್ತೆ ಎಡ ತಿರುವು ಪಡೆದು ನಂತರ ಸದರಿ ರಸ್ತೆಯಲ್ಲಿ ಎಂ.ಇ.ಜಿ ಗೇಟ್ ಬಳಿ ಯೂ ಟರ್ನ್ ಪಡೆದು ಅಸ್ಸಯೇ ರಸ್ತೆ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.

ಪಾರ್ಕಿಂಗ್ ನಿಷೇಧ

ಈ ಎರಡೂ ದಿನ ಎಂಎಂ ರಸ್ತೆ, ದೊಡ್ಡಗುಂಟ ಸರ್ಕಲ್​, ಸುಂದರಮೂರ್ತಿ ರಸ್ತೆ, ವೆಬ್‌ಸ್ಟರ್ ರಸ್ತೆ, ರಾಮಕೃಷ್ಣಪ್ಪ ರಸ್ತೆ, ಚಾರ್ಲ್ಸ್ ಕ್ಯಾಂಬೆಲ್ ರಸ್ತೆ, ಪಿ.ಎಸ್.ಕೆ ನಾಯ್ಡು ರಸ್ತೆ ಹಾಗೂ ತಂಬುಚೆಟ್ಟಿ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್​ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:14 am, Sat, 19 October 24