Bengaluru: ಸಂಚಾರ ನಿಯಮ ಉಲ್ಲಂಘನೆ: 2022ರಲ್ಲಿ 1ಕೋಟಿ 4 ಲಕ್ಷ ಕೇಸ್ ದಾಖಲು, 179 ಕೋಟಿ ರೂ. ದಂಡ ವಸೂಲಿ

ಬೆಂಗಳೂರು ನಗರದಲ್ಲಿ 2016 ಮತ್ತು 2017 ಕ್ಕೆ ಹೋಲಿಸಿದರೆ ಈಗ ಶೇ 17 ಪ್ರತಿಶತದಷ್ಟು ಅಪಘಾತ ಕಡಿಮೆ ಅಗಿದೆ ಎಂದು ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ.ಸಲೀಂ ತಿಳಿಸಿದ್ದಾರೆ.

Bengaluru: ಸಂಚಾರ ನಿಯಮ ಉಲ್ಲಂಘನೆ: 2022ರಲ್ಲಿ 1ಕೋಟಿ 4 ಲಕ್ಷ ಕೇಸ್ ದಾಖಲು, 179  ಕೋಟಿ ರೂ. ದಂಡ ವಸೂಲಿ
ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ. ಎಂ. ಎ ಸಲೀಂ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 04, 2023 | 4:24 PM

ಬೆಂಗಳೂರು: ಬೆಂಗಳೂರು ನಗರದಲ್ಲಿ 2016 ಮತ್ತು 2017 ಕ್ಕೆ ಹೋಲಿಸಿದರೆ ಪ್ರಸ್ತುತ 2022ರಲ್ಲಿ ಶೇ 17 ಪ್ರತಿಶತದಷ್ಟು ಅಪಘಾತ ಇಳಿಕೆಯಾಗಿದೆ ಎಂದು ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ.ಸಲೀಂ (Bengaluru Traffic Commissioner M.A Saleem) ತಿಳಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದು ಪ್ರಕರಣ ದಾಖಲು ಮಾಡುತ್ತಿದ್ದೇವೆ. 1ಕೋಟಿ 4ಲಕ್ಷ ಪ್ರಕರಣಗಳು ದಾಖಲಾಗಿವೆ. ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ 179 ಕೋಟಿ ರೂ. ದಂಡ ವಸೂಲಿಯಾಗಿದೆ ಎಂದರು.

ಈ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2022ರಲ್ಲಿ 748 ಮಾರಣಾಂತಿಕ ಪ್ರಕರಣಗಳು ಸಂಭವಿಸಿದ್ದು, ಒಟ್ಟು 777 ಜನ ರಸ್ತೆ ಅಪಘಾತಗಳಿಂದ ಸಾವಿಗೀಡಾಗಿದ್ದಾರೆ. ಸಾರ್ವಜನಿಕರು ರಸ್ತೆ ಅಪಘಾತಗಳಿಂದ ತಪ್ಪಿಸಿಕೊಳ್ಳಲು ಎಲ್ಲ ರೀತಿಯ ಸುರಕ್ಷತಾ ಕ್ರಮಗಳಾದ ಹಟ್‌ ಧಾರಣೆ, ಸೀಟ್​ಬೆಲ್ಟ್​​ ಧರಿಸುವುದರೊಂದಿಗೆ ಇತ್ಯಾದಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ:  ಕೇಂದ್ರ ಆಹಾರ ಸಂಶೋಧ‌ನಾಲಯದ ಆವರಣದಲ್ಲಿ ಚಿರತೆ ಪ್ರತ್ಯಕ್ಷ; ಶಾಲೆಗೆ ರಜೆ ಘೋಷಣೆ

2020 ಹಾಗೂ 2021ನೇ ಸಾಲಿನಲ್ಲಿ ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಇದ್ದ ನಿಮಿತ್ತ ಅಪಘಾತಗಳ ಸಂಖ್ಯೆಯು ಕಡಿಮೆ ದಾಖಲಾಗಿವೆ ಅಂದರೆ, ಕ್ರಮವಾಗಿ 3236 ಹಾಗೂ 3213 ಆಗಿವೆ. ಈ ಸಂಖ್ಯೆಗಳಿಗೆ ಹೋಲಿಸಿದಾಗ 2022ನೇ ಸಾಲಿನಲ್ಲಿ ಸಹಜ ಪರಿಸ್ಥಿತಿ ಇದ್ದೂ ಅಪಘಾತಗಳ ಸಂಖ್ಯೆಯು ಕೇವಲ 3827 ದಾಖಲಾಗಿವೆ. 2018ನೇ ಸಾಲಿನಲ್ಲಿ ಬೆಂಗಳೂರು ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದಾಗ ಪ್ರತಿ 10 ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತ್ತಿದ್ದು, 2022ನೇ ಸಾಲಿನಲ್ಲಿ ಈ ಅನುಪಾತವು 3.53 ಗೆ ಇಳಿದಿರುತ್ತದೆ. 2021ನೇ ಸಾಲಿನಲ್ಲಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆಗೆ ಹೋಲಿಕೆ ಮಾಡಿದಾಗ 2022ನೇ ಸಾಲಿನಲ್ಲಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆಯು ಶೇ. 25 ರಷ್ಟು ಹೆಚ್ಚಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3500 ಕ್ಕೂ ಹೆಚ್ಚು ಫುಟ್​ಪಾತ್ ಪಾರ್ಕಿಂಗ್ ಹಾಗು ಫುಟ್​ಪಾತ್ ರೈಡಿಂಗ್ ಪ್ರಕರಣ ದಾಖಲು

ಇನ್ನೂ ಪೊಲೀಸರ ಉದ್ದೇಶ ಪ್ರಕರಣ ದಾಖಲಿಸುವುದಲ್ಲ. ಸಂಚಾರ ದಟ್ಟಣೆ ಮತ್ತು ಅಪಘಾತಗಳು ಆಗದಂತೆ ತಡೆಯುವುದು. 3500 ಕ್ಕೂ ಹೆಚ್ಚು ಫುಟ್​ಪಾತ್ ಪಾರ್ಕಿಂಗ್ ಹಾಗು ಫುಟ್​ಪಾತ್ ರೈಡಿಂಗ್ ಪ್ರಕರಣ ದಾಖಲಾಗಿವೆ. ನಾವು ಗಮನಿಸಿದಂತೆ ಟ್ರಾಫಿಕ್ ಹೆಚ್ಚಿದ್ದಾಗ ಜನರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಕಡಿಮೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ; 400 ಹಾಸಿಗೆಗಳ ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ

ಹಾಗೆ ಹೇವಿ ವೆಹಿಕಲ್​ಗಳನ್ನು ಪೀಕ್ ಅವರ್ಸ್​​ನಲ್ಲಿ ಬಿಡದ ಕಾರಣ ಒಂದಷ್ಟು ಟ್ರಾಫಿಕ್ ಕಡಿಮೆಯಾಗಿದೆ. ರಾತ್ರಿ ಒಂದಷ್ಟು ಜಂಕ್ಷನ್ ಹಾಗು ರಸ್ತೆಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಹೀಗಾಗಿ ಒಂದಷ್ಟು ಟ್ರಾಫಿಕ್ ಕಡಿಮೆ ಅಗಿದೆ. ಇನ್ನುಮುಂದೆ ಇನ್ನಷ್ಟು ಟ್ರಾಫಿಕ್ ಕಡಿಮೆಯಾಗಲಿದೆ. ಹೆಚ್ಚಾಗಿ ಪದೇ ಪದೇ ಅಪರಾಧ ಕೃತ್ಯಗಳನ್ನು ಮಾಡಿದ್ದವರನ್ನು ಪತ್ತೆಮಾಡಿ ಬೌಂಡ್ ಓವರ್ ಮಾಡಲಾಗಿದೆ. ಮತ್ತು ಬೇಲ್ ರದ್ದುಪಡಿಸಲು ನ್ಯಾಯಾಲಯಕ್ಕೆ ಕೇಳಿದ್ದೆವೆ. ಹೀಗಾಗಿ ಒಂದಷ್ಟು ಮಟ್ಟಕ್ಕೆ ಅಪರಾಧ ಕಡಿಮೆ ಅಗಿದೆ ಎನ್ನಬಹುದು.

112ಗೆ ಕರೆ ಮಾಡಿ

ಯಾವುದೇ ಕೃತ್ಯ ನಡೆದ ಸಮಯದಲ್ಲಿ 112ಗೆ ಕರೆ ಮಾಡಿ. ಈ ಸಮಯದಲ್ಲಿ ನಮಗೆ ನೇರವಾಗಿ ಹೋಗಿ ಕೇಸ್ ದಾಖಲು ಮಾಡಲು ಸಾದ್ಯವಾಗುತ್ತೆ. ಈ ಬಗ್ಗೆ ನಮ್ಮ ಕಂಟ್ರೋಲ್ ರೂಮ್​ನಿಂದ ಫಾಲೋ ಅಪ್ ಮಾಡಲಾಗುತ್ತದೆ. ಇದರಿಂದ ರೂಢಿಗತ ಅರೋಪಿಗಳನ್ನು ಅರೆಸ್ಟ್ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 4 January 23

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ