ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು: ಹೈಡೆನ್ಸಿಟಿ ಜಂಕ್ಷನ್‌ಗಳಲ್ಲಿ ಡ್ರೋನ್ ನಿಗಾ
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದು, ಇದೀಗ ಡ್ರೋನ್‌ಗಳ ಮೂಲಕವೂ ಟ್ರಾಫಿಕ್ ಮೇಲೆ ನಿಗಾ ಇಡುತ್ತಿದ್ದಾರೆ. ನಗರದ ಹತ್ತು ಸಂಚಾರ ಉಪವಿಭಾಗಗಳಿಗೆ ತಲಾ ಒಂದು ಡ್ರೋನ್ ಹಂಚಿಕೆ ಮಾಡಲಾಗಿದ್ದು, ಹೆಬ್ಬಾಳ, ಟೌನ್‌ಹಾಲ್, ಸಿಲ್ಕ್ ಬೋರ್ಡ್ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್‌ಗಳಲ್ಲಿ ಕಣ್ಗಾವಲು ನಡೆಸಲಾಗುತ್ತಿದೆ.

ಮುಖ್ಯಾಂಶಗಳು
- ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು
- ಹತ್ತು ಉಪವಿಭಾಗಗಳಿಗೆ ತಲಾ ಒಂದು ಡ್ರೋನ್
- ಪೀಕ್ ಅವರ್‌ಗಳಲ್ಲಿ ಪ್ರಮುಖ ಜಂಕ್ಷನ್‌ಗಳ ಮೇಲೆ ನಿಗಾ
ಬೆಂಗಳೂರು, ಸೆಪ್ಟೆಂಬರ್ 30: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮುಂದುವರಿದಿದ್ದು, ವಾಹನ ಸವಾರರು ಪರದಾಡುವುದು ಸಾಮಾನ್ಯ. ಟ್ರಾಫಿಕ್ ನಿಯಂತ್ರಣಕ್ಕಾಗಿ ಪೊಲೀಸರು ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಡ್ರೋನ್‌ಗಳ ಮೂಲಕವೂ ಸಂಚಾರದ ಮೇಲೆ ನಿಗಾ ಇಡುತ್ತಿದ್ದಾರೆ. ನಗರದ ಹೈ ಡೆನ್ಸಿಟಿ ಜಂಕ್ಷನ್‌ಗಳಲ್ಲಿ ಡ್ರೋನ್‌ಗಳನ್ನು ಬಳಸಿ ಸಂಚಾರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ನಗರದ ಹತ್ತು ಸಂಚಾರ ಉಪವಿಭಾಗಗಳಿಗೆ ತಲಾ ಒಂದು ಡ್ರೋನ್ ಹಂಚಿಕೆ ಮಾಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಪೀಕ್ ಅವರ್‌ಗಳಲ್ಲಿ ಡ್ರೋನ್‌ಗಳ ಮೂಲಕ ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿನ ಸಂಚಾರದ ಮೇಲೆ ನಿಗಾ ಇರಿಸಲಾಗುತ್ತಿದೆ.
ಬೆಂಗಳೂರಿನ ಯಾವೆಲ್ಲ ಜಂಕ್ಷನ್‌ಗಳಲ್ಲಿ ಡ್ರೋನ್ ನಿಗಾ?
ಹೆಬ್ಬಾಳ, ಟೌನ್‌ಹಾಲ್, ಸಿಲ್ಕ್ ಬೋರ್ಡ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಡ್ರೋನ್‌ಗಳು ಸಂಚಾರ ನಿರ್ವಹಣೆಗೆ ಸಹಕಾರಿಯಾಗುತ್ತಿವೆ. ವಿವಿಐಪಿಗಳ ಸಂಚಾರದ ಸಂದರ್ಭದಲ್ಲಿಯೂ ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತಂತ್ರಜ್ಞಾನದ ಬಳಕೆಗೆ ಪೊಲೀಸರು ಒತ್ತು ನೀಡುತ್ತಿರುವುದು ವಾಹನ ಸವಾರರಿಗೆ ನೆರವಾಗುವ ನಿರೀಕ್ಷೆ ಮೂಡಿಸಿದೆ. ಡ್ರೋನ್ ಕಣ್ಗಾವಲಿನಿಂದ ಸಂಚಾರ ದಟ್ಟಣೆ ಇರುವ ಸ್ಥಳಗಳನ್ನು ತ್ವರಿತವಾಗಿ ಗುರುತಿಸಿ ನಿರ್ವಹಣೆಗೆ ಸಹಕಾರಿಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Wed, 30 September 26




