Bengaluru News: ವಾಹನ ಚಾಲಕರೇ ಎಚ್ಚರ! ಟ್ರಾಫಿಕ್​ ರೂಲ್ಸ್​ ಬ್ರೇಕ್​​ ಮಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್

ಬೆಂಗಳೂರಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದರೇ ಸೂಕ್ತ ದಂಡ ವಸೂಲಿ ಮಾಡುವುದಲ್ಲ ಜೊತೆಗೆ ಸಂಚಾರಿ ಪೊಲೀಸರು ಕ್ರಿಮಿನಲ್​ ಕೇಸ್ ಕೂಡ​ ದಾಖಲಿಸುತ್ತಿದ್ದಾರೆ.

Bengaluru News: ವಾಹನ ಚಾಲಕರೇ ಎಚ್ಚರ! ಟ್ರಾಫಿಕ್​ ರೂಲ್ಸ್​ ಬ್ರೇಕ್​​ ಮಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್
ಬೆಂಗಳೂರು ಟ್ರಾಫಿಕ್​ ಪೊಲೀಸ್​
Follow us
ವಿವೇಕ ಬಿರಾದಾರ
|

Updated on:Jun 06, 2023 | 8:15 AM

ಬೆಂಗಳೂರು: ನಗರದಲ್ಲಿ ಬೇಕೆಂತಲೋ ಅಥವಾ ಅವಸರದಲ್ಲೋ ವಾಹನ ಚಾಲಕರು (Drivers) ಸಂಚಾರಿ ನಿಯವನ್ನು ಉಲ್ಲಂಘಿಸುತ್ತಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಚಾರಿ ಪೊಲೀಸರು (Traffic Police) ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಇವರಿಂದ ಸಂಚಾರಿ ಪೊಲೀಸರು ಸೂಕ್ತ ದಂಡ ವಸೂಲಿ ಮಾಡಿ, ನಿಯಮ ಉಲ್ಲಂಘಿಸಿದಂತೆ ಎಚ್ಚರಿಸುವುದರ ಜೊತೆಗೆ ಕ್ರಿಮಿನಲ್​ ಕೇಸ್ ಕೂಡ​ ದಾಖಲಿಸುತ್ತಿದ್ದಾರೆ. ಹೌದು ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದರೇ ಬರೀ ದಂಡ ಮಾತ್ರವಲ್ಲ ಜೊತೆಗೆ ಸಂಚಾರಿ ಪೊಲೀಸರು ಕ್ರಿಮಿನಲ್ ಕೇಸ್ (Criminal Case) ಕೂಡ ಹಾಕುತ್ತಿದ್ದಾರೆ.

ಒನ್​ ವೇಯಲ್ಲಿ ಸಂಚರಿಸುವುದು, ರಸ್ತೆಯಲ್ಲಿ ವಾಹನ ಪಾರ್ಕ್‌ ಮಾಡಿದರೇ ಸಂಚಾರಿ ಪೊಲೀಸರು ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಿ ವಾಹನದ ಮೇಲೆ ಮತ್ತು ಚಾಲಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ. ಒಮ್ಮೆ ಎಫ್​ಐಆರ್ ದಾಖಲಾದರೇ ನಿಮ್ಮ ವಾಹನ ಸೀಜ್ ಮಾಡಲಾಗುತ್ತದೆ. ಸೀಜ್ ಆದ ವಾಹನವನ್ನು ನ್ಯಾಯಾಲಾಯದ ಅನುಮತಿ ಪಡೆದು ಬಿಡಿಸಿಕೊಳ್ಳಬೇಕು.

ಇದನ್ನೂ ಓದಿ: ಕಟ್ಟಿಂಗ್​ಗೆ ಹೋಗುತ್ತೀನೆಂದು ಬಟ್ಟೆ ಸಮೇತ ಮನೆ ಬಿಟ್ಟ ಬಾಲಕ; ಜ್ಯೋತಿಷಿ ಹೇಳಿದ ಸ್ಥಳದಲ್ಲಿ ಪೋಷಕರ, ಪೊಲೀಸರ ಹುಡುಕಾಟ

ಒನ್ ​ವೇಯಲ್ಲಿ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈ ಹಿನ್ನಲೆ ಒನ್ ವೇ ಮತ್ತು ಫುಟ್ಬಾತ್ ಮೇಲೆ ವಾಹಾನ ಚಾಲನೆ ಹಾಗೂ ನಡು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಿದರೇ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:13 am, Tue, 6 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ