AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಪೋರ್ಟ್​ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾದ ಬೆಂಗಳೂರು ಟ್ರಾಫಿಕ್​ ಪೊಲೀಸ್: ವಾಹನ ಸವಾರರಿಗೆ ಮಹತ್ವದ ಸೂಚನೆ

ಬೆಂಗಳೂರು ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸದ್ಯ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಲೇನ್ ಶಿಸ್ತು ಪಾಲನೆ ಮತ್ತು ಗಂಟೆಗೆ 60 ಕಿ.ಮೀ ವೇಗದ ಮಿತಿ ಕಡ್ಡಾಯಗೊಳಿಸಿ ಸಂಚಾರ ಪೊಲೀಸರು ಸೂಚನೆ ಹೊರಡಿಸಿದ್ದಾರೆ. ಇದೇ ರೀತಿಯ ಹಂತ ಹಂತದ ವಿಧಾನವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಜಾರಿಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಏರ್​ಪೋರ್ಟ್​ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾದ ಬೆಂಗಳೂರು ಟ್ರಾಫಿಕ್​ ಪೊಲೀಸ್: ವಾಹನ ಸವಾರರಿಗೆ ಮಹತ್ವದ ಸೂಚನೆ
ಏರ್​ಪೋರ್ಟ್​ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾದ ಬೆಂಗಳೂರು ಟ್ರಾಫಿಕ್​ ಪೊಲೀಸ್Image Credit source: Deccan Herald
ಪ್ರಸನ್ನ ಹೆಗಡೆ
|

Updated on: Sep 08, 2026 | 6:39 PM

Share

ಬೆಂಗಳೂರು, ಸೆಪ್ಟೆಂಬರ್​​ 08: ಏರ್‌ಪೋರ್ಟ್ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚಾರ ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದು, ಮೊದಲ ಹಂತದಲ್ಲಿ, ನಿಗದಿತ ಸಮಯದಲ್ಲಿ ಸರಕು ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳಿಗೆ ಸದ್ಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ದ್ವಿಚಕ್ರ ವಾಹನ ಸವಾರರು ಸಾಧ್ಯವಾದಷ್ಟು ಎಡಭಾಗದ ಲೇನ್ ಬಳಸಬೇಕು, ಲೇನ್ ಶಿಸ್ತು ಪಾಲಿಸಬೇಕು, ಅಪಾಯಕಾರಿ ಓವರ್‌ಟೇಕ್ ತಪ್ಪಿಸಬೇಕು ಹಾಗೂ ಗಂಟೆಗೆ 60 ಕಿ.ಮೀ. ವೇಗದ ಮಿತಿಯೊಳಗೆ ಸುರಕ್ಷಿತವಾಗಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ.

ಏರ್​ಪೋರ್ಟ್​ ರಸ್ತೆಯಲ್ಲಿ ಈ ನಿಯಮ ಯಾಕೆ?

ರಸ್ತೆ ಸುರಕ್ಷತೆ ಹೆಚ್ಚಿಸುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಐದು ಪ್ರಮುಖ ಮೇಲ್ಸೇತುವೆ/ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ವಿವಿಧ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ಬೆಂಗಳೂರು ಸಂಚಾರ ಪೊಲೀಸರು ಘೋಷಿಸಿದ್ದರು. ಈ ಪೈಕಿ ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಬಂಧ ಜಾರಿಗೊಳಿಸಿದ ಬಳಿಕ ಸಂಚಾರ ಪೊಲೀಸರು ಪ್ರಾಥಮಿಕವಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಹಾಗೂ ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ಸಂಚಾರ ಸುಗಮವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ನಲ್ಲಿ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ) ಸರಕು ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಏಕಕಾಲದಲ್ಲಿ ಪ್ರವೇಶ ಮಾರ್ಗಗಳಲ್ಲೇ ಬೇರೆಡೆಗೆ ತಿರುಗಿಸುವುದರಿಂದ ಸಂಚಾರ ಗೊಂದಲ, ಸರದಿ ಹಾಗೂ ದಟ್ಟಣೆ ಉಂಟಾಗುತ್ತಿರುವುದು ಕಂಡುಬಂದಿದೆ. ಇದರಿಂದ ಪಕ್ಕದ ಸಾಮಾನ್ಯ ರಸ್ತೆಯ ಸಂಚಾರದ ಮೇಲೂ ಪರಿಣಾಮ ಉಂಟಾಗುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಏರ್‌ಪೋರ್ಟ್ ಫ್ಲೈಓವರ್‌ ಮೇಲೆ ಬೈಕ್ ನಿರ್ಬಂಧ ಬೆನ್ನಲ್ಲೇ ರೈಡರ್ಸ್‌ ಹುಚ್ಚಾಟ: ಮಧ್ಯರಾತ್ರಿ ರೈಡಿಂಗ್, ಪೊಲೀಸರ ಹದ್ದಿನ ಕಣ್ಣು

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಸೆ. 11ರಿಂದ ಹೊಸ ನಿಯಮ

ಇದೇ ರೀತಿಯ ಹಂತ ಹಂತದ ವಿಧಾನವನ್ನು ಸೆಪ್ಟೆಂಬರ್ 11, 2026ರಿಂದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲೂ ಜಾರಿಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಸದ್ಯ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಪರಿಶೀಲನೆಯ ಫಲಿತಾಂಶದ ಆಧಾರದ ಮೇಲೆ ಉಳಿದ ನಿಗದಿತ ನಿರ್ಬಂಧಗಳನ್ನು ನಂತರ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us