
ಬೆಂಗಳೂರು, ಜ.17: ಗಂಡನ ಜತೆಗೆ ಜಗಳ ಮಾಡಿಕೊಂಡ ಮಹಿಳೆಯೊಬ್ಬರು 4 ವರ್ಷ ಮಗಳು ಜತೆಗೆ ಬೆಂಕಿ ಹಚ್ಚಿಕೊಂಡ ಘಟನೆ ಬೆಂಗಳೂರಿನ (Bengaluru Tragedy) ಸಂಜಯನಗರದಲ್ಲಿ ನಡೆದಿದೆ. ಮನೆ.. ಮನೆ.. ಹೋಗಿ ಕೆಲಸ ಮಾಡಿಕೊಂಡಿದ್ದ ಈ ಮಹಿಳೆ, ಗಂಡ ಮತ್ತು ಮಗಳ ಜತೆಗೆ ಸುಂದರ ಜೀವನ ನಡೆಸುತ್ತಿದ್ದರು. ಅದ್ಯಾಕೋ ಗೊತ್ತಿಲ್ಲ ಮನೆ ಕೆಲಸ ಮಾಡುತ್ತಿದ್ದ ವೇಳೆ ಪತಿಯೊಂದಿಗೆ ಫೋನ್‌ನಲ್ಲಿ ಜಗಳ ಮಾಡಿಕೊಂಡಿದ್ದಾಳೆ. ನಂತರ ಮಹಿಳೆ ಮನೆ ಹೋಗಿ ನಾಲ್ಕು ವರ್ಷದ ಮಗಳ ಜತೆಗೆ ಬೆಂಕಿ ಹಚ್ಚಿಕೊಂಡಿದ್ದಾಳೆ. ತಾಯಿ ಮತ್ತು ಮಗಳು ಇಬ್ಬರೂ ಸುಟ್ಟ ಗಾಯಗೊಂಡಿದ್ದರು. ಆಸ್ಪತ್ರೆ ಸೇರಿಸಿದ್ರು ಯಾವುದೇ ಪ್ರಯೋಜನ ಆಗಿಲ್ಲ, ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ. ಸೀತಾಲಕ್ಷ್ಮಿ ಎಂಬ ಈ ಮಹಿಳೆ ತನ್ನ ಮೇಲೆ ಮತ್ತು ಮಗಳ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಗರದ ಸಂಜಯನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ತಾಯಿ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ, ನೋವು ತಡೆಯಲಾರದೆ ಮಗಳು ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಅಕ್ಕ ಪಕ್ಕದಲ್ಲಿದ್ದ ಮನೆಯವರು ಧಾವಿಸಿ, ಬಾಗಿಲು ಒಡೆದು ನೋಡಿದಾಗ, ತಾಯಿ ಮತ್ತು ಮಗಳು ಇಬ್ಬರೂ ತೀವ್ರವಾಗಿ ಸುಟ್ಟುಹೋಗಿದ್ದಾರೆ. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಅಮ್ಮ ಘಟನೆ ನಡೆದ ದಿನ ಸಾವನ್ನಪ್ಪಿದ್ದಾರೆ. ಮಗಳು ಮರುದಿನ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸೀತಾಲಕ್ಷ್ಮಿ ತನ್ನ ಪತಿ ಗೋವಿಂದ್ ಬಹದ್ದೂರ್ ಜೊತೆ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಡುತ್ತಿದ್ದರು.
ಇದನ್ನೂ ಓದಿ: ನಾಯಿ – ನಾಗರ ಹಾವಿನ ಮಧ್ಯೆ ಬಿಗ್ ಫೈಟ್: ಸಾವನ್ನಪ್ಪಿದ ಹಾವು, ನಾಯಿ ಸ್ಥಿತಿ ಏನಾಯಿತು ನೋಡಿ?
ದಂಪತಿಗಳು ಸುಮಾರು ಏಳು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ವಾಸವಾಗಿದ್ದರು. ಗೋವಿಂದ್ ಸೆಕ್ಯುರಿಟಿ ಗಾರ್ಡ್ ಮತ್ತು ದಿನಗೂಲಿ ಕಾರ್ಮಿಕ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ, ಅವರು ತಮ್ಮ ಆರು ವರ್ಷದ ಮಗನೊಂದಿಗೆ ನೇಪಾಳಕ್ಕೆ ಮರಳಿದ್ದರು. ಈ ವೇಳೆ ಸೀತಾಲಕ್ಷ್ಮಿ ತನ್ನ ಗಂಡ ಗೋವಿಂದ್ ಕರೆ ಮಾಡುತ್ತ ಮತ್ತೆ ಯಾವ ಬೆಂಗಳೂರಿಗೆ ಬರುತ್ತಿರಾ? ಎಂದು ಪ್ರತಿದಿನ ಹೇಳುತ್ತಿದ್ದರು. ಪತಿ ಎಷ್ಟು ಹೇಳಿದ್ರೂ ಕೇಳುತ್ತಿರಲಿಲ್ಲ. ಕೆಲಸ ಮುಗಿಸಿಕೊಂಡು ಬರುವೇ ಎಂದು ಹೇಳಿದ್ರೂ ಕೇಳುತ್ತಿರಲಿಲ್ಲ. ಪ್ರತಿದಿನ ಈ ವಿಚಾರವಾಗಿ ಅವರ ಮಧ್ಯೆ ಜಗಳು ಆಗುತ್ತಿತ್ತು ಎಂದು ಹೇಳಿದ್ದಾರೆ. ಇದರಿಂದ ಮನನೊಂದು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಈ ಬಗ್ಗೆ ತನಿಖೆಗಳು ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ