8 ಲಕ್ಷ ರೂ. ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ: ಟಿಕೆಟ್ ಪಡೆಯುವುದು ಕಡ್ಡಾಯ
2025ರ ಡಿಸೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ಟಿಕೆಟ್ ರಹಿತ ಪ್ರಯಾಣ ಮತ್ತು ಇತರೆ ಉಲ್ಲಂಘನೆಗಳಿಗಾಗಿ 8.08 ಲಕ್ಷ ರೂ. ದಂಡ ಸಂಗ್ರಹಿಸಿದೆ. 4353 ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಪತ್ತೆಯಾಗಿವೆ. ನಿಗಮಕ್ಕೆ ಆಗುತ್ತಿರುವ ಆದಾಯ ಸೋರಿಕೆಯನ್ನು ತಡೆಯಲು ಮತ್ತು ಪ್ರಯಾಣಿಕರು ದಂಡ ತಪ್ಪಿಸಲು ಕಡ್ಡಾಯವಾಗಿ ಟಿಕೆಟ್ ಪಡೆಯುವಂತೆ ಮನವಿ ಮಾಡಿದೆ. ಇದು ಪ್ರಯಾಣಿಕರ ಜವಾಬ್ದಾರಿ ಮತ್ತು ನಿಗಮದ ಜಾರಿ ಕ್ರಮಗಳನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು, ಜ.17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರತಿದಿನ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡುತ್ತಿರುತ್ತದೆ. ಆದ್ರೂ ಜನ ಈ ಬಗ್ಗೆ ಗಮನ ನೀಡುವುದಿಲ್ಲ. ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ ಪ್ರತಿ ಭಾರೀ ಹೇಳಿದ್ರೂ ಇದಕ್ಕೆ ಕೇರ್ ಎನ್ನುತ್ತಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಟಿಕೆಟ್ ಪಡೆಯದವರಿಗೆ ದಂಡ ಹಾಕುತ್ತಾರೆ. ಇದೀಗ 2025ರಲ್ಲಿ ಕೆಎಸ್‌ಆರ್‌ಟಿಸಿ 8,08,704 ರೂ. ದಂಡವನ್ನು ವಸೂಲಿ ಮಾಡಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟನೆಯೊಂದನ್ನು ಹೊರಡಿಸಿದೆ. ಈ ಹಿಂದೆ ಅಂದರೆ 2025 ಎಪ್ರಿಲ್ನಲ್ಲಿ ಈ ದಂಡ ಸಾವಿರದಲ್ಲಿತ್ತು. ಇದೀಗ ಲಕ್ಷಕ್ಕೆ ದಾಟಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ ನಿಗಮವು 8 ಲಕ್ಷದಷ್ಟು ದಂಡವನ್ನು ವಸೂಲಿ ಮಾಡಿದೆ.
ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ ನಿಗಮವು 43553 ವಾಹನಗಳನ್ನು ತನಿಖೆಗೊಳಪಡಿಸಿತ್ತು. ಅದರಲ್ಲಿ 4207 ಬಸ್ಸಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ ಹಾಗೂ ಇತರ ಪ್ರಕರಣಗಳನ್ನು ಪತ್ತೆಹಚ್ಚಿದೆ. ಇನ್ನು 4353 ಟಿಕೇಟ್ ರಹಿತ ಪ್ರಯಾಣ ಮಾಡಿರುವ ಪ್ರಕರಣಗಳು ಪತ್ತೆ ಮಾಡಿದೆ. ಒಟ್ಟು 8,08,704 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದೆ. ನಿಗಮದ ಆದಾಯದಲ್ಲೂ ಸೋರಿಕೆ ಆಗುತ್ತಿದ್ದು, 1,14,500 ರೂ. ನಷ್ಟ ಆಗರುವುದನ್ನು ಪತ್ತೆಹಚ್ಚಿದ್ದಾರೆ. ಇದೀಗ ಇದನ್ನು ತಡೆಯಲು ನಿಗಮ ಹಲವು ಕ್ರಮಗಳನ್ನು ತಂದಿದೆ ಅದರ ಜತೆಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೇಟ್-ಪಾಸ್ ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ
ಏಪ್ರಿಲ್ 2025 ರಲ್ಲಿ 43,244 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪರಿಶೀಲಿಸಿದಾಗ, 97,576 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ 3,882 ಪ್ರಕರಣಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದರು. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 3,780 ಪ್ರಯಾಣಿಕರು ಪತ್ತೆ ಮಾಡಿ, 7,32,495 ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದರು. ಇದರ ಜತೆಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ವಿರುದ್ಧ ಕೂಡ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ