
ಬೆಂಗಳೂರು, ಅ.14: ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ಗಳ ಕಿರಿಕ್ (Bengaluru Uber driver) ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಲ್ಲಿ ಬೆಂಗಳೂರು ಕ್ಯಾಬ್ ಡ್ರೈವರ್ಗಳ ಬಗ್ಗೆ ದಿನಕ್ಕೊಂದು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ಮೂಲದ ದಂಪತಿಯ ಲಗೇಜ್ಗಳನ್ನು ನೋಡಿ ಉಬರ್ ಚಾಲಕ ಬಾಯಿಗೆ ಬಂದಂತೆ ಅವ್ಯಾಚ ಪದಗಳಿಂದ ನಿಂದಿಸಿದ್ದಾನೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ. ಬೆಂಗಳೂರಿನ ಅಗರ ಸರೋವರದ ಬಳಿ ವರ್ಕಲಾ ಪ್ರವಾಸ ಮುಗಿಸಿ ವಾಪಸ್ಸು ಬರುವ ವೇಳೆ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಉಬರ್ ಗೋ ಸವಾರಿಯ ಚಾಲಕನು ದಂಪತಿಗಳನ್ನು ಲಗೇಜ್ ಸಮೇತ ನೋಡಿ ಕಾರು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾನೆ. ಉಬರ್ ಗೋನಲ್ಲಿ ಸೂಟ್‌ಕೇಸ್‌ಗಳಿಗೆ ಅನುಮತಿ ಇಲ್ಲ ಎಂದು ಕ್ಯಾಬ್ ಡ್ರೈವರ್ ಹೇಳಿದ್ದಾನೆ. ಈ ನಿಯಮ ಯಾವಾಗದಿಂದ ಶುರುವಾಗಿದೆ. ನಾವು ಇಲ್ಲಿಯವರೆಗೆ ಈ ನಿಯಮದ ಬಗ್ಗೆ ಕೇಳಿಲ್ಲ ಎಂದು ಹೇಳಿದ್ದಾರೆ. ನಂತರ ದಂಪತಿ ಡ್ರೈವರ್ನಲ್ಲಿ ಕ್ಯಾಬ್ನ್ನು ಕ್ಯಾನ್ಸಲ್ ಮಾಡುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಡ್ರೈವರ್ ದಂಪತಿಗಳನ್ನು ಅವ್ಯಾಚ ಪದಗಳಿಂದ ನಿಂದಿಸಿದ್ದಾನೆ. ಈ ಘಟನೆಯ ಬಗ್ಗೆ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಅವ್ಯಾಚ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಹಲ್ಲೆ ಮಾಡಲು ಕೂಡ ಮುಂದಾಗಿದ್ದಾನೆ ಎಂದು ದಂಪತಿಗಳು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಉಳಿಯಲು 5 ವರ್ಷ ಅವಕಾಶ: ಮೋದಿಗೆ ಧನ್ಯವಾದ ತಿಳಿಸಿದ ಅಮೆರಿಕದ ಉದ್ಯಮಿ
Uber driver in Bangalore hurled abuses and got aggressive because we had 2 suitcases — Uber hasn’t done anything even after a month
byu/MysteriousTime6680 inbangalore
ಇನ್ನು ಘಟನೆಯ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಮೇತವಾಗ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಪ್ರಕರಣದ ಬಗ್ಗೆ ಯಾವುದೇ ಅಪ್ಡೇಟ್ ನೀಡಿಲ್ಲ ಎಂದು ದಂಪತಿಗಳು ಹೇಳಿದ್ದಾರೆ. ಇನ್ನು ಈ ಪೋಸ್ಟ್ ಅನೇಕ ಬಳಕೆದಾರರು ಕಮೆಂಟ್ ಕೂಡ ಮಾಡಿದ್ದರೆ. ಸಾಮಾನ್ಯವಾಗಿ ಉಬರ್ ಗೋ ನಲ್ಲಿ ಚಿಕ್ಕ ಕಾರುಗಳು ಸಿಗುವುದು, ಅದರಲ್ಲಿ ವಸ್ತುಗಳನ್ನು ಸಾಗಿಸುವುದು ತುಂಬಾ ಕಷ್ಟ, ಹಾಗಾಗಿ ನಾನು ಉಬರ್ ಸೆಡಾನ್ ಅನ್ನು ಬುಕ್ ಮಾಡುತ್ತೇನೆ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ