ಒಮಿಕ್ರಾನ್ ಆತಂಕದ ಮಧ್ಯೆ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿದ ಬೆಂಗಳೂರು, ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?

ಮಹಾಮಾರಿ ಕೊರೊನಾ ವಿರುದ್ಧ ಹೋರಾಟಲು ಬಳಸಿದ ಲಸಿಕಾ ಅಸ್ತ್ರ ಸದ್ಯ ಮುಂದುವರೆದಿದೆ. ಬೆಂಗಳೂರು ನಗರ ಶೇ.100ರಷ್ಟು ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಿದೆ. ಆದ್ರೆ ಇದರ ನಡುವೆ ರಾಜ್ಯದಲ್ಲಿ ಇಂದು ಮತ್ತೆ 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ಒಮಿಕ್ರಾನ್ ಆತಂಕದ ಮಧ್ಯೆ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿದ ಬೆಂಗಳೂರು, ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
Updated By: ಸಾಧು ಶ್ರೀನಾಥ್​

Updated on: Dec 27, 2021 | 10:10 AM

ಬೆಂಗಳೂರು: ಬೆಂಗಳೂರು ನಗರದಲ್ಲಿ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರ್ಣಗೊಂಡಿರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಎರಡು ಡೋಸ್ ಪೂರ್ಣಗೊಂಡ ಮೊದಲ ಜಿಲ್ಲೆ ಬೆಂಗಳೂರು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೊರೊನಾ ಹೋರಾಟದಲ್ಲಿ ರಾಜ್ಯ ಮತ್ತೊಂದು ಸಾಧನೆ ಮಾಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 100% ಸೆಕೆಂಡ್ ಡೋಸ್ ಲಸಿಕೆ ಹಂಚಿಕೆಯಾಗಿದೆ. ಕರ್ನಾಟಕದಲ್ಲೇ 2ನೇ ಡೋಸ್ ಶೇ.100ರಷ್ಟು ಹಂಚಿದ ಮೊದಲ ಜಿಲ್ಲೆ ಬೆಂಗಳೂರು ನಗರ ಜಿಲ್ಲೆ ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ. 5 ತಾಲೂಕು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆ, 7 ಟೌನ್ ಮುನ್ಸಿಪಲ್ ಕೌನ್ಸಿಲ್, 86 ಗ್ರಾಮ ಪಂಚಾಯಿತಿ, 2 ಸಿಟಿ ಮುನ್ಸಿಪಲ್ ಕೌನ್ಸಿಲ್, 864 ಗ್ರಾಮಗಳನ್ನ ಹೊಂದಿದೆ. ಬೆಂಗಳೂರು ನಗರ ಜಿಲ್ಲೆಯ ಒಟ್ಟು ಜನಸಂಖ್ಯೆ 15 ಲಕ್ಷ ಇದ್ದು ಸದ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ 100% ಸೆಕೆಂಡ್ ಡೋಸ್ ಲಸಿಕೆ ಹಂಚಿಕೆಯಾಗಿದೆ.

ಲಸಿಕೆ ಗುರಿ ತಲುಪಿಸಲು ನಿಯೋಜಿತ ಸಿಬ್ಬಂದಿ ವಿವರ
ನುರಿತ ವೈದ್ಯರು 40, ವೈದ್ಯರು 39, ಆರೋಗ್ಯ ಸಿಬ್ಬಂದಿ 300, 832 ಆಶಾ ಕಾರ್ಯಕರ್ತೆಯರು ಲಸಿಕಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಜಿಲ್ಲಾವಾರು ಕೊವಿಡ್ ಲಸಿಕೆ ನೀಡಿಕೆ ವಿವರ
ಬೆಂಗಳೂರು ನಗರ -ಶೇಕಡಾ 100
ಕೊಡಗು -ಶೇಕಡಾ 90
ಮಂಡ್ಯ -ಶೇಕಡಾ 84
ರಾಮನಗರ-ಶೇಕಡಾ 83
ಉಡುಪಿ -ಶೇಕಡಾ 82
ಬಾಗಲಕೋಟೆ -ಶೇಕಡಾ 81
ಉತ್ತರ ಕರ್ನಾಟಕ, ಹಾಸನ, ಮೈಸೂರು ತಲಾ ಶೇ.79
ಕೋಲಾರ -ಶೇ.78
ಬೆಂಗಳೂರು ಗ್ರಾಮಾಂತರ -ಶೇ.77
ವಿಜಯಪುರ -ಶೇಕಡಾ 77
ಬೆಳಗಾವಿ -ಶೇಕಡಾ76
ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ತಲಾ ಶೇಕಡಾ 76
ದಾವಣಗೆರೆ -ಶೇಕಡಾ 75
ಬಿಬಿಎಂಪಿ ವ್ಯಾಪ್ತಿ -ಶೇ.74
ಧಾರವಾಡ, ಚಿತ್ರದುರ್ಗ, ಬೀದರ್, ಗದಗ ತಲಾ ಶೇ.73
ಚಾಮರಾಜನಗರ -ಶೇ.73
ತುಮಕೂರು, ಚಿಕ್ಕಮಗಳೂರು -ಶೇ.72
ಶಿವಮೊಗ್ಗ, ಯಾದಗಿರಿ ತಲಾ ಶೇಕಡಾ 70
ಕೊಪ್ಪಳ -ಶೇ.69
ಬಳ್ಳಾರಿ, ಹಾವೇರಿ ತಲಾ ಶೇಕಡಾ 68
ರಾಯಚೂರು -ಶೇ.64
ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 60ರಷ್ಟು ಲಸಿಕೆ ನೀಡಲಾಗಿದೆ

ಮಹಾಮಾರಿ ಕೊರೊನಾ ವಿರುದ್ಧ ಹೋರಾಟಲು ಬಳಸಿದ ಲಸಿಕಾ ಅಸ್ತ್ರ ಸದ್ಯ ಮುಂದುವರೆದಿದೆ. ಬೆಂಗಳೂರು ನಗರ ಶೇ.100ರಷ್ಟು ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಿದೆ. ಆದ್ರೆ ಇದರ ನಡುವೆ ರಾಜ್ಯದಲ್ಲಿ ಇಂದು ಮತ್ತೆ 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಬೇರೆ ಜಿಲ್ಲೆಯಲ್ಲಿ ಇಂದು 5 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ. ಒಮಿಕ್ರಾನ್ ಕೇಸ್ ಬಗ್ಗೆ ಸಂಜೆ ವೇಳೆಗೆ ಘೋಷಣೆ ಸಾಧ್ಯತೆ ಇದೆ.

ಈ ಬಗ್ಗೆ ಸಂಜೆ ಒಳಗೆ ಅಧಿಕೃತ ಪಡಿಸುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಒಮಿಕ್ರಾನ್ ಶಂಕೆ ಅಂತಾ ಹೇಳಲಾಗ್ತಿದೆ. ಲ್ಯಾಬ್ ರಿಪೋರ್ಟ್ ತರಿಸಿಕೊಂಡು ಖಚಿತಪಡಿಸೋದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೈಸೂರಿನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ
ಮೈಸೂರಿನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ ಸಂಬಂಧ ಸ್ವಿಡ್ಜರ್ಲೆಂಡ್ನಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಲಕಿಗೆ ಯಾವುದೇ ರೀತಿಯ ರೋಗ ಲಕ್ಷಣಗಳಿರಲಿಲ್ಲ. ಸದ್ಯ ಬಾಲಕಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಸೂಸೆಪಾಳ್ಯ ಗ್ರಾಮದಲ್ಲಿ ಕಿಡಿಗೇಡಿಗಳಿಂದ ಯೇಸು ಪ್ರತಿಮೆ ಭಗ್ನ, ದೂರು

Published On - 10:54 am, Thu, 23 December 21