ಬೆಂಗಳೂರು: ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದ್ರು ಕೇಳಲ್ಲ, ನಾನ್ ಮಾಡಿರೊ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತಿರಾ‌‌‌‌ ಎಂದು ಪೊಲೀಸರಿಗೆ ಅವಾಜ್ ಹಾಕಿದ ಆರೋಪಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 30, 2023 | 11:26 AM

ಸೈಟ್​ಗಳ ಮೇಲೆ ಕೋಟಿ ಕೋಟಿ ಲೋನ್ ಪಡೆದು ಬ್ಯಾಂಕುಗಳಿಗೆ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನ ಇದೀಗ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದ್ರು ಕೇಳಲ್ಲ, ನಾನ್ ಮಾಡಿರೊ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತಿರಾ‌‌‌‌ ಎಂದು ಪೊಲೀಸರಿಗೆ ಅವಾಜ್ ಹಾಕಿದ ಆರೋಪಿ
ಆರೋಪಿ ಲೋಕೇಶ್
Follow us on

ಬೆಂಗಳೂರು: ಸೈಟ್​ಗಳ ಮೇಲೆ ಲೋನ್ ಪಡೆದು ವಂಚಿಸುತ್ತಿದ್ದ ಲೋಕೇಶ್ ಎಂಬ ಆರೋಪಿಯನ್ನ ಇದೀಗ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. 2016 ರಿಂದ ಆಕ್ಟಿವ್ ಆಗಿರುವ ವಂಚಕ ಲೋಕೇಶ್, ಸೇಲ್ ಅಗ್ರಿಮೆಂಟ್ ಹಾಕಿಸಿಕೊಂಡು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ವಂಚಿಸುತ್ತಿದ್ದ. ಇತನನ್ನ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಜನಪ್ರತಿನಿಧಿಗಳ ಕೈಯಲ್ಲಿ ಪೋನ್ ಕಾಲ್ ಮಾಡಿಸುತ್ತಿದ್ದ. ಬೆಂಗಳೂರಿನಲ್ಲಿ ಇದುವರೆಗೆ ಇತನ ಮೇಲೆ ಕೋಟಿ ಕೋಟಿ ಲೋನ್ ಪಡೆದು ವಂಚನೆ ಮಾಡಿರುವ 7 ಪ್ರಕರಣಗಳು ದಾಖಲಾಗಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡುದ್ರು ಕೇಳಲ್ಲ ನಾನ್ ಮಾಡಿರೊ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತಿರಾ‌‌‌‌, ಅವರನ್ನೆಲ್ಲ ಏನೂ ಮಾಡಲ್ಲ, ನಮ್ಮನ್ನ ಮಾತ್ರ ಪ್ರಶ್ನೆ ಮಾಡ್ತೀರಾ..? ನಾನು ನಿಮಗೆ ವಂಚನೆ ಮಾಡಿಲ್ಲ ಬದಲಿಗೆ ಬ್ಯಾಂಕಿನೋರ್ಗೆ ಮಾಡಿರೋದು, ನೀವೇಕೆ ತಲೆ ಕೆಡಿಸಿಕೊಳ್ತೀರಾ ಎಂದು ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿದ್ದಾನೆ. ಜೈಲಿನಿಂದ ಬಂದಮೇಲೆ ಒಂದು ಕೈ ನೋಡ್ಕೋತಿನಿ ಎಂದಿರುವ ಲೋಕೇಶ್ ನನ್ನನ್ನ ಬಂಧಿಸಿರುವ ಯಾರನ್ನೂ ಬಿಡಲ್ಲ, ಎಲ್ಲರನ್ನೂ ಟ್ರಾನ್ಸ್​ಫರ್ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾನೆ.

 ನಗರದ ಮುಖ್ಯ ರಸ್ತೆ ಕುಸಿದು ಜನರ ಪರದಾಟ

ಬೆಂಗಳೂರು: ಮಂಜುನಾಥ್ ನಗರದಿಂದ ಬಸವೇಶ್ವರನಗರಕ್ಕೆ ಹೋಗುವ ಇಂಡಿಯಾನ್ ಗ್ಯಾಸ್​ ಸಮೀಪ ಮುಖ್ಯ ರಸ್ತೆ ಕುಸಿದು ಜನರ ಪರದಾಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪದೇ ಪದೇ ಕುಸಿಯುತ್ತಿರುವ ರಸ್ತೆಗಳಿಂದ ಸಾರ್ವಜನಿಕರು ನಿತ್ಯವೂ ಪ್ರಾಣಭಯದಿಂದ ಸಂಚಾರ ನಡೆಸಬೇಕಾಗಿದೆ. ಇನ್ನು ಇಂದು(ಜ.30) ನಗರದ ಮುಖ್ಯ ರಸ್ತೆ ಕುಸಿದ ಕಾರಣ ಸ್ಥಳೀಯರೆ ಸೇರಿ ದೊಡ್ಡ ಕಲ್ಲು ಹಾಕು ಮುಚ್ಚಿದ್ದಾರೆ. ಮೊನ್ನೆ ಸಂಜೆ ಕೂಡ ಗುಂಡಿ ಬಿದ್ದಿದ್ದು, ಇನ್ನೂವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.

ಜಲಮಮಂಡಳಿ‌ ಫೈಪ್‌ ಒಡೆದು ಗುಂಡಿಯೊಳಗೆ ನಿರಂತರವಾಗಿ‌‌ ನೀರು ಸೋರಿಕೆಯಾಗುತ್ತಿದೆ. ಅಪಾಯದ ಅರಿವೇ ಇಲ್ಲದೆ ಈ ರಸ್ತೆಯಲ್ಲಿ ವಾಹನ‌ ಸವಾರರು ಸಂಚಾರ ಮಾಡುತ್ತಿದ್ದಾರೆ. ರಸ್ತೆಯ ಗುಂಡಿಯೊಳಗಡೆ ಸುಮಾರು 7 ಅಡಿ ಉದ್ದ ಕುಸಿದಿದ್ದು, ದೊಡ್ದ ವಾಹನ ಬಂದ್ರೆ ರಸ್ತೆ ಕುಸಿಯುವ ಸಾಧ್ಯತೆಯಿದೆ. ಹೀಗಿದ್ದರು ಅಧಿಕಾರಿಗಳು ಇನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Mon, 30 January 23