ವೋಟರ್​ ಐಡಿ ಅಕ್ರಮ: ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

| Updated By: ವಿವೇಕ ಬಿರಾದಾರ

Updated on: Dec 16, 2022 | 2:52 PM

ವೋಟರ್​ ಐಡಿ ಪರಿಷ್ಕರಣೆ ಸಂಬಂಧ 12 ಕೆಎಎಸ್​ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ

ವೋಟರ್​ ಐಡಿ ಅಕ್ರಮ: ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
Follow us on

ಬೆಂಗಳೂರು: ನಗರದಲ್ಲಿ ನಡೆದ ವೋಟರ್​ ಐಡಿ ಪರಿಷ್ಕರಣೆ ಅಕ್ರಮದಲ್ಲಿ (Voter ID Scam) ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆದುಹಾಕಿರುವ ಮತ್ತು ಸೇರ್ಪಡಿಸಿರುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಈ ಸಂಬಂಧ ಈಗಾಗಲೇ 12 ಕೆಎಎಸ್​ ಅಧಿಕಾರಿಗಳನ್ನು (KAS Officer) ನೇಮಕ ಮಾಡಲಾಗಿದೆ. ಅವರು ಮತದಾರರ ಮಾಹಿತಿ, ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ತೆಗೆದುಹಾಕಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Commissioner Tushar Girinath) ಟಿವಿ9ಗೆ ತಿಳಿಸಿದ್ದಾರೆ.

ನಗರದ ಚಿಕ್ಕಪೇಟೆ, ಮಹದೇವಪುರ ವಿಧಾನಸಭಾ ಕ್ಷೇತ್ರ, ಶಿವಾಜಿನಗರದಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ‌ನಡೆಯುತ್ತಿದೆ. ವಾರಕ್ಕೊಮ್ಮೆ ರಾಜಕೀಯ ಮುಖಂಡರ ಸಭೆ ಕರೆಯುವಂತೆ ಸೂಚಿಸಲಾಗಿದೆ. ಪ್ರತಿ‌ ಕ್ಷೇತ್ರದ ಒಬ್ಬ ಮುಖಂಡರನ್ನು ಸಭೆಗೆ ಕರೆಯುವಂತೆ ಮನವಿ ಮಾಡಲಾಗಿದೆ. ವೆಬ್​ಸೈಟ್​ನಲ್ಲಿ 5 ಕ್ಷೇತ್ರವಾರು ಮತದಾರರ ಮಾಹಿತಿ ಪ್ರಕಟವಾಗುತ್ತದೆ. ಸಮಸ್ಯೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಏಜೆಂಟ್ ನೇಮಿಸಿದರೆ ಮತದಾರರ ಸಮಸ್ಯೆ ನಿವಾರಣೆಯಾಗಲಿದೆ. ಎಲ್ಲ ಬಿಎಲ್​ಒಗಳ ಮಾಹಿತಿ ವೆಬ್​ಸೈಟ್​ನಲ್ಲಿ ಪ್ರಕಟಿಸುತ್ತೇವೆ. ರಾಜಕೀಯ ಪಕ್ಷಗಳು ತಮ್ಮ ಇಮೇಲ್ ಐಡಿ ಕೊಟ್ಟಿದ್ದಾರೆ. ಪ್ರತಿ ವಾರದ ಮಾಹಿತಿ ಆಯಾ ರಾಜಕೀಯ ಪಕ್ಷಕ್ಕೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಬಳಕೆಯಾಗದ ಹಿನ್ನೆಲೆ ಇಂದಿರಾ ಮೊಬೈಲ್ ಕ್ಯಾಂಟೀನ್ ಮುಚ್ಚಲಾಗಿದೆ

ಬಳಕೆಯಾಗದ ಹಿನ್ನೆಲೆ ಇಂದಿರಾ ಮೊಬೈಲ್ ಕ್ಯಾಂಟೀನ್ ಮುಚ್ಚಲಾಗಿದೆ. ಶೆಫ್​ಟೆಕ್ ಕಂಪನಿಗಳು ಅಸಮಾಧಾನ ಕಡಿಮೆ‌ ಬಿಲ್ ನೀಡಲಾಗುತ್ತಿದೆ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಅದಮ್ಯ ಚೇತನ ಸಂಸ್ಥೆಗೆ ವಿಸ್ತರಿಸುವ ಕುರಿತಂತೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ