Bengaluru Water Cut: ಇಂದಿನಿಂದ ಮೂರು ದಿನ ಕಾವೇರಿ ನೀರು ಪೂರೈಕೆ ಸ್ಥಗಿತ

ಕಾವೇರಿ ನೀರು ಪೂರೈಕೆ ಬಂದ್: ಕಾವೇರಿ ನೀರು ಕನ್ನಡ ನಾಡಿನ ಜೀವನದಿ ಮಾತ್ರವಲ್ಲ, ಬೆಂಗಳೂರಿಗರ ಜೀವನಾಡಿಯೂ ಹೌದು. ಒಂದು ದಿನ ಕಾವೇರಿ ನೀರು ಬರಲ್ಲ ಅಂದರೆ ಪರದಾಟ ಹೇಳಲು ಸಾಧ್ಯವಿಲ್ಲ. ಇದೀಗ ಬೆಂಗಳೂರು ಜಲಮಂಡಳಿ ಜನರಿಗೆ ಬಿಗ್ ಶಾಕ್ ಕೊಟ್ಟಿದೆ. ಇಂದಿನಿಂದ ಮೂರು ದಿನ ಕಾವೇರಿ ನೀರು ಪೂರೈಕೆ ಬಂದ್ ಆಗುತ್ತಿದೆ. ಆದರೆ, ಇದಕ್ಕೆ ಕಾರಣವಿದೆ. ಮಾಹಿತಿ ಇಲ್ಲಿದೆ.

Bengaluru Water Cut: ಇಂದಿನಿಂದ ಮೂರು ದಿನ ಕಾವೇರಿ ನೀರು ಪೂರೈಕೆ ಸ್ಥಗಿತ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Sep 15, 2025 | 6:51 AM

ಬೆಂಗಳೂರು, ಸೆಪ್ಟೆಂಬರ್ 15: ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು (Cauvery Water) ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಕಾವೇರಿ ನೀರು ಸರಬರಾಜು ಮಾಡುವ ಪಂಪಿಂಗ್ ಸ್ಟೇಷನ್​ನಲ್ಲಿ ಕಾಮಗಾರಿ ನಡೆಯಲಿದೆ. ಹೀಗಾಗಿ, ಸೆಪ್ಟೆಂಬರ್ 17 ರ ವರೆಗೆ, ಅಂದರೆ ಮೂರು ದಿನ ಬೆಂಗಳೂರಿನ ಹಲವೆಡೆ ಕಾವೇರಿ ನೀರಿನ ಸರಬರಾಜಾಗುವುದಿಲ್ಲ. ಕಾವೇರಿ 5ನೇ ಹಂತದ ನಿರ್ವಹಣೆಗಾಗಿ ಕಾವೇರಿ ನೀರು ಬಂದ್ ಆಗಲಿದೆ. ಜನರು ಇಂದೇ ನೀರು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ (BWSSB) ಸಲಹೆ ನೀಡಿದೆ.

ನೀರು ಪೂರೈಕೆ ಸ್ಥಗಿತದ ಸಮಯ

ಸೆಪ್ಟೆಂಬರ್ 15, 16 ಹಾಗೂ 17 ರಂದು ಕಾವೇರಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಕಾವೇರಿ 5ನೇ ಹಂತದ ಪಂಪಿಂಗ್ ಸ್ಟೇಷನ್​ನಿಂದ ನೀರು ಪೂರೈಕೆ ಬಂದ್ ಆಗಲಿದೆ. ಸೆ. 15ರ ಮಧ್ಯರಾತ್ರಿ 1ರಿಂದ ಸೆ. 17ರ ಮಧ್ಯಾಹ್ನ 1 ಗಂಟೆವರೆಗೆ ಕಾವೇರಿ 5ನೇ ಹಂತದಲ್ಲಿ 60 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ . ಕಾವೇರಿ 1, 2, 3, 4ನೇ ಹಂತದಲ್ಲಿ 24 ಗಂಟೆ ನೀರು ಪೂರೈಕೆ ಸ್ಥಗಿತವಾಗಲಿದ್ದು, ಅಗತ್ಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು: ಒಂದು ತಿಂಗಳ ವಾಟರ್​​ ಬಿಲ್​ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ, ಪೋಸ್ಟ್‌ ವೈರಲ್​​

ಸಾರ್ವಜನಿಕರಿಂದ ಆಕ್ರೋಶ

ದಿಢೀರ್ ಆಗಿ 3 ದಿನ ಕಾವೇರಿ ನೀರು ಬಂದ್ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಮೂರು ದಿನ ನಗರವಾಸಿಗಳಿಗೆ ನೀರಿನ ಅಭಾವ ಎದುರಾಗಲಿದೆ. ಇದನ್ನೇ ವಾಟರ್ ಟ್ಯಾಂಕ್​ನನವರು ಅಸ್ತ್ರವಾಗಿಸಿಕೊಂಡು, ಡಬಲ್ ವಸೂಲಿ ಮಾಡುವ ಭೀತಿಯೂ ಜನರನ್ನು ಕಾಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ